ಕಾಂಗ್ರೆಸ್ ನೀಡಿದ ಆಫರ್ ಅನ್ನು ನಿರಾಕರಿಸಿದ ಬೆನ್ನಲ್ಲೇ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಇದೀಗ ವಿಭಿನ್ನವಾಗಿ ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ದ್ವಂದ್ವಾರ್ಥಕವಾಗಿ ಟ್ವೀಟ್ ಮಾಡಿರುವ ಪ್ರಶಾಂತ್, ತಾವು ಚುನಾವಣಾ ತಂತ್ರಗಾರಿಕೆಯಲ್ಲಿ 10 ವರ್ಷ ಪೂರೈಸಿದ ಕಾರಣ ತಮ್ಮ ತವರು ರಾಜ್ಯ ಬಿಹಾರಕ್ಕೆ ಹಿಂತಿರುಗುವದಾಗಿ ಟ್ವೀಟ್ ಮಾಡಿದ್ದಾರೆ.
2014ರಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಪ್ರಶಾಂತ್ ನಂತರದ ದಿನಗಳಲ್ಲಿ ಬಿಜೆಪಿಯೇತರ ಪಕ್ಷಗಳಿಗು ಸಹ ಕೆಲಸ ಮಾಡಿದ್ದರು.
ಕಳೆದ ವರ್ಷ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಪ್ರಶಾಂತ್ ಡಿಎಂಕೆ ಹಾಗು ಟಿಎಂಸಿ ಪರ ಕೆಲಸ ಮಾಡಿದ್ದ ಪ್ರಶಾಂತ್, 2015ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಹಾಗು ಆರ್ಜೆಡಿ ಮೈತ್ರಿ ಸರ್ಕಾರದ ರಚನೆಯಲ್ಲಿ ಪ್ರಶಾಂತ್ ಪ್ರಮುಖ ಪಾತ್ರವಹಿಸಿದ್ದರು.