ಶಿಕ್ಷಕರ ದಿನ ಅಂಗವಾಗಿ ಮಂಗಳವಾರ (ಸೆಪ್ಟೆಂಬರ್ 5) ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಶಿಕ್ಷಕರಿಗೂ ಶುಭಾಶಯ ಕೋರಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ನಮ್ಮ (ವಿದ್ಯಾರ್ಥಿಗಳ) ಭವಿಷ್ಯವನ್ನು ರೂಪಿಸುವಲ್ಲಿ ಹಾಗೂ ಅವರ ಕನಸುಗಳನ್ನು ಪ್ರೇರೆಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ಶಿಕ್ಷಕರ ಅಚಲವಾದ ಮನೋಭಾವ ಹಾಗೂ ಅವರು ವಿದ್ಯಾರ್ಥಿಗಳ ಮೇಲೆ ಬೀರುವ ಪ್ರಭಾವ ಆಗಾಧವಾದದ್ದು. ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನ ಪ್ರಯುಕ್ತ ಅವರಿಗೆ ಶುಭಾಶಯ” ಎಂದು ಬರೆದುಕೊಂಡಿದ್ದಾರೆ.
ಶಿಕ್ಷಕರ ಜತೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ.
ಭಾರತದಲ್ಲಿ ಶಿಕ್ಷಕರ ದಿನ ಆಚರಣೆಯನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಾಣರ್ಥ ಅಚರಿಸಲಾಗುತ್ತಿದೆ.