
ಪಹಲ್ಲಾಮ್ ದಾಳಿ ಖಂಡಿಸಿ ನೆದರ್ಲ್ಯಾಂಡ್ ನಲ್ಲಿ ಕನ್ನಡಿಗಾರಾದ ಜಯಪ್ರಕಾಶ್ , ಅಶೋಕ್ ಹಟ್ಟಿ, ಸುರೇಶ ಬೆಕಮ್ ಹಾಗು ನಾನಾ ರಾಜ್ಯದ ಭಾರತೀಯರು ಮೌನರ್ಚನೆ ಮೂಲಕ, ಶಾಂತಿಇಂದ ಪ್ರತಿಭಟನೆ ಮಾಡಿದರು ಮತ್ತು ಪಹಲ್ಲಾಮ್ ದಾಳಿಯ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಪ್ರತಿಭಟನಾಕಾರರು ಭಾರತವನ್ನು ಬೆಂಬಲಿಸುವ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಹಿಡಿದಿದ್ದರು, ಮತ್ತು ಭಾರತೀಯ ಧ್ವಜಗಳನ್ನು ಬೀಸಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕನ್ನಡಿಗ ಅಶೋಕ ಹಟ್ಟಿ ಇದು ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆದ ಮಾರಣಾಂತಿಕ ದಾಳಿಗಳಲ್ಲಿ ಒಂದಾಗಿದೆ. ಪ್ರತಿಭಟನಾಕಾರರಲ್ಲಿ ಒಬ್ಬರು ಭಾರತಿಯರು, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಎಂಬ ಫಲಕವನ್ನು ಹಿಡಿದಿದ್ದರು.

ಪಾಕಿಸ್ತಾನವು ಈ ಹಿಂದೆಯೂ ಅನೇಕ ದಾಳಿಗಳನ್ನು ನಡೆಸಿದೆ, ನಾವು ಪುಲ್ವಾಮಾ, ಮುಂಬೈ ದಾಳಿ ಮತ್ತು ಈಗ ಪಹಲ್ಲಾಮ್ ಭಯೋತ್ಪಾದಕ ದಾಳಿಯನ್ನು ನೋಡಿದ್ದೇವೆ. ನಾವು ಯಾವುದೇ ಧರ್ಮ ಅಥವಾ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವುದಿಲ್ಲ. ನಾವು ಪಾಕಿಸ್ತಾನಕ್ಕೆ ಸಂದೇಶವನ್ನು ಕಳುಹಿಸಲು ಬಯಸುತ್ತೇವೆ ಎಂದು ಕನ್ನಡಿಗಾರರಾದ ಅಶೋಕ್ ಹಟ್ಟಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಜನರ ಕುಟುಂಬಗಳಿಗೆ ನಮ್ಮ ಬೆಂಬಲ ಮತ್ತು ಒಗ್ಗಟ್ಟನ್ನು ತೋರಿಸಲು ನಾವು ಇಲ್ಲಿದ್ದೇವೆ … ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ಉತ್ತರ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಪ್ರತಿಭಟನೆಯಲ್ಲಿ ಮುಂದಾಳತ್ವ ವಹಿಸಿದ ಜಯಪ್ರಕಾಶ್ ಹೇಳಿದರು.
			
                                
                                
                                