ಹಿಂದೂ ಫೈರ್ ಬ್ರಾಂಡ್, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basana gowda patil yatnal) ವಿರುದ್ದ ತುಮಕೂರಿನಲ್ಲೂ (Tumkur) ಎಫ್ ಐ ಆರ್ (FIR) ದಾಖಲಾಗಿದೆ. ತುಮಕೂರು ನಗರ ಪೊಲೀಸರು ಶಾಸಕರ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಿಕೊಂದಿದ್ದಾರೆ.

ಶನಿವಾರ (ಸೆ.13) ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ,ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಪ್ರಚೋದನಕಾರಿ ಭಾಷಣ ಮಾಡಿದ ಆರೋಪವಿದೆ. ಆ ಮೂಲಕ ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಪೊಲೀಸ್ ಸಿಬ್ಬಂದಿ ರಘುನಾಥ್ ಕೊಟ್ಟ ದೂರಿನ ಮೇರೆಗೆ ಎಫ್ ಐ ಆರ್. ದಾಖಲಾಗಿದೆ.
ಈ ಸಂಬಂಧ ಮದ್ದೂರಿನಲ್ಲಿ ನನ್ನ ವಿರುದ್ದ ೭೦ ನೇ ಪ್ರಕರಣ ದಾಖಲಾಗಿದೆ. ತುಮಕೂರಿನಲ್ಲಿ ೭೧ ಪ್ರಕರಣ ದಾಖಲಾಗಬಹುದು ಎಂದು ಯತ್ನಾಳ್ ಹೇಳಿದ್ದರು. ಅದರಂತೆ ತುಮಕೂರು ನಗರ ಠಾಣೆಯಲ್ಲಿ ನಿನ್ನೆ ರಾತ್ರಿ ಪ್ರಕರಣ ದಾಖಲಾಗಿದೆ.