ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾಕಾರರ ಮೇಲೆ ಕಾರು ಓಡಿಸಿದ ವಿಡಿಯೋ ತುಣುಕನ್ನ ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿ ಮೋದಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಉದ್ದೇಶಿಸಿ ಟ್ವೀಟ್ ಮಾಡಿ, “ತಮ್ಮ ಸರ್ಕಾರ ಯಾವುದೇ ಆದೇಶ ಅಥವಾ FIR ಇಲ್ಲದೆ ಕಳೆದ 28 ಗಂಟೆಗಳ ಕಾಲ ನನ್ನನ್ನು ಬಂಧನದಲ್ಲಿರಿಸಿದೆ ಎಂದು ಹೇಳಿದ್ದಾರೆ. ರೈತರ ಮೇಲೆ ದಾಳಿ ನಡೆಸಿದವರನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ” ಎಂದು ಕೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ, (social media) ಈ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಚರ್ಚೆಯಾಗುತ್ತಿದೆ. ಮೋದಿ ಮತ್ತು ಯೋಗಿ ಸರ್ಕಾರ ವಿರುದ್ಧ ಹರಿಹಯ್ದಿದ್ದಾರೆ.
ಭಾನುವಾರ ಲಖೀಂಪುರ್ ಖೇರಿಯಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಒಡೆತನದ ಬೆಂಗಾವಲು ಕಾರು ಪ್ರತಿಭಟನಾ ನಿರತ ರೈತರ ಮೇಲೆ ಏಕಾಏಕಿ ಚಲಾಯಿಸಲಾಗಿತ್ತು ಈ ಘಟನೆಯಲ್ಲಿ ನಾಲ್ಕು ಜನ ರೈತರು ಮೃತಪಟ್ಟಿದರು. ಘಟನೆಯ ನಂತರ ದೇಶಾದಂತ್ಯ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಭಾನುವಾರ ಹಿಂಸಾಚಾರದಲದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಲು ಉತ್ತರ ಪ್ರದೇಶದ ಲಖಿಂಪುರ್ ಖೇರಿಗೆ ತೆರಳುತ್ತಿದ್ದಾಗ ಕಾಂಗ್ರೆಸ್ ಪಕ್ಷದ ಮುಖಂಡೆ ಪ್ರಿಯಾಂಕ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಕಾನೂನು ತಜ್ಞ ದೀಪೇಂದ್ರ ಸಿಂಗ್ ಹೂಡಾ ಮತ್ತು ಇತರರನ್ನು ಸೋಮವಾರ ಬೆಳಿಗ್ಗೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು.