-ಕೃಷ್ಣಮಣಿ
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವುದಿಲ್ಲ ಎನ್ನುವುದು ಬಹುತೇಕ ಖಚಿತ ಆಗಿದೆ. ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗ್ತಿದೆ.
ಈ ನಡುವೆ ಪ್ರತಾಪ್ ಸಿಂಹ ಉಗ್ರರೂಪ ತಾಳಿದ್ದಾರೆ. 50 ವರ್ಷ ರಾಜಕೀಯದಲ್ಲಿ ಇದ್ದವರು, ಹೇಳಲು ಹೆಸರಿಲ್ಲದಂತೆ ಸಾಯ್ತಾರೆ, ಆದರೆ ನಾನು ಹಾಗಲ್ಲ. ನನ್ನದೇ ಹೊಸ ಪಡೆ ಕಟ್ತೀನಿ. ಹೊಸ ರಾಜಕಾರಣ ಮಾಡೋಣ. ನನಗೆ ಈಗಲೂ ವಿಶ್ವಾಸವಿದೆ. ಟಿಕೆಟ್ ಕೊಡ್ತಾರೆ ಎಂದಿದ್ದಾರೆ.
ಒಳ್ಳೇ ಕೆಲಸ ಮಾಡೋದೇ ನನ್ನ ದೌರ್ಬಲ್ಯನಾ ಎಂದಿರುವ ಪ್ರತಾಪ್ ಸಿಂಹ, ಎಸಿ ರೂಂನಲ್ಲಿರುವ ಯದುವೀರ್ ಜನರ ಮಧ್ಯೆ ಬಂದ್ರೆ ಬರಲಿ. ಅಭಿವೃದ್ಧಿ ಕೆಲಸಕ್ಕೆ ಮಹಾರಾಣಿ ಬಿಟ್ಟಿರ್ಲಿಲ್ಲ, ಈಗ ಸಾವಿರಾರು ಕೋಟಿ ಆಸ್ತಿನಾ ಜನರಿಗೆ ಬಿಡ್ತಾರೆ..! ಬಾಹುಬಲಿ ಸಿನಿಮಾದಲ್ಲಿ ನೋಡಿದ್ದೆ, ಈಗ ಜನರ ಹತ್ರ ರಾಜರು ಬರ್ತಿದ್ದಾರೆ. ಪಕ್ಷದ ಕಾರ್ಯಕ್ರಮ ನಡೆಯುತ್ತೆ. ಆಗ ರಾಜರು ಕೆಳಗೆ ಕೂರೋಕೆ ರೆಡಿ ಇರ್ತಾರೆ. ರಾಜರು ಸ್ಟೇಷನ್‌ಗೂ ಹೋಗ್ತಾರೆ, ಕಸ ಕ್ಲೀನ್ ಮಾಡಿಸಲೂ ರಾಜರು ಬರ್ತಾರೆ ಎಂದು ವ್ಯಂಗ್ಯ ಮಾತುಗಳಲ್ಲಿ ತಿವಿದಿದ್ದಾರೆ.
ಆದರೆ ಸಂಜೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಡಾ. ರಾಧಾಮೋಹನ್ ದಾಸ್ ಭೇಟಿ ಮಾಡಿ ಮಾತನಾಡಿದ್ರು. ಟಿಕೆಟ್ ಸಿಗದಿರುವ ಬಗ್ಗೆ ಚರ್ಚೆ ಮಾಡಿದರು ಎನ್ನಲಾಗಿದೆ. ಆ ಬಳಿಕ ಪ್ರತಾಪ್ ಸಿಂಹ X ನಲ್ಲಿ ಪೋಸ್ಟ್ ಮಾಡಿ, ಬಿಜೆಪಿ ಟಿಕೆಟ್ ಸಿಗುತ್ತೆ.. ಸಿಗದಿದ್ರೆ ಪಕ್ಷದ ಕೆಲಸ ಮಾಡ್ತೀನಿ, ಮೋದಿ ಮುಖ್ಯ ನಾನೇನು ಅಲ್ಲ ಎಂದಿದ್ದಾರೆ. ನನಗೆ ಟಿಕೆಟ್ ಸಿಗುತ್ತೆ ಅಂತ ಮತ್ತೆ ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಾಲಿ ಸಂಸದ ಪ್ರತಾಪಸಿಂಹಗೆ ಟಿಕೆಟ್ ಮಿಸ್ ಆಗುವ ಆತಂಕ ಹೆಚ್ಚಾಗಿದೆ.
ಇದೇ ಕಾರಣಕ್ಕೆ ಇಂದು ಪ್ರತಾಪ್ ಸಿಂಹ ಅಭಿಮಾನಿಗಳು ಇಂದು ಮೈಸೂರಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಮೈಸೂರಿನ ಹಿನಕಲ್ ಫ್ಲೈ ಓವರ್ ಬಳಿ ಬೆಳಗ್ಗೆ 11ಕ್ಕೆ ಧರಣಿ ಮಾಡಲು ನಿರ್ಧಾರ ಮಾಡಿದ್ದಾರೆ. ಆದರೆ ಟಿಕೆಟ್ ಸಿಗಲ್ಲ ಅನ್ನೋದು ಕೂಡ ಖಚಿತ ಆಗ್ತಿದೆ ಎನ್ನಬಹುದು.