• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

“ಅಹಿಂದ ನಾಯಕತ್ವಕ್ಕೆ ಅನ್ಯಾಯ, 2028ರಲ್ಲಿ ಕಾಂಗ್ರೆಸ್‌ಗೆ ತೀವ್ರ ಪರಿಣಾಮ” ಎಂದ ಪರಿಷತ್ ಸದಸ್ಯ

ಪ್ರತಿಧ್ವನಿ by ಪ್ರತಿಧ್ವನಿ
May 29, 2026
in Uncategorized
0
“ಅಹಿಂದ ನಾಯಕತ್ವಕ್ಕೆ ಅನ್ಯಾಯ, 2028ರಲ್ಲಿ ಕಾಂಗ್ರೆಸ್‌ಗೆ ತೀವ್ರ ಪರಿಣಾಮ” ಎಂದ ಪರಿಷತ್ ಸದಸ್ಯ
Share on WhatsAppShare on FacebookShare on Telegram

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ನಡುವೆಯೇ, ಬೆಳಗಾವಿಯಲ್ಲಿ ಪರಿಷತ್ ಸದಸ್ಯ ಲಖನ್ ಜಾರ್ಕಿಹೊಳಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ರಾಜೀನಾಮೆ ಕಾಂಗ್ರೆಸ್ ಪತನಕ್ಕೆ ಕಾರಣವಾಗುತ್ತದೆ. ಪಕ್ಷ ಅಧಃಪತನದ ದಾರಿಗೆ ಹೋಗುತ್ತದೆ” ಎಂದು ಎಚ್ಚರಿಸಿದರು.

ADVERTISEMENT
Karnataka CM Change: ಬೆಂಗಳೂರಿಗೆ ರಾಜ್ಯಪಾಲರ ವಾಪಸಾತಿ ಒಂದು ಅಥವಾ 2 ದಿನ ವಿಳಂಬ ಸಾಧ್ಯತೆ! #pratidhvani

ಮೂರು ವರ್ಷಗಳ ಕಾಲ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಮತೋಲನದಲ್ಲಿಟ್ಟಿದ್ದವರು ಸಿದ್ದರಾಮಯ್ಯ ಎಂದು ಹೇಳಿದ ಲಖನ್ ಜಾರಕಿಹೊಳಿ, ಚುನಾವಣೆ ವೇಳೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಡಚಣೆ ಆಗದಂತೆ ಜಾರಿಗೊಳಿಸಿದ್ದು ಅವರ ನಾಯಕತ್ವದಿಂದಲೇ ಸಾಧ್ಯವಾಯಿತು ಎಂದರು.

“ಇನ್ಮುಂದೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ನಿಲ್ಲುವ ಪರಿಸ್ಥಿತಿ ಬರುತ್ತದೆ. ಸರ್ಕಾರಿ ನೌಕರರಿಗೆ ಸಂಬಳ ನೀಡುವುದೂ ಕಷ್ಟವಾಗಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗದ ಹಾಗೂ ಕೆ ಸಿ ವೇಣುಗೋಪಾಲ ವಿರುದ್ಧವೂ ಲಖನ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

Big Twist In Siddaramaiaha Resignation : ಸಿದ್ದರಾಮಯ್ಯ ರಾಜೀನಾಮೆ, ಸಚಿವರ ಆಕ್ರೋಶ..! #pratidhvani

“ವೇಣುಗೋಪಾಲ್ ಮತ್ತು ಸುರ್ಜೇವಾಲಾಗೆ ಕನ್ನಡ ಗೊತ್ತಿಲ್ಲ, ರಾಜ್ಯದ ಸಮಸ್ಯೆಗಳ ಅರಿವು ಇಲ್ಲ. ಬೆಂಗಳೂರನ್ನು ಬಿಟ್ಟರೆ ಬೇರೆ ಊರುಗಳೇ ಗೊತ್ತಿಲ್ಲ. ಇಂಥವರು ಸಿದ್ದರಾಮಯ್ಯಗೆ ರಾಜೀನಾಮೆ ಕೊಡಲು ಹೇಳುತ್ತಿದ್ದಾರೆ” ಎಂದು ಟೀಕಿಸಿದರು.ಸಿದ್ದರಾಮಯ್ಯ ಕುರುಬ ಸಮುದಾಯದ ದೊಡ್ಡ ನಾಯಕ ಹಾಗೂ ರಾಜ್ಯದ ಮಾಸ್ ಲೀಡರ್ ಎಂದು ಬಣ್ಣಿಸಿದ ಅವರು, “ವೀರೇಂದ್ರ ಪಾಟೀಲರಿಗೆ ಆಗಿದ್ದ ಅನ್ಯಾಯವೇ ಇಂದು ಕುರುಬ ಸಮಾಜಕ್ಕೂ ಆಗಿದೆ” ಎಂದು ಹೇಳಿದರು.

 

“2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 40 ಸ್ಥಾನಗಳನ್ನೂ ಗೆಲ್ಲಲು ಸಾಧ್ಯವಾಗದು. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿ ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗಬೇಕಿತ್ತು” ಎಂದು ಅಭಿಪ್ರಾಯಪಟ್ಟರು.ಡಿಸಿಎಂ ಡಿ‌ಕೆ ಶಿವಕುಮಾರ್ ಕುರಿತು ಮಾತನಾಡಿದ ಅವರು, “ಡಿಕೆ ಶಿವಕುಮಾರ್ ಈಗಾಗಲೇ ಡಿಸಿಎಂ ಆಗಿದ್ದರು. ಹಿರಿಯರಿಗೆ ಸಚಿವ ಸ್ಥಾನಗಳೂ ಇದ್ದವು. ಆದರೂ ಹೈಕಮಾಂಡ್ ಜೇನುಗೂಡಿಗೆ ಕೈ ಹಾಕಿದೆ” ಎಂದು ವ್ಯಂಗ್ಯವಾಡಿದರು.

ಮುಂದುವರೆದು, “ಸಿದ್ದರಾಮಯ್ಯ ಅವರ ಕಣ್ಣೀರು 2028ರಲ್ಲಿ ಜ್ವಾಲಾಮುಖಿಯಂತೆ ಸ್ಫೋಟಿಸಲಿದೆ. ಯಡಿಯೂರಪ್ಪರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ ಬಳಿಕ ಬಿಜೆಪಿಯ ಪರಿಸ್ಥಿತಿ ಏನಾಯಿತೋ, ಅದೇ ಸ್ಥಿತಿ ಕಾಂಗ್ರೆಸ್‌ಗೂ ಎದುರಾಗಲಿದೆ” ಎಂದು ಹೇಳಿದರು.

Siddaramaiah wishes Dk Shivakumar : ನೀನು ಚೆನ್ನಾಗಿ ರಾಜ್ಯದ ಸೇವೆ ಮಾಡಬೇಕು..! #siddaramaiah #pratidhvani

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಅಹಿಂದ ಮತಗಳೇ ಕಾರಣ ಎಂದು ಹೇಳಿದ ಅವರು, “ಸಿದ್ದರಾಮಯ್ಯಗೆ ಆಗಿರುವ ಅನ್ಯಾಯಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ” ಎಂದು ಎಚ್ಚರಿಕೆ ನೀಡಿದರು.ಕೊನೆಯಲ್ಲಿ ವ್ಯಂಗ್ಯವಾಗಿ ಮಾತನಾಡಿದ ಲಖನ್ ಜಾರಕಿಹೊಳಿ, “ವೇಣುಗೋಪಾಲ್ ಮತ್ತು ಸುರ್ಜೇವಾಲಾ ದೊಡ್ಡ ನಾಯಕರು. ಇವರೇ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರು. ಸಿದ್ದರಾಮಯ್ಯ ಪಾತ್ರವೇ ಇರಲಿಲ್ಲ ಅನ್ನಿಸುವಂತಾಗಿದೆ” ಎಂದು ಟೀಕಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: #belagavi#CMResignation#CongressCrisis#CongressInternalWar#dkshivakumar#KarnatakaPolitics#kcvenugopal#KurubaCommunity#LakhanJarkiholi#PoliticalStorm#siddaramaiahAhindabreakingnewscongresshighcommandkarnatakanewspratidavanisurjewala
Previous Post

ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರವಾಗುತ್ತಾ? ರಾಜ್ಯಪಾಲರ ಕಚೇರಿ ಹೇಳಿದ್ದೇನು?

Next Post

ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ; ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ವೇದಿಕೆ ಸಿದ್ಧವೇ?

Related Posts

‘ಟಾಕ್ಸಿಕ್’ ಬಗ್ಗೆ ಯಶ್ ಅಭಿಮಾನಿಗಳಿಗೆ ನಿರ್ಮಾಪಕರಿಂದ ಬಿಗ್ ಅಪ್‌ಡೇಟ್!
Uncategorized

‘ಟಾಕ್ಸಿಕ್’ ಬಗ್ಗೆ ಯಶ್ ಅಭಿಮಾನಿಗಳಿಗೆ ನಿರ್ಮಾಪಕರಿಂದ ಬಿಗ್ ಅಪ್‌ಡೇಟ್!

by ಪ್ರತಿಧ್ವನಿ
July 22, 2026
0

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್...

Read moreDetails
‘ಸಂಸತ್ ಚಲೋ’ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್: ಜಂತರ್ ಮಂತರ್‌ನಲ್ಲಿ ಭುಗಿಲೆದ್ದ ಆಕ್ರೋಶ

‘ಸಂಸತ್ ಚಲೋ’ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್: ಜಂತರ್ ಮಂತರ್‌ನಲ್ಲಿ ಭುಗಿಲೆದ್ದ ಆಕ್ರೋಶ

July 20, 2026
ಮಣಿಪುರದಲ್ಲಿ ಎಸ್ಐಆರ್-ಹೊರಗಿಡುವಿಕೆಯ ದಾರಿ

ಮಣಿಪುರದಲ್ಲಿ ಎಸ್ಐಆರ್-ಹೊರಗಿಡುವಿಕೆಯ ದಾರಿ

July 16, 2026
ಪೊಲೀಸ್ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ: ಪೊಲೀಸ್ ಹುದ್ದೆಗಳ ನೇಮಕಾತಿ ಬಗ್ಗೆ ಗೃಹ ಸಚಿವರ ಮಹತ್ವದ ಮಾಹಿತಿ

ಪೊಲೀಸ್ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ: ಪೊಲೀಸ್ ಹುದ್ದೆಗಳ ನೇಮಕಾತಿ ಬಗ್ಗೆ ಗೃಹ ಸಚಿವರ ಮಹತ್ವದ ಮಾಹಿತಿ

July 3, 2026
Breaking: ಬೆಂಗಳೂರಿನಲ್ಲಿ ದರ್ಶನ್ ಪುತ್ರನ ಕಾರು ಅಪಘಾತ; ಸಾರ್ವಜನಿಕರ ಆಕ್ರೋಶ

ಜುಲೈ 1ರಿಂದ ಪಾಸ್‌ಪೋರ್ಟ್ ಶುಲ್ಕ ಏರಿಕೆ; ಅರ್ಜಿ ಸಲ್ಲಿಸುವವರಿಗೆ ಹೆಚ್ಚುವರಿ ಹೊರೆ

June 25, 2026
Next Post
ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ದೆಹಲಿ ಸಭೆ ಬಳಿಕ ಕಾಂಗ್ರೆಸ್‌ನಲ್ಲಿ ಕುತೂಹಲ

ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ; ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ವೇದಿಕೆ ಸಿದ್ಧವೇ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada