• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಪ್ರಧಾನಿ ಮೋದಿಯವರ ಖಾಸಗೀಕರಣ ಮಂತ್ರದ ಅಸಲೀ ಗುರಿ ಯಾವುದು?

Shivakumar by Shivakumar
April 21, 2021
in ದೇಶ
0
ಪ್ರಧಾನಿ ಮೋದಿಯವರ ಖಾಸಗೀಕರಣ ಮಂತ್ರದ ಅಸಲೀ ಗುರಿ ಯಾವುದು?
Share on WhatsAppShare on FacebookShare on Telegram

“ಉದ್ಯಮ ನಡೆಸುವುದು ಸರ್ಕಾರದ ಕೆಲಸವಲ್ಲ” ಎಂದಿರುವ ಪ್ರಧಾನಿ ಮೋದಿ, ಜನರ ಹಿತಕ್ಕಾಗಿ ದೇಶದ ಸಾರ್ವಜನಿಕ ಸ್ವಾಮ್ಯದ ಉದ್ಯಮಗಳನ್ನು “ಮಾರಾಟ ಮಾಡು ಇಲ್ಲವೇ ಆಧುನೀಕರಿಸು” ಎಂಬ ಮಂತ್ರವನ್ನು ತಮ್ಮ ಸರ್ಕಾರ ಪಠಿಸುತ್ತಿದೆ. ಆ ಮೂಲಕ ದೇಶದ ಸಾರ್ವಜನಿಕ ಆಸ್ತಿಯ ಖಾಸಗೀಕರಣ ತಮ್ಮ ಸರ್ಕಾರದ ಮಹತ್ವದ ಗುರಿ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

ADVERTISEMENT

ತಮ್ಮ ಆ ಮಾತುಗಳಿಗೆ ಪೂರಕವಾಗಿ, ಸರ್ಕಾರ ಉದ್ಯಮ- ವಹಿವಾಟು ಚಟುವಟಿಕೆಯಲ್ಲಿ ನೇರವಾಗಿ ಭಾಗಿಯಾದಾಗ, ಒಂದು ಖಾಸಗೀ ಉದ್ಯಮದಂತೆ ನಡೆದುಕೊಳ್ಳಲಾಗುವುದಿಲ್ಲ. ಕಾನೂನು ಮಿತಿಗಳು ಮತ್ತು ದಿಟ್ಟ ನಿರ್ಧಾರ ಕೈಗೊಳ್ಳಲು ಬೇಕಾದ ಇಚ್ಛಾಶಕ್ತಿಯ ಕೊರತೆಯಿಂದ ಅಂತಹ ಉದ್ಯಮ-ವಹಿವಾಟುಗಳು ನಷ್ಟಕ್ಕೆ ಗುರಿಯಾಗುವುದು ಶತಸಿದ್ಧ. ಹಾಗಾಗಿ ಖಾಸಗೀಕರಣ ತಮ್ಮ ಸರ್ಕಾರದ ದೃಢ ಹೆಜ್ಜೆ ಎಂದು ಹೇಳಿದ್ದಾರೆ. ಜೊತೆಗೆ, ಆ ದಿಕ್ಕಿನಲ್ಲಿ ಈಗಾಗಲೇ ಆಗಿರುವ ಭಾರತೀಯ ರೈಲ್ವೆ, ವಿಮಾನ, ಜೀವ ವಿಮಾ ನಿಗಮ, ಬ್ಯಾಂಕಿಂಗ್, ತೈಲ ಕಂಪನಿಗಳು ಮುಂತಾದ ಮಹತ್ವದ ಕಂಪನಿ ಮತ್ತು ಸಂಸ್ಥೆಗಳ ಖಾಸಗೀಕರಣವಲ್ಲದೆ, ಮುಂದಿನ ದಿನಗಳಲ್ಲಿ ದೇಶದ ನೂರಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆ-ಕಂಪನಿಗಳನ್ನು ಖಾಸಗಿಯರಿಗೆ ಮಾರಾಟ ಮಾಡುವ ಮೂಲಕ ಸುಮಾರು 2.5 ಲಕ್ಷ ಕೋಟಿ ರೂ. ಆದಾಯ ಕ್ರೋಡೀಕರಣದ ಗುರಿ ಇದೆ. ಹಾಗೆ ಮಾರಾಟದಿಂದ ಬರುವ ಹಣವನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು ಎಂದೂ ಮೋದಿ ಹೇಳಿದ್ದಾರೆ.

ಹಾಗೆ ನೋಡಿದರೆ ಭಾರತದ ಪ್ರಧಾನಿಯೊಬ್ಬರು ಹೀಗೆ ಸಾರ್ವಜನಿಕವಾಗಿ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡುವುದೇ ತಮ್ಮ ಸರ್ಕಾರದ ಪರಮ ಧ್ಯೇಯ ಎಂದು ಘಂಟಾಘೋಷವಾಗಿ ಹೇಳಿರುವುದು ಇದೇ ಮೊದಲು. ಈ ಹಿಂದೆ 1970ರ ದಶಕದಲ್ಲಿ ಇಂದಿರಾಗಾಂಧಿ ಅವಧಿಯಲ್ಲಿ ದೇಶದ ಖಾಸಗೀ ಬ್ಯಾಂಕ್ ಸೇರಿದಂತೆ ಹಲವು ಉದ್ಯಮಗಳನ್ನು ರಾಷ್ಟ್ರೀಕರಣ ಮಾಡಿ, ದೇಶದ ಕಟ್ಟಕಡೆಯ ವ್ಯಕ್ತಿಗೂ ಹಣಕಾಸು ಮತ್ತು ಬ್ಯಾಂಕಿಂಗ್ ವಲಯಕ್ಕೆ ಪ್ರವೇಶ ಒದಗಿಸಿಕೊಟ್ಟಿದ್ದರು. ದೇಶದ ಹಸಿರು ಕ್ರಾಂತಿ ಮತ್ತು ಕೈಗಾರಿಕಾ ಕ್ರಾಂತಿಗೆ ಪೂರಕವಾಗಿ ಅದೊಂದು ಮಹತ್ವದ ಐತಿಹಾಸಿಕ ಜನಪರ ದಿಟ್ಟ ಹೆಜ್ಜೆ ಎಂದು ಆ ಕ್ರಮ ಇತಿಹಾಸದಲ್ಲಿ ದಾಖಲಾಗಿತ್ತು. ಆದರೆ, ಅದಾಗಿ ಕೇವಲ 20 ವರ್ಷದಲ್ಲಿ ಅದೇ ಕಾಂಗ್ರೆಸ್ ಸರ್ಕಾರ, ಪ್ರಧಾನಿ ಪಿ ವಿ ನರಸಿಂಹ ರಾವ್ ನೇತೃತ್ವದಲ್ಲಿ ಜಾಗತೀಕರಣ ಎಂಬ ಜಾಗತಿಕ ವಿದ್ಯಮಾನದ ಭಾಗವಾಗಿ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಸರ್ಕಾರದ ಹೂಡಿಕೆಯನ್ನು ಹಿಂತೆಗೆಯುವ ಕಾರ್ಯಕ್ಕೆ ಪರೋಕ್ಷ ಚಾಲನೆ ನೀಡಿತ್ತು. ಆ ಬಳಿಕ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಸಾರ್ವಜನಿಕ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆತಕ್ಕೆಂದೇ ಬಂಡವಾಳ ಹಿಂತೆಗೆತ ಎಂಬ ಪ್ರತ್ಯೇಕ ಸಂಪುಟದರ್ಜೆ ಖಾತೆ ರಚಿಸಿ, ಅರುಣ್ ಶೌರಿ ಅವರಿಗೆ ಅದರ ಹೊಣೆಗಾರಿಕೆ ವಹಿಸಿತ್ತು. ನಂತರದ ಮನಮೋಹನ ಸಿಂಗ್ ಸರ್ಕಾರ ಕೂಡ ಬಂಡವಾಳ ಹಿಂತೆಗೆತವನ್ನು ನಿಯಮಿತವಾಗಿ ಜಾರಿಯಲ್ಲಿಟ್ಟಿತ್ತು.

ಆದರೆ, ಸುಮಾರು ಎರಡೂವರೆ ದಶಕದ ವಿವಿಧ ಸರ್ಕಾರಗಳ ಖಾಸಗೀಕರಣದ ಪ್ರಕ್ರಿಯೆಗೆ, ಈವರೆಗೂ ‘ಬಂಡವಾಳ ಹಿಂತೆಗೆತ’ ಎಂಬ ನಾಜೂಕಾದ ಹೆಸರನ್ನೇ ಬಳಸಲಾಗುತ್ತಿತ್ತು ಮತ್ತು ತೀರಾ ರೋಗಗ್ರಸ್ತ(ಕೆಲವೊಮ್ಮೆ ಉದ್ದೇಶಿತವೂ!) ಕಂಪನಿಗಳ ವಿಷಯದಲ್ಲಿ ಮಾತ್ರ ಸರ್ಕಾರ ಬಂಡವಾಳ ಹಿಂತೆಗೆತಕ್ಕೆ ಮುಂದಾಗುತ್ತಿತ್ತು. ಅದಕ್ಕೆ ಕಾರಣ; ನವರತ್ನ ಕಂಪನಿಗಳೂ ಸೇರಿದಂತೆ ದೇಶದ ಹಿಂದಿನ ಆಡಳಿತಗಾರರು ಅಪಾರ ಜನಸಂಖ್ಯೆಗೆ ಉದ್ಯೋಗ ನೀಡುವುದು ಮತ್ತು ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಮಹತ್ತರ ಗುರಿಯೊಂದಿಗೆ ಕಟ್ಟಿದ ಸಾರ್ವಜನಿಕ ಹೊಣೆಗಾರಿಕೆಯ, ಉತ್ತರದಾಯಿತ್ವದ ಕಂಪನಿ-ಸಂಸ್ಥೆಗಳನ್ನು ಹಾಗೆ ಖಾಸಗೀಯವರಿಗೆ ವಹಿಸಿಕೊಡುವುದು ಜನಸಾಮಾನ್ಯರ ಕಣ್ಣಲ್ಲಿ ಜನವಿರೋಧಿ, ದೇಶವಿರೋಧಿ ಮತ್ತು ಕ್ರೋನಿ ಕ್ಯಾಪಿಟಲಿಸ್ಟ್(ಅಧಿಕಾರಸ್ಥರ ಸ್ವಜನಪಕ್ಷಪಾತಿ ಆರ್ಥಿಕತೆ) ನಿಲುವು ಎಂದಾಗುತ್ತದೆ ಎಂಬ ಭೀತಿ. ಹಾಗಾಗಿ ವಾಸ್ತವವಾಗಿ ಖಾಸಗೀಕರಣವನ್ನೇ ಚಾಲನೆಯಲ್ಲಿಟ್ಟಿದ್ದರೂ, ಹಿಂದಿನವರ ಅವಧಿಯಲ್ಲಿ ಅದನ್ನು ಖಾಸಗೀಕರಣ ಎಂದು ನೇರಾನೇರ ಹೇಳುವುದಾಗಲೀ ಅಥವಾ ಏಕಾಏಕಿ ನೂರಾರು ಕಂಪನಿಗಳಿಂದ ಬಂಡವಾಳ ಹಿಂತೆಗೆತ ಮಾಡುವ ಮಟ್ಟಿನ ದ್ರ್ಯಾಷ್ಟ್ಯ ಆ ನಾಯಕರು ಮತ್ತು ಸರ್ಕಾರಗಳಿಗೆ ಇರಲಿಲ್ಲ.

ಆದರೆ, ಈಗ ದೇಶಭಕ್ತಿ ಮತ್ತು ಧರ್ಮರಕ್ಷಣೆಯ ಪ್ರಬಲ ಗುರಾಣಿಗಳನ್ನು ಹಿಡಿದು ನಿಂತಿರುವ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರಕ್ಕೆ, ದೇಶದ ಆಸ್ತಿಯನ್ನು ತಮ್ಮ ಕ್ರೋನಿಕ್ಯಾಪಿಟಲಿಸ್ಟ್ ಮಿತ್ರರಾದ ಅದಾನಿ ಮತ್ತು ಅಂಬಾನಿಯವರಿಗೆ ನೇರಾ ನೇರ ಹರಾಜು ಹಾಕಿಯೂ, ಅಂತಹ ಕೃತ್ಯವನ್ನು ದೇಶಭಕ್ತಿಯ ಪರಮ ಘನ ಕಾರ್ಯ ಎಂದು ಬಿಂಬಿಸುವುದು ಮತ್ತು ಜನರನ್ನು ಹಾಗೆ ನಂಬಿಸುವುದು ಸಾಧ್ಯವಿದೆ. ಆ ಕಾರಣಕ್ಕೆ ಅವರು ಹೀಗೆ ದಿಟ್ಟವಾಗಿ ಮತ್ತು ಯಾವುದೇ ಭಿಡೆ ಇಲ್ಲದೆ ಖಾಸಗೀಕರಣವೇ ತಮ್ಮ ಪರಮೋದ್ಧೇಶ ಎಂದು ಹೇಳಿದ್ದಾರೆ.

ಹಾಗೆ ನೋಡಿದರೆ; ಖಾಸಗೀಕರಣ ಎಂಬುದನ್ನು ರಾಜಾರೋಷವಾಗಿ ಬಜೆಟ್ ನಲ್ಲಿಯೇ ಪ್ರಸ್ತಾಪಿಸಿದ್ದು ಕೂಡ ಮೋದಿಯವರ ಈ ಎರಡನೇ ಅವಧಿಯ ಸಾಧನೆಗಳಲ್ಲಿ ಒಂದು. ಕಳೆದ ಫೆಬ್ರವರಿಯಲ್ಲಿ, ಕರೋನಾ ಸಂಕಷ್ಟ, ಲಾಕ್ ಡೌನ್ ಸಾವು-ನೋವಿನ ನಡುವೆ ದೇಶದ ಜನ ಉದ್ಯೊಗ- ಆದಾಯ ಕಳೆದುಕೊಂಡು ಕಂಗಾಲಾಗಿರುವಾಗ ಹೆಚ್ಚು ಉದ್ಯೋಗ ಸೃಷ್ಟಿ ಮತ್ತು ಜನರ ಗಳಿಕೆಯನ್ನು ಹೆಚ್ಚಿಸುವ ಕ್ರಮಗಳನ್ನು ಜಾರಿಮಾಡಬೇಕಿದ್ದ ಸರ್ಕಾರ, ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ತನ್ನ ಆರ್ಥಿಕ ನೀತಿಗಳನ್ನು ಹೆಣೆದಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವ ಅಳುಕಿಲ್ಲದೆ ದೇಶದ ಎರಡು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಘೋಷಿಸಿದ್ದರು. ಅಲ್ಲದೆ, ಭಾರತೀಯ ಜೀವ ವಿಮಾ ನಿಗಮದಲ್ಲಿ ಷೇರು ವಿಕ್ರಯದ ಮೂಲಕ ಖಾಸಗೀ ಹೂಡಿಕೆಗೆ ಅವಕಾಶ ನೀಡುವ ನಿರ್ಧಾರವನ್ನೂ ಪ್ರಕಟಿಸಿದ್ದರು.

ಆ ಬಳಿಕ ಬಿಜೆಪಿ ಸರ್ಕಾರ, ಪೆಟ್ರೋಲಿಯಂ, ಉಕ್ಕು, ವಿಮಾ, ಬ್ಯಾಂಕಿಂಗ್, ರಕ್ಷಣಾ ಸಾಮಗ್ರಿ ಸೇರಿದಂತೆ ಸುಮಾರು 18 ದೇಶದ ನಿರ್ಣಾಯಕ ವಲಯಗಳೂ ಸೇರಿದಂತೆ ಇತರೆ ಸಾಮಾನ್ಯ ವಲಯದ ಉದ್ದಿಮೆ ಚಟುವಟಿಕೆಗಳಿಂದ ಕೂಡ ಹೊರ ನಡೆಯಲಿದೆ ಎಂದು ಘೋಷಿಸಲಾಗಿತ್ತು. ಆ ಮೂಲಕ ದೇಶದ ಸಾರ್ವಜನಿಕ ಹಿತ ಮತ್ತು ಭದ್ರತಾ ಹಿತದ ಹಲವು ವಲಯಗಳಲ್ಲಿ ಕೂಡ ಸರ್ಕಾರ ಖಾಸಗೀ ಹೂಡಿಕೆಗೆ ಅವಕಾಶ ಮಾಡಿಕೊಟ್ಟು, ತನ್ನ ಹೊಣೆಗಾರಿಕೆಯಿಂದ ಮುಕ್ತವಾಗಲಿದೆ ಎಂಬುದನ್ನು ಪರೋಕ್ವವಾಗಿ ಹೇಳಲಾಗಿತ್ತು.

ಆ ಹಿನ್ನೆಲೆಯಲ್ಲಿಯೇ ಬಜೆಟ್ ಅಧಿವೇಶನದಲ್ಲಿ ಪ್ರಧಾನಿ ಮೋದಿಯವರು ದೇಶದ ಪ್ರಗತಿ ಮತ್ತು ಸಮೃದ್ಧಿಯಲ್ಲಿ ಖಾಸಗೀ ವಲಯದ ಪಾತ್ರವನ್ನು ಪ್ರಶಂಸಿದ್ದರು. ದೇಶ ಇಂದು ಜಾಗತಿಕ ಮಟ್ಟದಲ್ಲಿ ಮಾನವ ಕುಲಕ್ಕೆ ಏನಾದರೂ ನೆರವಿಗೆ ಬಂದಿದೆ ಎಂದರೆ ಅದಕ್ಕೆ ಕಾರಣ ಖಾಸಗೀ ವಲಯದ ಉದ್ಯಮಿಗಳು ಎಂದು ಹೇಳುವ ಮೂಲಕ, ಚುನಾಯಿತ ಸರ್ಕಾರಗಳು ಮತ್ತು ಸಾರ್ವಜನಿಕ ವಲಯ ದೇಶದ 70 ವರ್ಷಗಳ ಇತಿಹಾಸದಲ್ಲಿ ಮಾಡಿದ ಸಾಧನೆಗಳನ್ನು ಒಂದೇ ಏಟಿಗೆ ಏನೇನೂ ಇಲ್ಲ ಎಂಬಂತೆ ಹೊಡೆದುಹಾಕಿದ್ದರು!

ಬ್ಯಾಂಕಿಂಗ್ ವಲಯ, ತೈಲ ಕಂಪನಿಗಳು, ವಿಮಾನಯಾನ ಸೇರಿದಂತೆ ಸರ್ಕಾರದ ಹೂಡಿಕೆ ಮತ್ತು ಪಾತ್ರ ಹೆಚ್ಚಿರುವ ವಲಯಗಳಲ್ಲಿ ಆದಾಯ ನಷ್ಟ ಮತ್ತು ಅದಕ್ಷತೆಯ ಕಾರಣಕ್ಕೆ ಸಾರ್ವಜನಿಕ ಕಂಪನಿಗಳು ರೋಗಗ್ರಸ್ತವಾಗಿವೆ ಎಂಬುದು ನಿಜ. ಅಂತಹ ರೋಗಗ್ರಸ್ತ ವಲಯಗಳನ್ನು ಸರಿ ದಾರಿಗೆ ತರುವ ಕ್ರಮವಾಗಿ ಮತ್ತು ಆ ವಲಯದಲ್ಲಿ ಸರ್ಕಾರದ ನಷ್ಟವನ್ನು, ಸಾರ್ವಜನಿಕ ತೆರಿಗೆ ಹಣದ ಪೋಲನ್ನು ತಡೆಯುವ ಕ್ರಮವಾಗಿ ಖಾಸಗೀಕರಣ ಅನಿವಾರ್ಯ. ಹಾಗಾಗಿ ಇಂತಹ ದಿಟ್ಟ ಕ್ರಮದ ಮೂಲಕ ಭಾರತದ ಭವಿಷ್ಯವನ್ನು ಭದ್ರಪಡಿಸಲಾಗುತ್ತಿದೆ ಎಂಬುದು ಸಾರಾಸಗಟು ಖಾಸಗೀಕರಣಕ್ಕೆ ಪ್ರಧಾನಿಗಳು ಕೊಡುತ್ತಿರುವ ಸಮಜಾಯಿಷಿ.

ಆದರೆ, ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಒಂದು; ಖಾಸಗೀಕರಣವೇ ಸಾರ್ವಜನಿಕ ವಲಯದ ಉದ್ದಿಮಗಳ ಸರ್ವರೋಗಕ್ಕೆ ಮದ್ದು ಎಂಬುದು ಸಾಬೀತಾಗಿದೆಯೇ? ಆಗಿದ್ದರೆ ಯಾವೆಲ್ಲಾ ಕಂಪನಿಗಳನ್ನು ಈವರೆಗೆ ಹಾಗೆ ಖಾಸಗೀಕರಣಗೊಳಿಸಿ ಸಮೃದ್ಧಗೊಳಿಸಲಾಗಿದೆ? ಎಂಬುದು. ಖಾಸಗೀ ವಲಯದ ಬ್ಯಾಂಕುಗಳು, ವಿಮಾ ಸಂಸ್ಥೆಗಳು, ಟೆಲಿಕಾಂ ಸಂಸ್ಥೆಗಳು, ಐಟಿ ಕಂಪನಿಗಳು ನಷ್ಟದ ಸುಳಿಗೆ ಸಿಕ್ಕು ಸಾಲುಸಾಲಾಗಿ ಮುಚ್ಚಿಕೊಂಡು ಹೋಗುತ್ತಿರುವುದಕ್ಕೆ ತೀರಾ ಮೋದಿ ಅವರ ಅವಧಿಯಲ್ಲೇ ಸಾಕಷ್ಟು ನಿದರ್ಶನಗಳಿವೆ. ಹಾಗಿರುವಾಗ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸದ ಕೂಡಲೇ ಎಲ್ಲವೂ ಸರಿಹೋಗುತ್ತದೆ ಎಂಬುದಕ್ಕೆ ಖಾತರಿ ಏನಿದೆ?

ಎರಡನೆಯ ಪ್ರಶ್ನೆ; ಹೀಗೆ ಖಾಸಗೀಕರಣಗೊಳಿಸುವಾಗ ಅವುಗಳನ್ನು ಖರೀದಿಸುವವರು ಯಾರು ಮತ್ತು ಆ ಸಾರ್ವಜನಿಕ ಸಂಸ್ಥೆಗಳಲ್ಲಿ ಈವರೆಗೆ ಸಮಾಜದ ಎಲ್ಲ ಸ್ತರದ ಜನರಿಗೆ ಕೆಲಮಟ್ಟಿಗಾದರೂ ಇದ್ದ ಮುಕ್ತ ಉದ್ಯೋಗಾವಕಾಶಗಳನ್ನು ಖಾಸಗಿ ಖರೀದಿದಾರರು ಖಾತರಿಪಡಿಸುವರೇ? ಎಂಬುದು. ಈ ಎರಡನೇ ಪ್ರಶ್ನೆ ಸರ್ಕಾರ ಎಂಬುದು ಕುರಿತ ಮೂಲಭೂತ ವ್ಯಾಖ್ಯಾನದಡಿ ಬರುವ ಪ್ರಜೆಗಳ ಉದ್ಯೋಗ ಮತ್ತು ಬದುಕುವ ಹಕ್ಕು ರಕ್ಷಣೆಯಂತಹ ಗಂಭೀರ ಪ್ರಶ್ನೆಗಳು ಸೇರಿದಂತೆ ಅಧಿಕಾರಸ್ಥರ ಆಪ್ತ ಬೆರಣಿಕೆ ಮಂದಿ ಉದ್ಯಮಿಗಳೇ ಎಲ್ಲವನ್ನೂ ಖರೀದಿಸುವುದಾದರೆ, ಭವಿಷ್ಯದಲ್ಲಿ ದೇಶದ ಇಡೀ ಉದ್ಯಮ ಮತ್ತು ಆರ್ಥಿಕತೆ ಒಂದಿಬ್ಬರು ಉದ್ಯಮಿಗಳ ಏಕಸ್ವಾಮ್ಯವಾಗುವುದಿಲ್ಲವೆ? ಎಂಬ ವರೆಗೆ ಹಲವು ಸಾಲು ಸಾಲು ಪ್ರಶ್ನೆಗಳನ್ನು ಹುಟ್ಟಿಸುತ್ತದೆ.

ಈಗಾಗಲೇ ಬಿಜೆಪಿ ಪಕ್ಷ ಮತ್ತು ಪ್ರಧಾನಿಗಳ ಆಪ್ತರಾಗಿ ಗುರುತಿಸಿಕೊಂಡಿರುವ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ರೈಲ್ವೆ, ವಿಮಾನಯಾನ, ಬಂದರು, ತೈಲ ಮತ್ತು ಇಂಧನ, ಬ್ಯಾಂಕಿಂಗ್ ಮತ್ತು ವಿಮಾ, ಟೆಲಿಕಾಂ ಮುಂತಾದ ಜನಸಾಮಾನ್ಯರ ಹಿತ ಅಡಗಿರುವ ಹಲವು ನಿರ್ಣಾಯಕ ವಲಯಗಳಲ್ಲಿ ಬಹುತೇಕ ಏಕಸ್ವಾಮ್ಯ ಸಾಧಿಸಿದ್ದಾರೆ. ಹಾಗಿರುವಾಗ ಮುಂದಿನ ದಿನಗಳಲ್ಲಿ ನೂರಾರು ಸಾರ್ವಜನಿಕ ವಲಯದ ಉದ್ದಿಮೆಗಳೂ ಇದೇ ಇಬ್ಬರ ಪಾಲಾದರೆ;(ಬಹುತೇಕ ಅದು ಖಚಿತ!) ಆಗ ದೇಶಕ್ಕೆ ದೇಶವೇ ಆ ಇಬ್ಬರ ಖಾಸಗೀ ವಸಾಹತುವಂತಾಗದೆ ಎಂಬುದು ಆತಂಕ ಹುಟ್ಟಿಸುವ ಪ್ರಶ್ನೆ.

ಆ ಹಿನ್ನೆಲೆಯಲ್ಲಿ; ಸಾರ್ವಜನಿಕ ವಲಯದ ರೋಗಗ್ರಸ್ತ, ನಷ್ಟದ ಸುಳಿಗೆ ಸಿಲುಕಿದ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಸಾರ್ವಜನಿಕ ತೆರಿಗೆ ಹಣದ ಪೋಲು ಎಂಬುದು ಎಷ್ಟು ನಿಜವೋ, ಹಾಗೆ ಹೂಡಿಕೆ ಮಾಡದೆ, ಅವುಗಳನ್ನು ಪುನರುಜ್ಜೀವನ ಮಾಡುವ ಪ್ರಯತ್ನವನ್ನೂ ಮಾಡದೇ ಖಾಸಗಿಯವರಿಗೆ ಧಾರೆ ಎರೆದರೆ, ಅದು ಪರೋಕ್ಷವಾಗಿ ಇಡೀ ದೇಶವನ್ನೇ ತಟ್ಟೆಯಲ್ಲಿಟ್ಟು ದಾನ ಮಾಡಿದಂತೆ ಎಂಬುದು ಕೂಡ ಅಷ್ಟೇ ನಿಜ. ಅಚ್ಛೇದಿನದ ನಿರೀಕ್ಷೆಯಲ್ಲಿರುವ ದೇಶಬಾಂಧವರಿಗೆ ಬರಲಿರುವ ದಿನಗಳ ಅಸಲೀ ಅಚ್ಛೇತನ ಊಹಿಸುವುದು ಬಹುಶಃ ಈಗ ಬಹಳ ದೊಡ್ಡ ಸಮಸ್ಯೆಯಲ್ಲ!

Previous Post

ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಹಾರಾಟ ನಿರ್ಬಂಧ ಅವಧಿ ಮಾರ್ಚ್‌31 ರವರೆಗೆ ವಿಸ್ತರಣೆ

Next Post

ಕಾವೇರಿ ನೀರಿನ ವಿಚಾರದಲ್ಲಿ ಮತ್ತೆ ಹೋರಾಟಕ್ಕೆ ಸಿದ್ದ –ಹೆಚ್‌ ಡಿ ದೇವೇಗೌಡ

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ಕಾವೇರಿ ನೀರಿನ ವಿಚಾರದಲ್ಲಿ ಮತ್ತೆ ಹೋರಾಟಕ್ಕೆ ಸಿದ್ದ –ಹೆಚ್‌ ಡಿ ದೇವೇಗೌಡ

ಕಾವೇರಿ ನೀರಿನ ವಿಚಾರದಲ್ಲಿ ಮತ್ತೆ ಹೋರಾಟಕ್ಕೆ ಸಿದ್ದ –ಹೆಚ್‌ ಡಿ ದೇವೇಗೌಡ

Please login to join discussion

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada