ನಿನ್ನೆಯಷ್ಟೇ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ(karnataka assembly election) ಫಲಿತಾಂಶ ಹೊರಬಿದ್ದಿದೆ. ರಾಜ್ಯಾದ್ಯಂತ ಬಹುಮತ ಪಡೆದು ಕಾಂಗ್ರೆಸ್(congress) ಪಕ್ಷ ಭರ್ಜರಿ ಜಯ ಸಾಧಿಸಿದೆ. ಗೆಲುವಿನ ಸಂಭ್ರಮದಲ್ಲಿರುವ ಕಾಂಗ್ರೆಸ್ಸಿಗರು, ಮೈಸೂರಿನಲ್ಲಿ(mysore) ಪ್ರಧಾನಿ ನರೇಂದ್ರ ಮೋದಿ(narendra modi) ರೋಡ್ ಶೋ ನಡೆಸಿದ ದಾರಿ ಅಪವಿತ್ರವಾಗಿದೆ ಎಂದು ಆರೋಪಿಸಿ, ಕೈ ಕಾರ್ಯಕರ್ತರು ಆ ದಾರಿಗೆ ಸಗಣಿ ಗಂಜಲ ಎರಚಿ ಸುಚಿಗೊಳಿಸಿದ್ರು. ಕಳೆದ ಮೇ 7 ರಂದು ಮೈಸೂರಿನ ಗನ್‌ಹೌಸ್ ವೃತ್ತದಿಂದ ಹೈವ್ ವೃತ್ತದ ವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ(road show) ನಡೆಸಿದ್ದರು.
ಇಂದು ಕಾಂಗ್ರೆಸ್ ಕಾರ್ಯಕರ್ತರು(congress workers) ಮೈಸೂರಿನ ಕೆ.ಆರ್ ವೃತ್ತ, ಸಯ್ಯಾಜೀರಾವ್ ರಸ್ತೆಯನ್ನ ಸಗಣಿ, ಗಂಜಲದಿಂದ ಶುದ್ಧಗೊಳಿಸಿದ್ದಾರೆ. ಈ ಮೂಲಕ ರೋಡ್ ಶೋ(road show) ನಡೆಸಿ, ಚುನಾವಣಾ ಪ್ರಚಾರ(election campaign) ಮಾಡಿದ್ದ ಪ್ರಧಾನಿ ಸಾಗಿದ ಮಾರ್ಗವನ್ನ ಶುಚಿಗೊಳಿಸುವ ಮೂಲಕ ಕೈ ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ. ʻನಾಡದೇವಿ ಚಾಮುಂಡೇಶ್ವರಿ(chamundeshwari) ಮೆರವಣಿಗೆ ಸಾಗುವ ದಾರಿಯಲ್ಲಿ ಮೋದಿ ಬಂದಿದ್ದು ಅಪವಿತ್ರವಾಗಿದೆ. ಚಾಮುಂಡೇಶ್ವರಿ ಶಾಪದಿಂದ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿದೆ. ರಾಜ ಮಹಾರಾಜರು ಸಾಗಿದ್ದ ಮಾರ್ಗ, ಈಗ ತಾಯಿ ಚಾಮುಂಡೇಶ್ವರಿ ಸಾಗುವ ಮಾರ್ಗ. ಅಂತಹ ಮಾರ್ಗದಲ್ಲಿ ಮೋದಿ ಸಾಗಿದ್ದು ಅಪಶಕುನ. ಇದರಿಂದಾಗಿಯೇ ಬಿಜೆಪಿ ಸೋತಿದೆ. ನಮ್ಮ ಮೈಸೂರು(mysore) ಪವಿತ್ರವಾಗಿರಬೇಕು ಅದಕ್ಕೆ ಕ್ಲೀನ್ ಮಾಡ್ತಿದ್ದೇವೆ ಅಂತ ಕಾಂಗ್ರೆಸ್ ಕಾರ್ಯಕರ್ತರು(congress workers) ಪ್ರಧಾನಿ ನರೇಂದ್ರ ಮೋದಿ(PM narendra modi) ವಿರುದ್ಧ ಹರಿಹಾಯ್ದರು