ವಿಜಯಪುರ : ಜಮೀನು ವ್ಜಾಜ್ಯದ ಹಿನ್ನೆಲೆಯಲ್ಲಿ ಆರು ಜನರಿಗೆ ಗುಂಡಿಟ್ಟು ಬರ್ಬರ ಕೊಲೆ ಮಾಡಲಾಗಿದೆ. ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ಈ ಘಟನೆ ನಡೆದಿದ್ದು, 2 ಕುಟುಂಗಳ ನಡುವಿನ ಭೂ ವಿವಾದವು ಇದೀಗ 6 ಕೊಲೆಯಲ್ಲಿ ಅಂತ್ಯವಾಗಿದೆ.
ನಿರಾಳೆ ಹಾಗೂ ಗೋಳಗಿ ಕುಟುಂಬದ ಜಮೀನಿಗೆ ಸಂಬಂಧಿಸಿದ ತಕರಾರು ಮುಂದುವರೆದಿತ್ತು. ಆದರೆ ನಿರಾಳೆ ಕುಟುಂಬದ ಮೇಲೆ ಗೋಳಗಿ ಕುಟುಂಬದವರಿಂದ ಭೀಕರ ಹತ್ಯೆ ನಡೆಸಲಾಗಿದೆ.
ಎರಡು ಕುಟುಂಬಗಳ ಗಲಾಟೆಯಯಲ್ಲಿ ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ, ಶಬ್ಬಿರ್ ನದಾಫ್ ಹತ್ಯೆಯಾಗಿದ್ದಾರೆ.
ಸೇರಿದಂತೆ 6 ಜನರ ಮೇಲೆ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳಿಂದ ಗೋಳಗಿ ಕುಟುಂಬ ಕ್ರೌರ್ಯ ಮರೆದಿದೆ. ಅಪ್ಪುಗೌಡ ಹಾಗೂ ತಂಡದಿಂದ ಈ ಬೀಕರ ಕೊಲೆಗಳನ್ನು ಮಾಡಲಾಗಿದೆ ಎಂಬುವುದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.





