• Home
  • About Us
  • ಕರ್ನಾಟಕ
Tuesday, July 8, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

ಬೆಂಗಳೂರಿನ 3ಡಿ ಅಂಚೆ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಫಿದಾ

ಪ್ರತಿಧ್ವನಿ by ಪ್ರತಿಧ್ವನಿ
August 19, 2023
in ಇದೀಗ, ದೇಶ
0
3ಡಿ ಅಂಚೆ ಕಚೇರಿ
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಅಂಚೆ ಕಛೇರಿ ಉದ್ಘಾಟನೆ ಮಾಡಲಾಗಿದೆ. ಈ 3ಡಿ ಮುದ್ರಿತ ಅಂಚೆ ಕಛೇರಿ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದಿದೆ. ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಶುಕ್ರವಾರ ಕೇಂದ್ರ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅಂಚೆ ಕಛೇರಿ ಉದ್ಘಾಟನೆ ಮಾಡಿದರು. ನಗರದ ಕೇಂಬ್ರಿಡ್ಜ್ ಲೇಔಟ್ನಲ್ಲಿ ಈ ಅಂಚೆ ಕಛೇರಿಯನ್ನು ನಿರ್ಮಾಣ ಮಾಡಲಾಗಿದೆ.

ʼಕೇಂಬ್ರಿಡ್ಜ್ ಲೇಔಟ್ ಪಿಒʼ ಹೆಸರಿನ ಅಂಚೆ ಕಛೇರಿ ನಿರ್ಮಾಣವನ್ನು ಮಾರ್ಚ್ 21ರಂದು ಆರಂಭಿಸಲಾಗಿತ್ತು. ಈಗ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟಿಸಲಾಗಿದೆ. ಇನ್ನು ಮುಂದೆ ಹಲಸೂರು ಬಜಾರ್ನಲ್ಲಿರುವ ಅಂಚೆ ಕಛೇರಿಯ ಸಿಬ್ಭಂದಿ ಇನ್ನು ಮುಂದೆ 3ಡಿ ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ದೇಶದ ಮೊದಲ 3ಡಿ ಅಂಚೆ ಕಛೇರಿ ಪ್ರಧಾನಿ ಮೋದಿ ಗಮನ ಸೆಳೆದಿದೆ. ಈ ಕುರಿತು ಶುಕ್ರವಾರ ಅವರು ಟ್ವೀಟ್ ಮಾಡಿದ್ದಾರೆ. “ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ನಲ್ಲಿರುವ ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಯನ್ನು ನೋಡಲು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ” ಎಂದು ಮೋದಿ ಹೇಳಿದ್ದಾರೆ.

Every Indian would be proud to see India's first 3D printed Post Office at Cambridge Layout, Bengaluru. A testament to our nation's innovation and progress, it also embodies the spirit of a self-reliant India. Compliments to those who have worked hard in ensuring the Post… pic.twitter.com/Y4TrW4nEhZ

— Narendra Modi (@narendramodi) August 18, 2023

“ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಇದು ಸಾಕ್ಷಿಯಾಗಿದೆ. ಇದು ಸ್ವಾವಲಂಬಿ ಭಾರತದ ಆಶಯವನ್ನು ಒಳಗೊಂಡಿದೆ. ಅಂಚೆ ಕಚೇರಿಯನ್ನು ಪೂರ್ಣಗೊಳಿಸುವಲ್ಲಿ ಶ್ರಮಿಸಿದವರಿಗೆ ಅಭಿನಂದನೆಗಳು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಾಂಪ್ರದಾಯಿಕ ವಿಧಾನ ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಲು ಸುಮಾರು 6 ರಿಂದ 8 ತಿಂಗಳು ಬೇಕಾಗುತ್ತದೆ. ಆದರೆ 3ಡಿ ಕಾಂಕ್ರೀಟ್ ಮುದ್ರಣ ತಂತ್ರಜ್ಞಾನದಿಂದ ವೆಚ್ಚ, ಸಮಯವನ್ನು ಉಳಿತಾಯ ಮಾಡಿ ಈ ಅಂಚೆ ಕಛೇರಿಯ ಕಟ್ಟಡ ನಿರ್ಮಾಣ ಮಾಡಲಾಗಿದೆ.

3ಡಿ ಅಂಚೆ ಕಚೇರಿ
ಕೇಂಬ್ರಿಡ್ಜ್‌ ಲೇಔಟ್‌ 3ಡಿ ಅಂಚೆ ಕಚೇರಿ

ಕಟ್ಟಡ ನಿರ್ಮಾಣಕ್ಕೆ ಸಾಂಪ್ರದಾಯಿಕ ಶೈಲಿಯ ಇಟ್ಟಿಗೆ ಮುಂತಾದ ಕಚ್ಚಾವಸ್ತುಗಳ ಬದಲಾಗಿ ರೊಬೊಟಿಕ್ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ಮೆ. ಲಾರ್ಸನ್ ಮತ್ತು ಟುಟ್ರೊ ಲಿಮಿಟೆಡ್ (ಎಲ್ ಮತ್ತು ಟಿ) ಮೂಲಕ ಈ ಕಟ್ಟಡ ನಿರ್ಮಿಸಲಾಗಿದೆ.

ಈ ಕಟ್ಟಡದ ಒಟ್ಟು ವಿಸ್ತೀರ್ಣ 1021 ಚದರ ಅಡಿಗಳು. ಭಾರತೀಯ ಅಂಚೆ ಇಲಾಖೆ, ಕರ್ನಾಟಕ ವೃತ್ತದ ವತಿಯಿಂದ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಚೆನ್ನೈನ ಐಐಟಿ ತಾಂತ್ರಿಕ ಮಾರ್ಗದರ್ಶನವನ್ನು ನೀಡಿದೆ.

ಕಟ್ಟಡ ನಿರ್ಮಾಣ ತಂತ್ರಜ್ಞಾನ ಬಹಳ ವಿಭಿನ್ನವಾಗಿದೆ. ರೋಬೊಟಿಕ್ ಪ್ರಿಂಟರ್ ಬಳಕೆ ಮಾಡಿಕೊಂಡು ಕಾಂಕ್ರೀಟ್ ಪದರವನ್ನು ಹಂತ ಹಂತವಾಗಿ ನಿರ್ಮಿಸಲಾಗಿದೆ. ಬೇಗ ಗಟ್ಟಿಯಾಗುವ ವಿಶೇಷ ದರ್ಜೆಯ ಕಾಂಕ್ರೀಟ್ ಪದರಗಳನ್ನು 3ಡಿ ಅಂಚೆ ಕಚೇರಿ ನಿರ್ಮಾಣದಲ್ಲಿ ಬಳಕೆ ಮಾಡಲಾಗಿದೆ.

3ಡಿ ಅಂಚೆ ಕಚೇರಿ
ಕೇಂಬ್ರಿಡ್ಜ್‌ ಲೇಔಟ್‌ 3ಡಿ ಅಂಚೆ ಕಚೇರಿ

ಈ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಸುಮಾರು 26 ಲಕ್ಷ ರೂ. ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ. ನಿರ್ಮಾಣ ಕಾರ್ಯ ಮೇ 3ರ ಒಳಗೆ ಪೂರ್ಣಗೊಂಡಿತ್ತು. ಆದರೆ ಒಳಚರಂಡಿ ಮತ್ತು ನೀರಿನ ಸಂಪರ್ಕ ನೀಡುವುದು ವಿಳಂಬವಾಯಿತು. ಉದ್ಘಾಟನೆಗಾಗಿ ಕೇಂದ್ರ ಸಚಿವರ ದಿನಾಂಕ ನಿಗದಿಗೆ ಇನ್ನಷ್ಟು ದಿನ ತೆಗೆದುಕೊಂಡಿತು.

ಈ ಸುದ್ದಿ ಓದಿದ್ದೀರಾ? ನಮ್ಮ ಕುಟುಂಬದ ಯಾವೊಬ್ಬ ವ್ಯಕ್ತಿ ಹೆಸರಲ್ಲಿ ನೈಸ್ ಆಸ್ತಿ ಇಲ್ಲ; ಹೆಚ್.ಡಿ.ಕುಮಾರಸ್ವಾಮಿ

ಸಾಂಪ್ರದಾಯಿಕವಾಗಿ ನಿರ್ಮಾಣ ಮಾಡಿದ್ದರೆ ಆಗುವ ಖರ್ಚಿಗಿಂತ ಸುಮಾರು ಶೇ 30 ರಿಂದ 40ರಷ್ಟು ಹಣ ಉಳಿತಾಯವಾಗಿದೆ ಎಂದು ಅಂದಾಜಿಸಲಾಗಿದೆ. ಈ 3ಡಿ ಅಂಚೆ ಕಚೇರಿ ಕಟ್ಟಡದ ಉದ್ಘಾಟನೆಯ ನೆನಪಿಗಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗಿದೆ.

ಕಟ್ಟಡ ನಿರ್ಮಾಣದಲ್ಲಿ ಹಣ, ಸಮಯ ಉಳಿತಾಯ ಮಾಡುವ 3ಡಿ ತಂತ್ರಜ್ಞಾನ ದೇಶದಲ್ಲಿ ಭವಿಷ್ಯದಲ್ಲಿ ಜನಪ್ರಿಯವಾಗುವ ನಿರೀಕ್ಷೆ ಇದೆ. ಎರಡು ವರ್ಷಗಳ ಹಿಂದೆ ಮದ್ರಾಸ್ ಐಐಟಿ ಕ್ಯಾಂಪಸ್ನಲ್ಲಿ ಇದೇ ಮಾದರಿಯಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕಟ್ಟಡ ಉದ್ಘಾಟನೆ ಮಾಡಿದ್ದರು.

Tags: 3D Post Office3ಡಿ ಅಂಚೆ ಕಚೇರಿBangaloreKembridge Layout Post OfficePM Narendra Modiಕೇಂಬ್ರಿಡ್ಜ್‌ ಲೇಔಟ್‌ ಅಂಚೆ ಕಚೇರಿಪ್ರಧಾನಿ ನರೇಂದ್ರ ಮೋದಿ
Previous Post

ಅಮರನಾಥ ಯಾತ್ರೆ | 300 ಅಡಿ ಆಳಕ್ಕೆ ಬಿದ್ದು ಯಾತ್ರಾರ್ಥಿ ಸಾವು

Next Post

‘ಸಿಕಾಡಾ’ ಪ್ಯಾನ್‌ ಇಂಡಿಯಾ ಸಿನಿಮಾ ಫಸ್ಟ್‌ಲುಕ್‌ ಬಿಡುಗಡೆ

Related Posts

ತುರ್ತುಪರಿಸ್ಥಿತಿ- ಆಳ್ವಿಕೆಯ ಮಾದರಿ ಕಲ್ಪಿಸಿದ ವಿದ್ಯಮಾನ
ದೇಶ

ತುರ್ತುಪರಿಸ್ಥಿತಿ- ಆಳ್ವಿಕೆಯ ಮಾದರಿ ಕಲ್ಪಿಸಿದ ವಿದ್ಯಮಾನ

by ನಾ ದಿವಾಕರ
July 8, 2025
0

----ನಾ ದಿವಾಕರ---- ಪ್ರಜಾತಂತ್ರದ ಚೌಕಟ್ಟಿನ ಒಳಗೇ ಆಳ್ವಿಕೆಯನ್ನು ಬಿಗಿಗೊಳಿಸುವ ಒಂದು ಆಡಳಿತದ Template (ತುರ್ತುಪರಿಸ್ಥಿತಿ – ಕಲಿತಿರುವುದೇನು ಕಲಿಯಬೇಕಾದ್ದು ಏನು ? ಮಂದುವರೆದ ಭಾಗ) ವಿಶ್ವದ ಯಾವುದೇ...

Read moreDetails

Priyanka Kharge: ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆ ವಹಿಸಿ: ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

July 7, 2025

Dinesh Gundu Rao: ಹೃದಾಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

July 7, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 

ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 

July 7, 2025
ಈಗ ದೇಶದಲ್ಲಿ ಗಂಟಾದ ತ್ರಿಭಾಷೆ-V/S ದ್ವಿಭಾಷಾ ಸೂತ್ರ

ಈಗ ದೇಶದಲ್ಲಿ ಗಂಟಾದ ತ್ರಿಭಾಷೆ-V/S ದ್ವಿಭಾಷಾ ಸೂತ್ರ

July 7, 2025
Next Post
ಸಿಕಾಡಾ

'ಸಿಕಾಡಾ' ಪ್ಯಾನ್‌ ಇಂಡಿಯಾ ಸಿನಿಮಾ ಫಸ್ಟ್‌ಲುಕ್‌ ಬಿಡುಗಡೆ

Please login to join discussion

Recent News

Top Story

Priyanka Kharge: ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆ ವಹಿಸಿ: ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

by ಪ್ರತಿಧ್ವನಿ
July 7, 2025
Top Story

Dinesh Gundu Rao: ಹೃದಾಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

by ಪ್ರತಿಧ್ವನಿ
July 7, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 
Top Story

ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 

by Chetan
July 7, 2025
ಈಗ ದೇಶದಲ್ಲಿ ಗಂಟಾದ ತ್ರಿಭಾಷೆ-V/S ದ್ವಿಭಾಷಾ ಸೂತ್ರ
Top Story

ಈಗ ದೇಶದಲ್ಲಿ ಗಂಟಾದ ತ್ರಿಭಾಷೆ-V/S ದ್ವಿಭಾಷಾ ಸೂತ್ರ

by ಪ್ರತಿಧ್ವನಿ
July 7, 2025
Priyanka Kharge: ಪ್ರತಾಪ್ ಸಿಂಹ ಔಟ್ ಡೇಟೆಡ್ ರಾಜಕಾರಣಿ – ನನ್ನ ಬಗ್ಗೆ ಮಾತಾಡಿದ್ರೆ ಮಾರ್ಕೆಟ್ ಕುದುರಲ್ಲ ..! : ಸಿಂಹಗೆ ಖರ್ಗೆ ಕ್ಲಾಸ್
Top Story

Priyanka Kharge: ಪ್ರತಾಪ್ ಸಿಂಹ ಔಟ್ ಡೇಟೆಡ್ ರಾಜಕಾರಣಿ – ನನ್ನ ಬಗ್ಗೆ ಮಾತಾಡಿದ್ರೆ ಮಾರ್ಕೆಟ್ ಕುದುರಲ್ಲ ..! : ಸಿಂಹಗೆ ಖರ್ಗೆ ಕ್ಲಾಸ್

by Chetan
July 7, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ತುರ್ತುಪರಿಸ್ಥಿತಿ- ಆಳ್ವಿಕೆಯ ಮಾದರಿ ಕಲ್ಪಿಸಿದ ವಿದ್ಯಮಾನ

ತುರ್ತುಪರಿಸ್ಥಿತಿ- ಆಳ್ವಿಕೆಯ ಮಾದರಿ ಕಲ್ಪಿಸಿದ ವಿದ್ಯಮಾನ

July 8, 2025

Priyanka Kharge: ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆ ವಹಿಸಿ: ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

July 7, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!