ಚುನಾವಣಾ ತಂತ್ರಜ್ಞ ಕಾಂಗ್ರೆಸ್ ಪಾಲಿನ ಆಶಾಕಿರಣ ಎಂದೇ ಸದ್ದು ಮಾಡಿದ ಪ್ರಶಾಂತ್ ಕಿಶೋರ್ ತಾವು ಕಾಂಗ್ರೆಸ್ ಸೇರುವುದಿಲ್ಲ ಎಂದು ನಿನ್ನೆ ಸಾಯಂಕಾಲ ಸ್ಪಷ್ಟ ಪಡಿಸಿದರು. ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಸಂಬಂಧಿಸಿ ಮತ್ತೊಂದು ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ಹೌದು, ಪ್ರಶಾಂತ್ ಪಕ್ಷದಲ್ಲಿ ಭಾರೀ ದೊಡ್ಡ ಮಟ್ಟದ ಬದಲಾವಣೆಯನ್ನು ಬಯಸಿದ್ದರು, ಒಬ್ಬರನ್ನು ಕಾಂಗ್ರೆಸ್ ಮುಖ್ಯಸ್ಥರಾಗಿ, ಮತ್ತೊಬ್ಬರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಬಯಸಿದ್ದರು.
ಪ್ರಶಾಂತ್ ಪ್ರಿಯಾಂಕರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಬೇಕು ಎಂದು ಬಯಸಿದ್ದರು. ಆದರೆ, ಪಕ್ಷದ ಇತರೆ ನಾಯಕರು ರಾಹುಲ್ ಪುನಃ ಅಧ್ಯಕ್ಷರಾಗಬೇಕು ಎಂದು ಬಯಸಿದ್ದರು.
ಈ ಮಧ್ಯೆ ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದು ರಾಷ್ಟ್ರೀಯ ನಾಯಕರು ಕೈಗೊಂಡಿರುವ ನಿರ್ಧಾರವಾಗಿರುವ ಕಾರಣ ನಾವು ಅದಕ್ಕೆ ಬದ್ದವಾಗಿರುತ್ತೇವೆ. ಈ ಹಿಂದೆ ಪಕ್ಷವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಲಪಡಿಸಲು ಪ್ರಶಾಂತ್ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ ಎಂದು ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಶಾಸಕ ಪ್ರಿಯಾಂಕ ಖರ್ಗೆ, ಕಿಶೋರ್ ಪಕ್ಷ ಸೇರದಿರುವುದು ಅತೀವ ನೋವನ್ನುಂಟು ಮಾಡಿದೆ. ಅವರ ಜೊತೆಗೆ ಕೆಲಸ ಮಾಡಿದ್ದರೆ ಚೆನ್ನಾಗಿರುತಿತ್ತು. ಕಿಶೋರ್ರವರ ಅನುಭವವು ಪಕ್ಷಕ್ಕೆ ಸಾಕಷ್ಟು ಉಪಯೋಗವಾಗುತಿತ್ತು. ಕಿಶೋರ್ ಇದ್ದರು ಅಥವಾ ಇಲ್ಲದಿದ್ದರು ಕಾಂಗ್ರೆಸ್ಗೆ ಚುನಾವಣೆಯಲ್ಲಿ ಗೆಲುವ ಇತಿಹಾಸ ಮತ್ತು ಶಕ್ತಿ ಕಾಂಗ್ರೆಸ್ಗೆ ಇದೆ ಎಂದು ಹೇಳಿದ್ದಾರೆ.