ರಾಜ್ಯದಲ್ಲಿ ಬೆಲೆ ಏರಿಕೆ ನಿತ್ಯ ನಿರಂತರ ಎಂಬಂತಾಗಿದೆ. ಹೀಗಾಗಿ ಸರ್ಕಾರದಿಂದ ಹಾಲಿನ ದರ ಏರಿಕೆ (Milk price hike) ಸಂಬಂಧಪಟ್ಟಂತೆ ಕಾಂಗ್ರೆಸ್ ಗೆ (Congress) ಸೆಡ್ಡು ಹೊಡೆಯಲು ಬಿಜೆಪಿ ನಾಯಕರು (Bjp leaders) ಅಖಾಡಕ್ಕಿಳಿದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೆಂದ್ರೆ (BY Vijayendra) ಅಣತಿಯ ಮೇರೆಗೆ ಬಿಜೆಪಿ ನಾಯಕರುಗಳು ಏಪ್ರಿಲ್ 2ರಿಂದ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಗ್ಯಾರೆಂಟಿಗಳ ಅನುಷ್ಠಾನಕ್ಕೆ ಅನುದಾನಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಲಿದೆ.

ಈ ಗ್ಯಾರೆಂಟಿಗಳ ಪರಿಣಾಮವಾಗಿ ನಮ್ಮ ಮೆಟ್ರೋ, ಬಸ್, ವಿದ್ಯುತ್ ದರ , ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ.ಈಗ ಗಾಯ ಮೇಲೆ ಬರಿಯ ಎಂಬಂತೆ ಹಾಲಿನ ದರವನ್ನು ಸರ್ಕಾರ ಏರಿಕೆ ಮಾಡಿದ್ದು ಇದು ಪಿಕ್ ಪಾಕೆಟ್ ಸರ್ಕಾರ ಅಂತ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.