ಮೈಸೂರು : ಸಿಎಂ ಸಿದ್ದರಾಮಯ್ಯ (Siddaramiah) ಬಗ್ಗೆ ನಾಲಿಗೆ ಹರಿ ಬಿಟ್ಟಿದ್ದ ಅನಂತ್ ಕುಮಾರ್ ಹೆಗಡೆ (Ananth kumar hegde) ಭಾವಚಿತ್ರಕ್ಕೆ ಬೆಂಕಿ ಹಾಕಿ, ಚಪ್ಪಲಿಯಲ್ಲಿ ತುಳಿದು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಮ ಮಂದಿರ ಉದ್ಘಾಟನೆಗೆ ನಾನು ಹೋಗಲ್ಲ ಯಾವ ರಾಮ ಮಂದಿರ (Ramamandira) ಎಂದಿದ್ದ ಸಿಎಂ ವಿರುದ್ಧ ಏಕವಚನದಲ್ಲಿ ಅನಂತ್ ಕುಮಾರ್ ಹೆಗ್ಡೆ ವಾಗ್ದಾಳಿ ನಡೆಸಿದ್ದರು. ನೀನು ಬರದಿದ್ದರೂ ರಾಮ ಮಂದಿರ ಆಗತ್ತೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದರು.
ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಕಾಂಗ್ರೆಸ್ (Congress) ನಾಯಕರು ಕೆಂಡ ಕಾರಿದ್ದರು ಅಲ್ಲದೆ ಎಕ್ಸ್ ನಲ್ಲಿ ಟೀಕಾ ಪ್ರಹಾರವನ್ನು ನಡೆಸಿದ್ದರು. ಇದೀಗ ಮೈಸೂರಿನಲ್ಲಿ ಕೂಡ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಪ್ರತಿಭಟನೆ ಮೂಲಕ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಮುಖಂಡರು ಎಚ್ಚರಿಕೆ ನೀಡಿದ್ದು ಸಿದ್ದರಾಮಯ್ಯ ವಿರುದ್ಧ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಎಚ್ಚರಿಸಿದ್ದಾರೆ