ಬಿಜೆಪಿ (Bjp) ನಾಯಕರಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep eshwar) ಸವಾಲು ಹಾಕಿದ್ದಾರೆ. ಹಿಂದೂ ಧರ್ಮದ (Hindu religion) ಬಗ್ಗೆ ಮಠಗಳ ಬಗ್ಗೆ ಮಾತಾಡೋಣ, ಕರ್ನಾಟಕದ ದೇವಾಲಯದ ಅಭಿವೃದ್ಧಿ ಬಗ್ಗೆ ಮಾತಾಡೋಣ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ. ಬಿಜೆಪಿಯವರಿಗೆ ಅಭದ್ರತೆ ಕಾಡ್ತಿದೆ. ಹಿಂದೂ ಧರ್ಮದ ಬಗ್ಗೆ ಪ್ರೀತಿ ಇದ್ರೆ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.

ಇದೇ ವೇಳೆ ಪ್ರತಾಪ್ ಸಿಂಹ ಕುರಿತು ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದು, ಔಟ್ ಡೇಟೆಡ್ ಪೀಸ್ ಯಾಕೆ ಅಂತ..? ಅವರನ್ನು ನಾನು ಆಹ್ವಾನಿಸಲ್ಲ.ಆತ ಬರಲ್ಲ, ಪ್ರತಾಪ ಸಿಂಹ ಡಿಬೇಟ್ ಗೆ ಬರ್ತಾರೆ ಅಂದರೆ ಬ್ಲಾಕ್ ಅಧ್ಯಕ್ಷರನ್ನು ಕಳುಹಿಸುತ್ತೇನೆ. ಅವರ ಜೊತೆಗೆ ಮಾತಾಡ್ಲಿ ಎಂದು ಟೀಕಿಸಿದ್ದಾರೆ.
ಪ್ರತಾಪ್ ಸಿಂಹ ಗೆ ಏನು ಗೊತ್ತಿಲ್ಲ, ಬರೀ ಮುಸ್ಲಿಂ ರನ್ನು ಬೈಯೋದಷ್ಟೇ.. ಬಿಟ್ರೆ ಬೇರೆ ಏನು ಗೊತ್ತಿಲ್ಲ. ನಮ್ಮ ಧರ್ಮವನ್ನು ಯಾರಾದರೂ ಬೈದ್ರೆ ನಮಗೆ ಕೊಪ ಬರುತ್ತೆ, ಹಾಗೆಯೇ ಅವರ ಧರ್ಮಕ್ಕೆ ಯಾರಾದರೂ ಬೈದ್ರೆ ಅವರಿಗೂ ಕೊಪ ಬರಲ್ವಾ..? ಎಂದು ಪ್ರಶ್ನಿಸಿದ್ದಾರೆ.

ಮುಸ್ಲಿಂ ಧರ್ಮದಲ್ಲಿ ಯಾರೋ ನಾಲ್ಕು ಜನ ಕಲ್ಲು ಹೊಡೆದ್ರೆ ಜೈಲಿಗೆ ಹಾಕೋಣ.. ಅದುಬಿಟ್ಟು ಯಾಕೆ ಇಡೀ ಧರ್ಮವನ್ನು ಟಾರ್ಗೆಟ್ ಮಾಡ್ತೀರಾ…?ಅಬ್ದುಲ್ ಕಲಾಂ ಯಾವ ಧರ್ಮದವರು..?ಯತ್ನಾಳ್ ಮನುಷ್ಯೇತರರ ಬಗ್ಗೆ ಮಾತಾಡಲ್ಲ ಅಂತಾರೆ. ಬಿಜಾಪುರ ಹಾಗೂ ಮೈಸೂರಿನಿಂದ ಬಂದಿರುವ ಎರಡು ಕೋತಿಗಳ ಬಗ್ಗೆಯೇ ನಾನು ಮಾತಾಡ್ತೀನಿ ಎಂದು ಪರೋಕ್ಷವಾಗಿ ಯತ್ನಾಳ್ ಹಾಗೂ ಪ್ರತಾಪ್ ಸಿಂಹ ರನ್ನು ಪ್ರದೀಪ್ ಈಶ್ವರ್ ಕೋತಿಗೆ ಹೋಲಿಸಿದ್ದಾರೆ.











