ಕಳೆದ ಮೂರು ನಾಲ್ಕು ದಿನಗಳಿಂದ ಕನ್ನಡ ಚಿತ್ರರಂಗದ ಹಿರಿಯ ಇಬ್ಬರು ಹಿರಿಯ ನಿರ್ಮಾಪಕರು ಮತ್ತು ನಟ ಕಿಚ್ಚ ಸುದೀಪ್ ಅವರ ನಡುವೆ ನಡೆಯುತ್ತಿದ್ದ ಜಟಪತಿ ಈಗ ತಾರಕಕ್ಕೇರುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. ಕಿಚ್ಚ ಸುದೀಪ್ ಹಣ ಪಡೆದು ಸಿನಿಮಾ ಮಾಡಿಕೊಡದೆ ಸತಾಯಿಸುತ್ತಿದ್ದಾರೆ ಎಂದು ಎಂ.ಎನ್. ಕುಮಾರ್ ಅವರು ಗಂಭೀರವಾದ ಆರೋಪವನ್ನು ಮಾಡಿದ್ದರು
ಇದಾದ ಬಳಿಕ ಹುಚ್ಚ ಚಿತ್ರದ ನಿರ್ಮಾಪಕರಾದ ರೆಹಮಾನ್ ಅವರು ಕೂಡ ನಟ ಕಿಚ್ಚ ಸುದೀಪ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ರು ಪ್ರಮುಖವಾಗಿ ಸುದೀಪ ಅವರ ಮಾತು ಕೇಳಿ ಕೆಲ ಹಿಂದಿ ಚಿತ್ರಗಳ ರೈಟ್ಸ್ ಖರೀದಿಸಿದೆ ಆದರೆ ಆ ಸಿನಿಮಾಗಳ ರೈಟ್ಸ್ ಖರೀದಿಸಿದ ನಂತರ ಸುದೀಪ್ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಹುಚ್ಚ ಸಿನಿಮಾದ ನಿರ್ಮಾಪಕ ರಹಮಾನ್ ಬೇಸರವನ್ನ ವ್ಯಕ್ತಪಡಿಸಿದ್ದರು
ಇನ್ನು ಈ ಸಂಬಂಧ ನಟ ಕಿಚ್ಚ ಸುದೀಪ್ ಅಭಿಮಾನಿಗಳು ನಿರ್ಮಾಪಕ ಎಂ.ಎನ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಎಂದು ಪ್ರತಿಭಟನೆಯನ್ನು ನಡೆಸಿದ್ದಾರೆ, ಚಲನಚಿತ್ರ ವಾಣಿಜ್ಯ ಮಂಡಳಿ ಸಮೀಪ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಮೀಪದಲ್ಲಿ ಕಿಚ್ಚನ ಅಭಿಮಾನಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ.
ಇನ್ನು ಈ ಪ್ರತಿಭಟನೆಯ ವೇಳೆ ನಿರ್ಮಾಪಕರಾದ ಪ್ರವೀಣ್ ಕುಮಾರ್ ಗಣೇಶ್ ಅವರ ಬ್ಯಾನರ್ ತಂದು ರಸ್ತೆಯ ಮಧ್ಯದಲ್ಲಿ ಚಪ್ಪಲಿ ಹೊಡೆದು ಧಿಕ್ಕಾರವನ್ನ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಏನು ಈ ಕುರಿತು ಆಕ್ರೋಶಗೊಂಡಿರುವ ಕಿಚ್ಚನ ಅಭಿಮಾನಿಗಳು ಆರೋಪ ಮಾಡಿರುವ ಎಲ್ಲ ನಿರ್ಮಾಪಕರಗಳು ತಮ್ಮದು ಸುಳ್ಳು ಆರೋಪ ಎಂದು ಒಪ್ಪಿಕೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ ಇದರ ಜೊತೆಗೆ ನಟ ಕಿಚ್ಚ ಸುದೀಪ್ ಅವರಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಡವನ್ನು ಹಾಕಿದ್ದಾರೆ.
ಪುಟ್ಟರಿಯಾಗಿ ಇದೀಗ ನಿರ್ಮಾಪಕ ಎಂ ಎನ್ ಕುಮಾರ್ ಹುಟ್ಟು ಹಾಕಿರುವ ಈ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಸಾಧ್ಯತೆ ಇದಕ್ಕೆ ಮುಂದಿನ ದಿನಗಳಲ್ಲಿ ಸುದೀಪ್ ಯಾವ ರೀತಿಯಾದ ಹೆಜ್ಜೆಯನ್ನು ಇಡಲಿದ್ದಾರೆ ಅನ್ನೋದನ್ನ ಕಾದುನೋಡಬೇಕಾಗಿದೆ