ಕೇವಲ ದಕ್ಷಿಣ ಕನ್ನಡ ಮಾತ್ರವಲ್ಲದೇ, ಇಡೀ ರಾಜ್ಯವೇ ಹೊತ್ತಿ ಉರಿಯುವಂತೆ ಮಾಡಿದ್ದ ಪ್ರವೀಣ್ ನೆಟ್ಟಾರು (Praveen nettaru) ಹತ್ಯೆ ಪ್ರಕರಣ ಈಗ ಮತ್ತೆ ಮುನ್ನಲೆಗೆ ಬಂದಿದೆ. ಘಟನೆ ನಡೆದ ದಿನದಿಂದ ನಿಂತರವಾಗಿ ಪ್ರಕರಣದ ಬೆನ್ನು ಬಿದ್ದಿರುವ ಎನ್.ಐ.ಎ (NIA) ಟೀಂ ಇದೀಗ ಬಿಗ್ ಅಪ್ಲೇಟ್ ಕೊಟ್ಟಿದೆ.
ಮಂಗಳೂರಿನ (Mangalore) ಬಿಜೆಪಿ(BJP) ಮುಖಂಡ ಪ್ರವೀಣ್ ನೆಟ್ಟಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್ ಐಎ(NIA) ಬಂಧಿಸಿದೆ. ತಲೆಮರೆಸಿಕೊಂಡಿದ್ದ ಮುಸ್ತಫಾ ಪೈಚಾರ್ (mustafa paichar) ಲಾಕ್ ಆಗಿದ್ದಾನೆ. ಸುಳ್ಯದ ಶಾಂತಿ ನಗರ ನಿವಾಸಿಯಾಗಿರುವ ಈತ ಪಿಎಫ್‌ಐ (PFI) ಮುಖಂಡನಾಗಿದ್ದ. ಹಾಸನದ (Hassan) ಸಕಲೇಶಪುರ ಬಳಿ ಆರೋಪಿಯನ್ನು ಬಂಧಿಸಲಾಗಿದೆ.
ಮುಸ್ತಫಾ ಪೈಚಾರ್ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು. ಇನ್ನು ಮುಸ್ತಫಾ ಪೈಚಾರ್ ಬಂಧನಕ್ಕೆ ಪ್ರವೀಣ್ ನೆಟ್ಟಾರ್ ಪತ್ನಿ ನೂತನ ಸಂತಸ ವ್ಯಕ್ತಪಡಿಸಿದ್ದಾರೆ. ಮುಸ್ತಫಾ ಪೈಚಾರ್ ಸಿಕ್ಕಿದ್ದಾನೆ ಅಂತ ನಮಗೆ ತುಂಬಾ ಖುಷಿಯಾಗಿದೆ. ಈ ಪ್ರಕರಣದ ಎಲ್ಲ ಆರೋಪಿಗಳಿಗೂ ಮರಣ ದಂಡನೆಯಾಗಬೇಕು ಎಂದಿದ್ದಾರೆ.