ಪ್ರಧಾನ ಮಂತ್ರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆ ಮುಖ್ಯಸ್ಥ (ಎಸ್ಪಿಜಿ) ಅರುಣ್ ಕುಮಾರ್ ಸಿನ್ಹಾ ಬುಧವಾರ (ಸೆಪ್ಟೆಂಬರ್ 6) ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
2016ರಿಂದ ಎಸ್ಪಿಜಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ್ ಕುಮಾರ್ ಸಿನ್ಹಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ನೋಡಕೊಳ್ಳುತ್ತಿದ್ದರು. ಅವರಿಗೆ ಇತ್ತೀಚೆಗಷ್ಟೆ ಸೇವೆಯ ವಿಸ್ತರಣೆ ನೀಡಲಾಗಿತ್ತು.
ಸಿನ್ಹಾ ಅವರು 1987ರ ಬ್ಯಾಚ್ನ ಕೇರಳ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು. ಎಸ್ಪಿಜಿ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಅರುಣ್ ಕುಮಾರ್ ಸಿನ್ಹಾ ಅವರು ಕೇರಳದ ಪೊಲೀಸ್ ಇಲಾಖೆಯ ವಿವಿಧ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದರು.