ವಿವೋ ಪ್ರೊ ಕಬಡ್ಡಿ ಸೆಮಿಫೈನಲ್ನಲ್ಲಿ ಇಂದು ಬೆಂಗಳೂರು ಬುಲ್ಸ್ ತಂಡವು ದಬಾಂಗ್ ಡೆಲ್ಲಿ ತಂಡದ ಸವಾಲನ್ನು ಎದುರಿಸುತ್ತಿದ್ದು ಇಂದಿನ ಪಂದ್ಯವನ್ನು ಜಯಿಸುವ ಮೂಲಕ ಫೈನಲ್ಗೇರಲು ಎರಡು ತಂಡಗಳು ಉತ್ಸುಕವಾಗಿವೆ.
ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳೆರಡರಲ್ಲೂ ಉತ್ತಮ ರೇಡರ್ಗಳು ಹಾಗೂ ಡಿಫರೆಂಡರ್ಗಳಿದ್ದು ಇಂದಿನ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಅದರಲ್ಲೂ ಬೆಂಗಳೂರು ಬುಲ್ಸ್ ಫುಲ್ ಚಾರ್ಜ್ ಆಗಿದ್ದ ಪಂದ್ಯವನ್ನು ಗೆಲ್ಲುವ ಹಾಟ್ ಫೇವರೀಟ್ ತಂಡವಾಗಿದೆ.
ರೇಡಿಂಗ್ನಲ್ಲಿ ಹೆಚ್ಚಾಗಿ ಪವನ್ಕುಮಾರ್ ಶೆರಾವತ್ ಅವರನ್ನೇ ನೆಚ್ಚಿಕೊಂಡಿದ್ದರೂ ಕೂಡ ಅವರಿಗೆ ಭರತ್ ಹಾಗೂ ಚಂದ್ರನ್ ರಂಜಿತ್ ಅವರು ಉತ್ತಮ ಸಾಥ್ ನೀಡುತ್ತುದ್ದಾರೆ. ರೇಡಿಂಗ್ನಷ್ಟೇ ಡಿಫೆಂಡಿಗ್ನಲ್ಲೂ ಬಲಿಷ್ಠವಾಗಿರುವ ಬುಲ್ಸ್ ಪಡೆಗೆ ಮಹೇಂದರ್, ಸೌರಭ್ ನಂದಾಲ್, ಅಮನ್, ಜೈದೀಪ್ ಅವರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿಸಿದ್ದ ಬೆಂಗಳೂರು ಬುಲ್ಸ್ ತಂಡ ಇಂದು ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡವನ್ನು ಎದುರಿಸಲಿದೆ. ಫೈನಲ್ ಪಂದ್ಯವು ಫೆಬ್ರವರಿ 25 ರಂದು ನಡೆಯಲಿದೆ.
ಫೆ.23ರ ಸೆಮಿಫೈನಲ್ಸ್ ಪಂದ್ಯಗಳ ವಿವರ:
• ಬೆಂಗಳೂರು ಬುಲ್ಸ್ – ದಬಾಂಗ್ ಡೆಲ್ಲಿ, ರಾತ್ರಿ 8.30ಕ್ಕೆ
ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್, ಹಾಟ್ಸ್ಟಾರ್