ಪಿಎಸ್ಐ ಜಗದೀಶ್ ಹತ್ಯೆ ಮಾಡಿದ್ದ ತಂದೆ ಹಾಗು ಮಗನಿಗೆ ಶಿಕ್ಷೆ ಪ್ರಕಟವಾಗಿದೆ. ಬೆಂಗಳೂರು ಗ್ರಾಮಾಂತರ ಪಿಡಿಸಿ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ ಆಗಿದೆ. ಎ1 ಆರೋಪಿ ಮಧು ಅಲಿಯಾಸ್ ಗೊಣ್ಣೆ ಮಧುಗೆ ಏಳು ವರ್ಷ ಜೈಲು ಶಿಕ್ಷೆ ಹಾಗು ಒಂದು ಲಕ್ಷ ದಂಡ ವಿಧಿಸಲಾಗಿದೆ. ಎ2 ಆರೋಪಿ ಕೃಷ್ಣಪ್ಪ ಅಲಿಯಾಸ್ ಹರೀಶ್ ಬಾಬುಗೆ ಜೀವಾವಧಿ ಶಿಕ್ಷೆ ಜೊತೆಗೆ ಮೂರು ಲಕ್ಷ ದಂಡ ವಿಧಿಸಲಾಗಿದೆ. 2015 ಆಕ್ಟೋಬರ್‌ನಲ್ಲಿ ನಡೆದಿದ್ದ ಪಿಎಸ್ಐ ಜಗದೀಶ್ ಹತ್ಯೆ ಕೇಸ್.

ದೊಡ್ಡಬಳ್ಳಾಪುರ ಟೌನ್ ಠಾಣೆಯ ಪಿಎಸ್ಐ ಆಗಿದ್ದ ಜಗದೀಶ್, ಪ್ರಕರಣವೊಂದರಲ್ಲಿ ಆರೋಪಿಗಳ ಬಂಧನಕ್ಕೆ ತೆರಳಿದ್ದ ವೇಳೆ ನೆಲಮಂಗಲದ ಬಳಿ ಪಿಎಸ್‌ಐ ಜಗದೀಶ್ ಅವರನ್ನು ಹರೀಶ್ ಬಾಬು ಮತ್ತು ಆತನ ಮಗ ಮಧು ಹತ್ಯೆಗೈದಿದ್ದರು. ನೆಲಮಂಗಲ ಹೋಂಡಾ ಶೋರೂಂ ಬಳಿ ಪಿಎಸ್ಐ ಮೇಲೆ ಹಲ್ಲೆ ಮಾಡಿದ್ದರು. ರಸ್ತೆ ಪಕ್ಕದ ಚರಂಡಿಗೆ ಜಗದೀಶ್ ಅವರನ್ನ ತಳ್ಳಿದ್ದ ಆರೋಪಿಗಳು. ಆ ಬಳಿಕ ತನ್ನ ಬಳಿಯಿದ್ದ ಚಾಕುವಿನಿಂದ ಪಿಎಸ್ಐ ಜಗದೀಶ್‌ಗೆ ಇರಿದಿದ್ದರು.