• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪ್ರತಾಪ್​ ಸಿಂಹ ಮಾಡಿದ ತಪ್ಪೇನು..? ಸರ್ಕಾರ ಟಾರ್ಗೆಟ್​ ಮಾಡ್ತಿದ್ಯಾ..?

Any Mind by Any Mind
December 24, 2023
in ಕರ್ನಾಟಕ
0
ಪ್ರತಾಪ್​ ಸಿಂಹ ಮಾಡಿದ ತಪ್ಪೇನು..? ಸರ್ಕಾರ ಟಾರ್ಗೆಟ್​ ಮಾಡ್ತಿದ್ಯಾ..?
Share on WhatsAppShare on FacebookShare on Telegram

ADVERTISEMENT

ಸಂಸತ್​ ಅಧಿವೇಶನದಲ್ಲಿ ಭಾಗಿಯಾಗಲು ಸಂಸದ ಪ್ರತಾಪ್​ ಸಿಂಹ ಮೈಸೂರಿನ ಮನೋರಂಜನ್​​ಗೆ ಪಾಸ್​ ಕೊಟ್ಟಿದ್ದರು. ಆದರೆ ಮನೋರಂಜನ್​ ಅಧಿವೇಶನಲ್ಲಿ ಕಲರ್​ ಬಾಂಬ್​ ಸಿಡಿಸಿ ಅವಾಂತರ ಸೃಷ್ಟಿ ಮಾಡಿದ್ದರು. ಆ ಬಳಿಕ ಸಂಸದ ಪ್ರತಾಪ್​ ಸಿಂಹನ ವಿರುದ್ಧ ಕಾಂಗ್ರೆಸ್​ ವಾಗ್ದಾಳಿ ಮಾಡಿತ್ತು. ಬಂಧನ ಮಾಡಿ ತನಿಖೆ ಮಾಡುವಂತೆಯೂ ಅಬ್ಬರಿಸಿತ್ತು. ಆದರೆ ಸಂಸದ ಪ್ರತಾಪ್​ ಸಿಂಹ ಮಾತ್ರ ಮೌನಕ್ಕೆ ಶರಣಾಗಿದ್ದರು. ಪಾಸ್​ ಕೊಟ್ಟಿದ್ದು ಬಹುದೊಡ್ಡ ಅಪರಾಧ ಎಂದು ಹೇಳಲು ಸಾಧ್ಯವಿಲ್ಲ. ಆದರೂ ಮೌನಕ್ಕೆ ಶರಣಾಗುವ ಮೂಲಕ ಪ್ರತಾಪ್​ ಸಿಂಹ ತಪ್ಪನ್ನು ಒಪ್ಪಿಕೊಂಡಿದ್ದರು. ದೆಹಲಿಯಿಂದ ಬೆಂಗಳೂರಿಗೆ ವಾಪಸ್​ ಆದ ಬಳಿಕವೂ ಆಗಿರುವ ಘಟನೆಗೆ ವಿಷಾದ ಕೋರಿ, ಸ್ಪಷ್ಟನೆ ನೀಡಬಹುದಿತ್ತು. ಅದನ್ನೂ ಮಾಡಲಿಲ್ಲ.. ಇದೀಗ ಮತ್ತೊಂದು ಆರೋಪ ಕಾಂಗ್ರೆಸ್​ನಿಂದ ಬಂದಿದೆ.

ಪ್ರತಾಪ್​ ಸಿಂಹ ವಿರುದ್ಧ ಕಾಂಗ್ರೆಸ್​ ಆರೋಪ ಏನು..?

ಅಣ್ಣ ಸಂಸತ್​ ದಾಳಿಕೋರರಿಗೆ ಪಾಸ್​ ನೀಡುವುದರಲ್ಲಿ ನಿರತರು. ಅದೇ ಸಂಸದರ ತಮ್ಮ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಗಳ್ಳತನ ಮಾಡಿದ್ದಾರೆ ಎಂದು ಸಂಸದ ಪ್ರತಾಪ್​ ಸಿಂಹ ಸಹೋದರನ​ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿದೆ. ಹಾಸನದ ಬೇಲೂರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಗಳ್ಳತನ ಮಾಡಿದ್ದಾರೆ ಎಂದು ಸಂಸದ ಪ್ರತಾಪ್​ ಸಿಂಹ ಸಹೋದರ ವಿಕ್ರಮ್​ ಸಿಂಹನ ವಿರುದ್ಧ ಆರೋಪ ಹೊರಿಸಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಕೊಳ್ಳೆ ಹೊಡೆಯೋದ್ರಲ್ಲೇ ಬಿಜೆಪಿ ಬ್ಯುಸಿ. ದಕ್ಷ ಅಧಿಕಾರಿ ತಹಶೀಲ್ದಾರ್ ಮಮತಾ, ಈ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳೂ ಇದರಲ್ಲಿ ಕೈಜೋಡಿಸಿದ್ದು, ಸಚಿವ ಈಶ್ವರ್​ ಖಂಡ್ರೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ಬಿಜೆಪಿ ಕರ್ನಾಟಕ ಹಾಗು ಬಿಜೆಪಿ ಜನಪ್ರತಿನಿಧಿಗಳು ಮತ್ತು ಅವರ ಕುಟುಂಬಸ್ಥರು ಕೊಳ್ಳೆ ಹೊಡೆಯುವುದರಲ್ಲೇ ಬ್ಯುಸಿಯಾಗಿರುವುದೇಕೆ? ಎಂದು ಪ್ರಶ್ನೆ ಮಾಡಿದೆ.

ಹಾಸನದಲ್ಲಿ ನಡೆದಿದ್ದು ಏನು..? ಆರೋಪ ಯಾಕೆ..?

2024-25ನೇ ಸಾಲಿನಲ್ಲಿ ಶುಂಠಿ ಬೆಳೆಯುವ ಉದ್ದೇಶದಿಂದ ಜಮೀನು ಮಾಲೀಕರಿಂದ ಜಾಗವನ್ನು ಬಾಡಿಗೆಗೆ ಕರಾರು ಮಾಡುಕೊಂಡಿದ್ದ ವಿಕ್ರಂ ಸಿಂಹ, ಜಮೀನಿನಲ್ಲಿದ್ದ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಲು ಯತ್ನ ಮಾಡಿದ್ದಾರೆ ಅನ್ನೋದು ಆರೋಪ. ಬೇಲೂರು ತಹಶೀಲ್ದಾರ್‌ ಮಮತಾ, ಮಧ್ಯಪ್ರವೇಶ ಮಾಡಿ ಮರಗಳು ಅರಣ್ಯ ಇಲಾಖೆಗೆ ಸಾಗಾಟವಾಗುವಂತೆ ಮಾಡಿದ್ದಾರೆ. ರಾತ್ರೋರಾತ್ರಿ ಬೃಹತ್ ಮರಗಳ ಮಾರಣಹೋಮ ಮಾಡಿರುವ ವಿಕ್ರಂ ಸಿಂಹ ವಿರುದ್ಧ ಇಲ್ಲೀವರೆಗೂ ಎಫ್‌ಐಆರ್ ದಾಖಲು ಆಗಿಲ್ಲ ಅನ್ನೋದು ಅಚ್ಚರಿಯಾದರೂ ಸತ್ಯ. ವಿಕ್ರಂ ಸಿಂಹ ಜಮೀನು ಬಾಡಿಗೆ ಪಡೆದ ಕರಾರು ಪತ್ರ ಇದ್ದರೂ ಜಾಗದ ಮಾಲೀಕರ ವಿರುದ್ಧ ಮಾತ್ರ ಎಫ್‌ಐಆರ್ ಮಾಡಿದೆ ಅರಣ್ಯ ಇಲಾಖೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಕಡಿದು ಹಾಕಿ ಕ್ರೌರ್ಯ ಮೆರೆಯಲಾಗಿದೆ. ನಂದಿ, ಹೆಬ್ಬೇವು, ಹಲಸು, ಅಂಟ್ವಾಳ, ಬೀಟೆ, ತ್ಯಾಗ, ಹೊನ್ನೆ ಜಾತಿಯ ಬೃಹತ್ ಗಾತ್ರದ ಮರಗಳನ್ನು ಕತ್ತರಿಸಲಾಗಿದೆ. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ನಂದಗೊಂಡನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೇಮಾವತಿ ಮುಳುಗಡೆ ಸಂತ್ರಸ್ತರಿಗೆ ಮಂಜೂರಾಗಿದ್ದ ಹಾಗೂ ಸರ್ಕಾರಿ ಗೋಮಾಳ‌ ಜಾಗದಲ್ಲಿ ಬೆಳೆದಿದ್ದ ನೂರಾರು ನೆಲಸಮ ಆಗಿವೆ.

ಪ್ರತಾಪ್​ ಸಿಂಹನ ಪಾತ್ರ ಏನಿದೆ ಇದರಲ್ಲಿ..?

ಪ್ರತಾಪ್​ ಸಿಂಹ ಪಾಸ್​ ಕೊಟ್ಟ ಬಳಿಕ ಯುವಕ ಮನೋರಂಜನ್​ ಸಂಸತ್​ನಲ್ಲಿ ಹುಚ್ಚಾಟ ಆಗಿದ್ದ.. ಇನ್ನು ವಿಕ್ರಂ ಸಿಂಹ ಬಾಡಿಗೆಗೆ ಪಡೆದ ಜಮೀನು ಮಾಲೀಕ ಮರಗಳನ್ನು ಕತ್ತರಿಸಿ ಮಾರಾಟ ಮಾಡಿದ್ದಾನೆ. ಇದರಲ್ಲಿ ವಿಕ್ರಂ ಸಿಂಹನ ಪಾತ್ರವೂ ಇಲ್ಲ. ಆದರೂ ಪ್ರತಾಪ್​ ಸಿಂಹನ ಸಹೋದರ ಅನ್ನೋ ಕಾರಣಕ್ಕೆ ಆರೋಪಗಳ ಸುರಿಮಳೆ ಆಗ್ತಿದೆ. ವಿಕ್ರಂ ಸಿಂಹನ ಪಾತ್ರ ಇದ್ದರೆ ಖಂಡಿತ ಸರ್ಕಾರ ದೂರು ದಾಖಲು ಮಾಡಿಕೊಂಡು ಬಂಧನ ಮಾಡುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಎಕ್ಸ್​ನಲ್ಲಿ ಪೋಸ್ಟ್​ ಮಾಡುವುದಕ್ಕೆ ಸೀಮಿತ ಆಗುವುದು ಕೇವಲ ಟಾರ್ಗೆಟ್​ ಮಾಡಿದಂತೆ ಕಾಣಿಸುತ್ತದೆ. (Congress) ಕಾಂಗ್ರೆಸ್​ ಸರ್ಕಾರ ಜನಮನ್ನಣೆ ಗಳಿಸುತ್ತಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ನೂರಾರು ಮರಗಳನ್ನು ಕತ್ತರಿಸಿದವರ ವಿರುದ್ಧ ಕೇಸ್​ ಹಾಕಬೇಕು, ತಪ್ಪಿದ್ದರೆ ಬಂಧನ ಮಾಡಬೇಕು. ಯಾವುದೇ ಸ್ವಂತ ಜಮೀನಿನಲ್ಲೂ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ಅತ್ಯಗತ್ಯ. ಆಗಿದ್ದರೂ ಮರಗಳನ್ನು ಕಡಿದಿದ್ದು ಹೇಗೆ..? ಅರಣ್ಯ ಇಲಾಖೆ ಅನುಮತಿ ನೀಡಿದ್ಯಾ..? ಅನ್ನೋ ಬಗ್ಗೆ ಅರಣ್ಯ ಸಚಿವರು ಉತ್ತರ ಕೊಡಬೇಕಿದೆ. ಇನ್ನು ಮೌನಕ್ಕೆ ಶರಣಾಗಿರುವ ಪ್ರತಾಪ್​ ಸಿಂಹ ಮೌನ ಮುರಿದು ಮಾತನಾಡದಿದ್ದರೆ ಎಲ್ಲವೂ ಸತ್ಯ ಎನ್ನುವಂತಾಗಲಿದೆ.

ಕೃಷ್ಣಮಣಿ

Tags: BJPCongress PartyPrathap shimaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ನಾಳೆ ಹಿಜಾಬ್ ಹಾಕಿದ್ರೆ ನಮ್ಮ ಹುಡುಗರು ಕೇಸರಿ ಹಾಕ್ತಾರೆ, ಇಡೀ ರಾಜ್ಯದ ಶಾಲೆಗಳಲ್ಲಿ ಗಲಾಟೆಗಳಾಗಬಹುದು : ನಳಿನ್‌ಕುಮಾರ್ ಕಟೀಲ್

Next Post

ನಂಜನಗೂಡು ನಗರಸಭೆ ಉಪಚುನಾವಣೆ: ಅಭ್ಯರ್ಥಿ ಪರ ಮುಖ್ಯಮಂತ್ರಿ ಚಂದ್ರು ಪ್ರಚಾರ

Related Posts

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ
ಕರ್ನಾಟಕ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

by ಪ್ರತಿಧ್ವನಿ
April 12, 2026
0

ಧಾರವಾಡ: ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.ಏಪ್ರಿಲ್...

Read moreDetails
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
Next Post
ನಂಜನಗೂಡು ನಗರಸಭೆ ಉಪಚುನಾವಣೆ: ಅಭ್ಯರ್ಥಿ ಪರ ಮುಖ್ಯಮಂತ್ರಿ ಚಂದ್ರು ಪ್ರಚಾರ

ನಂಜನಗೂಡು ನಗರಸಭೆ ಉಪಚುನಾವಣೆ: ಅಭ್ಯರ್ಥಿ ಪರ ಮುಖ್ಯಮಂತ್ರಿ ಚಂದ್ರು ಪ್ರಚಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada