ಕೇರಳ ಕಾಂಗ್ರೇಸ್ (Kerala congress) ಘಟಕ ದಾಖಲೆಗಳ ಸಮೇತ ಟ್ವಿಟ್ (tweet) ಮಾಡುವ ಮೂಲಕ ಬಿಜೆಪಿ(bjp) ವಿರುದ್ಧ ಹರಿಹಾಯ್ದಿದೆ. ಅಷ್ಟೇ ಅಲ್ಲದೇ ವಾಟ್ಸಾಪ್ (whatsapp) ನ ಮಾತೃ ಸಂಸ್ಥೆಯಾಗಿರುವ ಮೆಟ(meta) ಸಂಸ್ಥೆಯನ್ನೂ ಕೂಡ ಈ ಟ್ವಿಟ್ನಲ್ಲಿ ಟ್ಯಾಗ್ ಮಾಡಿದೆ. ದೇಶದಾದ್ಯಂತ ಈಗಾಗಲೇ ಲೋಕಸಮರಕ್ಕೆ (parliment eletion) ದಿನಾಂಕ ಘೋಷಣೆಯಾಘಿದ್ದು ರಾಜಕೀಯ ಬಿರುಸು ಪಡೆದುಕೊಂಡಿದೆ. ಈ ಮಧ್ಯೆ ಇದೀಗ ಭಾರತದ ವಾಟ್ಯಾಪ್ (whatsapp) ಬಳಕೆದಾರರಿಗೆ ವಾಟ್ಸಾಪ್ ವೇರಿಫೈಡ್ ಮೆಸೇಜ್ ಮೂಲಕ ರಾಜಕೀಯ ದುರುದ್ದೇಶದ ಪ್ರೋಪಗೆಂಡಾ(propaganda) ಹರಡಲಾಗ್ತಿದೆ ಎಂದು ಕಾಂಗ್ರೇಸ್ (congress) ಆರೋಪ ಮಾಡಿದೆ.
ಅಷ್ಟಕ್ಕೂ ವಾಟ್ಸಾಪ್ನಲ್ಲಿ (whatsapp) ಹರಿದಾಡ್ತಿರೋ ಈ ಸಂದೇಶದಲ್ಲಿ ಏನಿದೆ ಅಂತ ನೋಡೋದಾದ್ರೆ..
ನನ್ನ ಪ್ರೀತಿಯ ಕುಟುಂಬದ ಸದಸ್ಯರೇ,
ನಮ್ಮ ಸರ್ಕಾರ ಒಂದು ದಶಕವನ್ನು ಪೂರ್ಣಗೊಳಿಸುವ ಹೊಸ್ತಿಲಲ್ಲಿದೆ. 140 ಕೋಟಿ ಭಾರತೀಯರ ನಂಬಿಕೆ ಮತ್ತು ಬೆಂಬಲ ನನಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿದೆ. ಜನ ಜೀವನದಲ್ಲಿ ಆಗಿರುವ ಪರಿವರ್ತನೆ ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರದ ದೊಡ್ಡ ಸಾಧನೆ.
ಬಡವರ, ರೈತರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸರ್ಕಾರ ಶ್ರಮಿಸಿದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಪಕ್ಕಾ ಮನೆಗಳು, ಎಲ್ಲರಿಗೂ ವಿದ್ಯುತ್, ನೀರು ಮತ್ತು ಎಲ್ಪಿಜಿ ಸೌಲಭ್ಯ, ಆಯುಷ್ಮಾನ್ ಭಾರತ್ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆಗಳು, ರೈತರಿಗೆ ಆರ್ಥಿಕ ಸಹಾಯ, ಮಾತೃ ವಂದನಾ ಯೋಜನೆ ಮೂಲಕ ಮಹಿಳೆಯರಿಗೆ ನೆರವು ಹೀಗೆ ಅನೇಕ ಪ್ರಯತ್ನಗಳ ಯಶಸ್ಸು ಮಾಡಿದ್ದೇವೆ . ಇದಕ್ಕೆ ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಕಾರಣ.
ಸಂಸತ್ತಿನಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಜಿಎಸ್ಟಿ ಅನುಷ್ಠಾನ, 370 ನೇ ವಿಧಿ ರದ್ದತಿ, ತ್ರಿವಳಿ ತಲಾಖ್ನ ಹೊಸ ಕಾನೂನು, ನಾರಿ ಶಕ್ತಿ ವಂದನ್ ಕಾಯ್ದೆ, ಉದ್ಘಾಟನೆ ಮುಂತಾದ ಐತಿಹಾಸಿಕ ಮತ್ತು ಪ್ರಮುಖ ನಿರ್ಧಾರಗಳನ್ನು ನಾವು ತೆಗೆದುಕೊಳ್ಳಬಹುದು ಎಂಬುದು ನಿಮ್ಮ ನಂಬಿಕೆ ಮತ್ತು ಬೆಂಬಲದ ಅಳತೆಯಾಗಿದೆ. ಹೊಸ ಸಂಸತ್ತಿನ ಕಟ್ಟಡ ಮತ್ತು ಭಯೋತ್ಪಾದನೆ ಮತ್ತು ಎಡಪಂಥೀಯ ಉಗ್ರವಾದದ ವಿರುದ್ಧ ಬಲವಾದ ಕ್ರಮಗಳನ್ನ ನಾವು ಕೈಗೊಂಡಿದ್ದೇವೆ.
ಹೀಗೆ ವಿಕ್ಷಿತ್ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಪೂರೈಸಲು ನಾವು ಕೆಲಸ ಮಾಡಬೇಕಾದರೆ ನಿಮ್ಮ ಆಲೋಚನೆಗಳು, ಸಲಹೆಗಳು ಮತ್ತು ಬೆಂಬಲವನ್ನು ನಾನು ಎದುರು ನೋಡುತ್ತಿದ್ದೇನೆ. ನಾವು ಒಟ್ಟಾಗಿ ನಮ್ಮ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುವುದನ್ನು ಮುಂದುವರಿಸುತ್ತೇವೆ ಎಂಬ ವಿಶ್ವಾಸ ನನಗಿದೆ.
ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳೊಂದಿಗೆ.
- ನರೇಂದ್ರ ಮೋದಿ
ಎಂಬ ಅಂಶಗಳು ಈ ಸಂದೇಶದಲ್ಲಿದೆ.
ಈ ಮೂಲಕ ಬಿಜೆಪಿ (bjp) ಮೆಟ (meta) ಸಂಸ್ಥೆ ಜೊತೆ ಸೇರಿ ಸಭಿಪ್ರಾಯ ಸಂಗ್ರಹದ ಹೆಸರಲ್ಲಿ ರಾಷ್ಟ್ರದ ಜನರ ಬೇಲೆ ಪ್ರಭಾವ ಬೀರುವ ಕೆಲಸಕ್ಕೆ ಮುಂದಾಗಿದೆ. ಇದು ಮೆಟ(meta) ಸಂಸ್ಥೆ ಮತ್ತು ಪ್ರಧಾನಿ ಮೋದಿಗೆ (pm modi) ಶೋಭೆ ತರುವಂಥದ್ದಲ್ಲ. ದೇಶದ ಜನ ಇವರ ಪ್ರಭಾವಕ್ಕೆ ಒಳಗಾಗದೆ ಪ್ರಬುದ್ಧತೆಯಿಂದ ಓಟ್ ಚಲಾಯಿಸಿ ಎಂದು ಕಾಂಗ್ರೇಸ್ ಮತದಾರರಲ್ಲಿ ಮನವಿ ಮಾಡಿದೆ.