ಮೈಸೂರು(mysore) ಸಂಸದ ಪ್ರತಾಪ್ ಸಿಂಹ(prathap simha) ಸಾಮಾಜಿಕ ಜಾಲತಾಣದಲ್ಲಿ(social media) ಶೇರ್ ಮಾಡುವ ಪೋಸ್ಟ್‌ಗಳಿಂದ ಟ್ರೋಲ್(troll) ಆಗೋದು ಹೊಸ ವಿಷಯ ಏನಲ್ಲ. ನಿನ್ನಯಷ್ಟೇ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ(karnataka assembly election results) ಹೊರಬಿದ್ದಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಬಹುಮತ ಪಡೆದು ಭರ್ಜರಿ ಜಯ ಸಾಧಿಸಿದೆ. ಒಂದೆಡೆ ಕಾಂಗ್ರೆಸ್ ಗೆಲುವನ್ನು ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿಯವರು ಸೋತು ಸುಣ್ಣಾಗಿದ್ದಾರೆ. ಈ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ(prathap simha) ತಮ್ಮ ಕಾರ್ಯಕರ್ತರನ್ನು ಟ್ವೀಟ್ ಮೂಲಕ ಹುರಿದುಂಬಿಸಲು ಪ್ರಯತ್ನಿಸಿ, ಸಿಕ್ಕಾಪಟ್ಟೆ ಟ್ರೋಲ್(troll) ಆಗಿದ್ದಾರೆ.

ಹೌದು.. ʻರಾಜ್ಯದಲ್ಲಿ ಬಿಜೆಪಿ(BJP) ಸೋತಿರುವುದಕ್ಕೆ ಅಧೀರಾಗಬೇಡಿ, ಮತದಾರ ನಮಗಿಂತ ಬುದ್ಧಿವಂತ, ನಮ್ಮನ್ನ 2 ಬಾರಿ ಅಧಿಕಾರಕ್ಕೆ ತಂದಿದ್ದು ಅವರೇʼ ಅಂತ ಪ್ರತಾಪ್ ಸಿಂಹ ಟ್ವೀಟ್(tweet) ಮಾಡಿದ್ದಾರೆ.. ಆದ್ರೆ ಕೆಲ ನೆಟ್ಟಿಗರು ಸಂಸದರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಬಗೆಬಗೆಯ ಕಮೆಂಟ್‌ಗಳನ್ನ ಮಾಡ್ತಿದ್ದಾರೆ.

ʻಧರ್ಮ ಧರ್ಮ ಅಂತ ಎಲೆಕ್ಷನ್(election) ಮಾಡಿದ್ರೆ ಹೀಗೆ ಆಗೋದು, ಕಾಮಿಡಿ ಮಾಡೋದು ನಿಲ್ಸಿ.. ನೆಕ್ಸ್ಟ್ ಎಲೆಕ್ಷನ್ ನಲ್ಲಿ 25 ಕ್ಷೇತ್ರ ಉಳಿಸಿ ಕೊಳ್ಳೋದು ನೋಡಿ. ಮೊದಲು ಒಳ ರಾಜಕೀಯ ಬಿಡಿ. ಕರ್ನಾಟಕದ(karnataka) ಜನಾದೇಶ ಯಾವಾಗ ನಿಮ್ಮ ಪರವಾಗಿ ಇತ್ತು? ಆಪರೇಷನ್ ಕಮಲ ಎಂದರೇನು? ಮುಂದಿನ ಬದಲಾವಣೆ ಕರ್ನಾಟಕದ ಬಿಜೆಪಿ(BJP) ಎಂಪಿ ಗಳನ್ನು ಸಾಮೂಹಿಕವಾಗಿ ಮನೆಗೆ ಕಳುಹಿಸಿವುದು,ಅದರಲ್ಲಿ ತಾವೇ ಮೊದಲಿಗʼ ಅನೇಕ ರೀತಿಯಲ್ಲಿ ಕಮೆಂಟ್ ಮಾಡುವ ಮೂಲಕ ಸಂಸದ ಪ್ರತಾಪ್ ಸಿಂಹ(prathap simha) ಅವರನ್ನ ನೆಟ್ಟಿಗರು ಟೀಕಿಸಿದ್ದಾರೆ.
