ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ವಾಗ್ದಾಳಿ ಮುಂದುವರಿದಿದ್ದು, ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿ 100 ವರ್ಷಗಳು ಎಂದು ಭಾರತ ಸರ್ಕಾರದ ಗೃಹ ಸಚಿವಾಲಯವು ಪಂಜಾಬ್ ಮುಖ್ಯ ಕಾರ್ಯದರ್ಶಿಗೆ 1948ರಲ್ಲಿ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿವರು, ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿ 100 ವರ್ಷಗಳು. ಸ್ವಾತಂತ್ರ್ಯ ಚಳವಳಿಗೆ ದ್ರೋಹ ಬಗೆದು 100 ವರ್ಷಗಳು. ಭಾರತದ ಸಂವಿಧಾನವನ್ನು ವಿರೋಧಿಸಿ 100 ವರ್ಷಗಳು. ರಾಷ್ಟ್ರ-ವಿರೋಧಿಯಾಗಿ 100 ವರ್ಷಗಳು ಎಂದಿದ್ದಾರೆ.

ಭಾರತ ಸರ್ಕಾರದ ಗೃಹ ಸಚಿವಾಲಯವು ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ಫೆಬ್ರವರಿ 24, 1948 ರಂದು ಬರೆದ ಪತ್ರ ಇಲ್ಲಿದೆ. ಇದರಲ್ಲಿ ಆರ್‌ಎಸ್‌ಎಸ್ (RSS Flag) ರಾಷ್ಟ್ರಧ್ವಜವನ್ನು ಹೇಗೆ ಅವಮಾನಿಸಿದೆ ಎಂಬುದನ್ನು ದಾಖಲಿಸಲಾಗಿದೆ.
100 years of disrespecting our National Flag.
100 years of betraying the Independence movement.
100 years of opposing the Constitution of India.
100 years of anti-nationalism.
Here is a letter dated February 24, 1948 from the Ministry of Home Affairs, Government of India, to… pic.twitter.com/oxagioNVBG
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 10, 2025
ಇತಿಹಾಸವು ನಮ್ಮ ದೇಶಕ್ಕೆ ಆರ್‌ಎಸ್‌ಎಸ್ ಮಾಡಿದ ನಿರ್ಲಜ್ಜ ದ್ರೋಹದ ನಿದರ್ಶನಗಳಿಂದ ತುಂಬಿದೆ. ಮತ್ತು ಇಡೀ ಬಿಜೆಪಿ ಇಕೋ ಸಿಸ್ಟಂ ಎಷ್ಟೇ ಪ್ರಯತ್ನಿಸಿದರೂ, ಆರ್‌ಎಸ್‌ಎಸ್ ಸಂವಿಧಾನ ವಿರೋಧಿ ಎಂಬ ಇತಿಹಾಸವನ್ನು ಅಳಿಸಿಹಾಕಲು ಅವರಿಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಬಿಜೆಪಿ ನಾಯಕರು ಹಾಗೂ ಸ್ವಯಂಸೇವಕರು ನಿಜವಾದ ಆರ್‌ಎಸ್‌ಎಸ್ ಚರಿತ್ರೆಯನ್ನು ತಿಳಿದುಕೊಳ್ಳುವ ಸಮಯ ಬಂದಿದೆ ಎಂದಿದ್ದಾರೆ.













