
ಕಾರ್ನರ್ ಸಭೆಯಲ್ಲಿ ಕುಮಾರಸ್ವಾಮಿ ಭಾಷಣದ ವೇಳೆ ಸಾಗಿ ಹೋದ ಪ್ರೀತಂ. ಗೌಡರ ಗೌಡ ಪ್ರೀತಂ ಗೌಡ ಅಂತ ಘೋಷಣೆ, ತಾರಕಕ್ಕೇರಿದ ಕಾರ್ಯಕರ್ತರ ಕೂಗಾಟ.
ಈ ವೇಳೆ ಮಾತಿಗಿಳಿದ ಕುಮಾರಸ್ವಾಮಿ ನಮ್ಮ ಒಗ್ಗಟ್ಟನ್ನ ಒಡೆಯಲು ಯಾರಿಂದಲೂ ಸಾಧ್ಯ ಇಲ್ಲ.. ವಿಜಯೇಂದ್ರ ನಿಖಿಲ್ ಒಂದೇ ತಾಯಿ ಮಕ್ಕಳಂತೆ ಭ್ರಷ್ಟಾ ಸರ್ಕಾರದ ವಿರುದ್ಧ ಹೋರಾಡ್ತಿದ್ದೇವೆ ಯಾರೋ ಹುಳಿ ಹಿಂಡುವವರ ಮಾತಿಗೆ ಮರುಳಾಗಬೇಡಿ, ಕಿಡಿಗೇಡಿಗಳ ಮಾತಿಗೆ ಯಾರೂ ಮರುಳಾಗಬೇಡಿ. ನಮ್ಮ ಬದ್ದತೆ ಪಕ್ಷದ ಶಕ್ತಿ ಹಾಗೆಯೇ ಇರಲಿ ಅಂತ ಕೋರಿದ ಕುಮಾರಸ್ವಾಮಿ..

ಮತ್ತೊಂದು ದೋಸ್ತಿ ಮುನಿಸಿಗೆ ಸಾಕ್ಷಿಯಾಗತ್ತಾ ಸಕ್ಕರೆ ನಾಡು ಮಂಡ್ಯ ?
ಇಂದು ಮಂಡ್ಯದಲ್ಲಿ ಸಾಗಲಿರೋ ಮಿತ್ರ ಪಕ್ಷಗಳ ಪಾದಯಾತ್ರೆ, ಆದರೆ ಪಾದಯಾತ್ರೆ ಮಾರ್ಗದಲ್ಲೆಲ್ಲೂ ಕಾಣದ ಮಾಜಿ ಸಂಸದೆ ಸುಮಲತಾ ಭಾವಚಿತ್ರ? ಮಾಜಿ ಸಂಸದರನ್ನ ಮರೆತು ಬಿಟ್ರಾ ಮೈತ್ರಿ ನಾಯಕರು? ಸ್ವಾಭಿಮಾನಿ ನಾಯಕಿಗೆ ಇಲ್ಲವೇ ಪಾದಯಾತ್ರೆ ಆಹ್ವಾನ? ಕ್ಷೇತ್ರದ ವಿಚಾರಕ್ಕಾಗಿ ಎಚ್ ಡಿ ಕೆ ಜೊತೆ ಸ್ಪರ್ಧೆ ನಡೆಸಿದ್ದ ಸುಮಲತಾ ಪ್ರಧಾನಿ ಮಟ್ಟದಲ್ಲಿ ಲಾಭಿ ಮಾಡಿದ್ದ ಮಾಜಿ ಸಂಸದೆ..

ಮೈತ್ರಿ ಕಾರಣದಿಂದ ಜೆಡಿಎಸ್ ಪಾಲಾಗಿದ್ದ ಮಂಡ್ಯ ಟಿಕೇಟ್, ಇಷ್ಟಾದ ಬಳಿಕವೂ ಬಿಜೆಪಿಗೆ ಬೆಂಬಲ ಸೂಚಿಸಿದ್ದ ಸುಮಲತಾ. ಆದರೀಗ ಪಾದಯಾತ್ರೆ ವಿಚಾರದಲ್ಲಿ ಆಹ್ವಾನ ಪಡೆಯದ ಮಾಜಿ ಸಂಸದೆ. ಹಿಂದೆ ಚನ್ನಪಟ್ಟಣ ಕ್ಷೇತ್ರದಲ್ಲೂ ಇದೇ ವಿರೋಧ ಪಡೆದ ಕೊಂಡಿದ್ದ ಮೈತ್ರಿ ನಾಯಕರ ನಡಿಗೆ.

ಸ್ಥಳೀಯ ನಾಯಕ ಸಿ ಪಿ ಯೋಗೇಶ್ವರ್ ವಿಚಾರದಲ್ಲಿ ದ್ವಂದ್ವ ನಿಲುವು ಪ್ರದರ್ಶಿಸಿದ್ದ ಜೆಡಿಎಸ್, ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಪಾದಯಾತ್ರೆ ನಡಿಗೆಯಲ್ಲಿ ಭಾಗವಹಿಸಿದ್ದ ಸಿಪಿವೈ, ಈಗ ಮಂಡ್ಯ ದಲ್ಲೂ ಇದೇ ಸನ್ನಿವೇಶ ಸೃಷ್ಟಿಸಿರೋ ದೋಸ್ತಿ ನಾಯಕರು..
ಸಕ್ಕರೆ ನಾಡಲ್ಲೂ ಮೈತ್ರಿ ನಾಯಕರಿಗೆ ಎದುರಾಗತ್ತಾ ಸ್ವಾಭಿಮಾನದ ಪ್ರತಿರೋಧ?

ಆಹ್ವಾನ ಇಲ್ಲದಿದ್ರೂ ಪಾದಯಾತ್ರೆಗೆ ಬರುತ್ತಾರಾ ಸುಮಲತಾ? ಇಲ್ಲ ಪಾದಯಾತ್ರೆಯಿಂದ ದೂರ ನಿಂತು ಪ್ರತಿರೋಧ ತೋರುತ್ತಾರಾ ಸ್ವಾಭಿಮಾನಿ ಮಹಿಳೆ? ಪ್ರತಿಷ್ಟೆ ಕಾರಣಕ್ಕೆ ಅನವಶ್ಯಕ ಮುನಿಸಿನ ಸನ್ನಿವೇಶ ಸೃಷ್ಟಿಸಿಕೊಂಡರಾ ದೋಸ್ತಿ ನಾಯಕರು?





