ಕರ್ನಾಟಕ ಕರಾವಳಿ (Karnataka costal) ಭಾಗದಲ್ಲಿ ದೀಪಾವಳಿಯ (Deepavali) ಹಿನ್ನಲೆ ಮತ್ತೆ ಧರ್ಮ ದಂಗಲ್ ಶುರುವಾಗಿದೆ. ಹೀಗಾಗಿ ಹಲಾಲ್ (Halal) ಮುಕ್ತ ದೀಪಾವಳಿಗೆ ಹಿಂದೂ ಸಂಘಟನೆ ಕರೆ ಕೊಟ್ಟಿದೆ.
ದೀಪಾವಳಿಯನ್ನ ರಾಷ್ಟ್ರದ್ರೋಹಿ ಹಲಾಲ್ ಮುಕ್ತವಾಗಿ ಆಚರಿಸಿ ಎಂದು ಪುತ್ತೂರಿನಲ್ಲಿ (Puttur) ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಅಭಿಯಾನ ಆರಂಭಿಸಿದೆ. ಭಾರತದಲ್ಲಿ ಇಸ್ಲಾಂ (Islam) ಮೇಲಾಧಾರಿತ ಹಲಾಲ್ ಆರ್ಥಿಕ ವ್ಯವಸ್ಥೆ ನಿರ್ಮಿಸಲು ಪ್ರಯತ್ನಿಸಲಾಗ್ತಿದೆ ಇದನ್ನು ವಿರೋಧಿಸಿ ಈ ಬಾರಿಯ ದೀಪಾವಳಿ ಆವರಣೆಗೆ ಕರೆ ನೀಡಲಾಗಿದೆ.
ಹೀಗಾಗಿ ದೀಪಾವಳಿ ಹಬ್ಬಕ್ಕೆ ಖರೀದಿಗೆ ಮುಂದಾಗುವ ಹಿಂದೂಗಳೂ ಹಲಾಲ್ ಮೊಹರು ಇರುವ ವಸ್ತುಗಳನ್ನು ಖರೀದಿಸದಂತೆ ಕರೆ ನೀಡಲಾಗಿದೆ.