ಮೈಸೂರಿನ ಉದಯಗಿರಿಯಲ್ಲಿ ಪೊಲೀಸ್ ಠಾಣೆ ಮೇಲೆ (Mysuru udayagiri riot case) ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Promod mutalik) ಮಾತನಾಡಿದ್ದಾರೆ. ಉದಯಗಿರಿಯಲ್ಲಿ ಈ ರೀತಿಯ ಪ್ರಕರಣ ಮೊದಲನೇದೂ ಅಲ್ಲ, ಕೊನೆಯದ್ದೂ ಅಲ್ಲ ಎಂದಿದ್ದಾರೆ.

ಇಲ್ಲಿ ಮುಸ್ಲಿಮರು ನಿರಂತರವಾಗಿ ಗಲಾಟೆ ಮಾಡಿಕೊಂಡೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ರಾಜಕಾರಣಿಗಳ ತುಷ್ಠೀಕರಣ ಎಲ್ಲಿಯವರೆಗೆ ನಿಲ್ಲಲ್ಲವೋ? ಅಲ್ಲಿ ತನಕ ಹೀಗೆ ಆಗುತ್ತವೆ.ಈ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಮಾಡ್ತಿರುವ ವಿಚಾರ ಗೊತ್ತಾಗಿದೆ.ಸಿಎಂ ಸಭೆ ಮಾಡ್ತಿರುವುದೇಕೆ? ಆರೋಪಿಗಳನ್ನು ಬಚಾವ್ ಮಾಡಲೆಂದಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಮುಕ್ತ ಅವಕಾಶ ಕೊಡಿ.
ಇನ್ನೇಕೆ ಸಭೆ ಮಾಡ್ತಿರಿ ಎಂದು ಅಸಮಾಧಾನ ಹೊರ ಹಾಕಿದ ಮುತಾಲಿಕ್,ಪ್ರಕರಣ ಸಂಬಂಧ ಶಾಸಕ ತನ್ವೀರ್ ಸೇಠ್ ನೀಡಿದ ಪ್ರತಿಕ್ರಿಯೆ ಗಮನಿಸಿದ್ದೇನೆ.ಪೊಲೀಸರು ತಡ ಮಾಡಿದ್ದೇ ಈ ಘಟನೆಗೆ ಕಾರಣ ಎಂದಿದ್ದಾರೆ.ದೇಶದಲ್ಲಿ ಸಂವಿಧಾನ ಇಲ್ವಾ? ಕೋರ್ಟ್ ಇಲ್ವಾ? ಇದೇನು ಪಾಕಿಸ್ತಾನ, ಅಪಘಾನಿಸ್ಥಾನವಲ್ಲ ಎಂದಿದ್ದಾರೆ.