RSS ಪಥ ಸಂಚಲನಕ್ಕೆ ಇನ್ನು ಅನುಮತಿ ತಗೆದುಕೊಂಡಿಲ್ಲ. ಅನುಮತಿ ಇಲ್ಲ ಎಂದು ಬ್ಯಾನರ್ ತೆರವು ಮಾಡಿದ್ದಾರೆ. RSS ಧ್ವಜ ಅಂದ್ರೆ ಅದು ರಾಷ್ಟ್ರದ ಧ್ವಜನಾ? ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಚಿತ್ತಾಪುರದಲ್ಲಿ RSS ಧ್ವಜ ತೆರವು
ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಕ್ಷೇತ್ರ ಚಿತ್ತಾಪುರದಲ್ಲಿ ಭಗವಾ ದ್ವಜಗಳ ತೆರವುಗೊಳಿಸಲಾಗಿದೆ. ನಾಳೆ ಚಿತ್ತಾಪುರದಲ್ಲಿ RSS ಪಥಸಂಚಲನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪಥ ಸಂಚಲನಕ್ಕಾಗಿ ಅಳವಡಿಸಿದ್ದ ಭಗವಾ ದ್ವಜಗಳು , ಬ್ಯಾನರ್ ಗಳು, ಕೇಸರಿ ಬಣ್ಣದ ಬಾವುಟಗಳನ್ನ ಪುರಸಭೆ ಅಧಿಕಾರಿಗಳು ತಡರಾತ್ರಿ ತೆರವುಗೊಳಿಸಿದ್ದಾರೆ. ಪರವಾನಿಗೆ ಇಲ್ಲದೆ ಅಳವಡಿಸಲಾಗಿದೆ ಎಂದು ಸಿಬ್ಬಂದಿಗಳು ಹೇಳ್ತಿದ್ದಾರೆ. ಭಗವಾ ದ್ವಜ ತೆರವು ಮಾಡಿದಕ್ಕೆ ಪುರಸಭೆ ವಿರುದ್ಧ ಆರ್ಎಸ್ಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RSS ಧ್ವಜ ಅಂದ್ರೆ ಅದು ರಾಷ್ಟ್ರದ ಧ್ವಜನಾ?
ಆರ್ ಎಸ್ ಎಸ್ ಪಥ ಸಂಚಲನಕ್ಕೆ ಇನ್ನು ಅನುಮತಿ ತಗೆದುಕೊಂಡಿಲ್ಲ. ಮಾಹಿತಿ ಕೊಡೋದಲ್ಲ. ಅನುಮತಿ ಕೇಳಬೇಕು. ನಮ್ಮ ನೊಂದಣೆ ಸಂಖ್ಯೆ ಇಷ್ಟು, ಇಷ್ಟು ಜನ ಸೇರುತ್ತಾರೆ. ಏನಾದ್ರೂ ಹೆಚ್ಚು ಕಡಿಮೆ ಆದ್ರೆ, ನಾವು ಹತ್ತು ಜನ ಇದ್ದಿವಿ ಅಂತ ಅನುಮತಿ ಪಡೆಯಲಿ. RSS ಧ್ವಜ ಅಂದ್ರೆ ಅದು ರಾಷ್ಟ್ರದ ಧ್ವಜನಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ರು.

‘ಬೆದರಿಕೆ ಮತ್ತೆ ದೂರು ಕೊಡ್ತೀನಿ’
ಮೊನ್ನೆ ಬಿಜೆಪಿಯ ಚಿತ್ತಾಪುರ ಅಭ್ಯರ್ಥಿ ನನಗೆ ನೇರವಾಗಿ ಹೇಳ್ತಾನೆ. ಪೋನ್ ಕಾಲ್ ನಲ್ಲಿ ಬೆದರಿಕೆ ಹಾಕಿದ್ದಾರೆ. ಆರ್ ಎಸ್ ಎಸ್ ಅವರು ಕಟ್ಟರ್ ಪಂಥಿಗಳು, ದೇಶ ಭಕ್ತರು. ಮನೆಗೆ ನುಗ್ಗಿ ಹೊಡೆಯುತ್ತೆವೆ ಅಂತಾನೆ. ಇದರ ವಿರುದ್ದ ನಾನು ಡಿಜಿಗೆ ದೂರು ನೀಡುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ರು.