ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಚರ್ಚೆ ನಡೆಸಿದ ಒಂದು ದಿನದ ನಂತರ, ಚುನಾವಣಾ ಚಾಣಾಕ್ಷ್ಯ ಅಂತಲೇ ಹೆಸರಾಗಿರುವ ಪ್ರಶಾಂತ್ ಭಾರತದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೇಸ್ ಸೇರಬಹುದು ಎಂದು ಮೂಲಗಳು ಸೂಚಿಸಿವೆ.
ಮೂವರೂ ಗಾಂಧಿಗಳು ಮಂಗಳವಾರ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಅವರೊಂದಿಗೆ ಚರ್ಚೆಯ ಭಾಗವಾಗಿದ್ದರು.
ಈ ಸಭೆಯು ಪಂಜಾಬ್ / ಉತ್ತರ ಪ್ರದೇಶದ ಚುನಾವಣೆಗಳ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದ್ದು 2024 ರ ಲೋಕಸಭಾ ಚುನಾವಣೆಗೆ ಏನಾದರೂ ದೊಡ್ಡದಾದ ಪ್ಲಾನ್ ಸಿದ್ಧಪಡಿಸುವಲ್ಲಿ ಪ್ರಶಾಂತ್ ಕಿಶೋರ್ ಮಹತ್ವದ ಪಾತ್ರವನ್ನು ವಹಿಸಬಹುದು ಎಂಬ ಸೂಚನೆ ಇದೆ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳನ್ನು ತನ್ನ ಪ್ರಭಾವಶಾಲಿ ಮತದಾನದ ಗೆಲುವಿಗೆ ಸೇರಿಸಿದ ಕಿಶೋರ್, ಈ ಹಿಂದೆ ತಾನು ಈ ಕೆಲಸದಲ್ಲಿ ಮುಂದುವರಿಯಲು ಬಯಸುವುದಿಲ್ಲ ಮತ್ತು “ಈ ಜಾಗವನ್ನು ತ್ಯಜಿಸುತ್ತಿದ್ದೇನೆ” ಎಂದು ಹೇಳಿದ್ದರು.
“ನಾನು ಈಗ ಏನು ಮಾಡುತ್ತಿದ್ದೇನೊ ಅದನ್ನು ಮುಂದುವರಿಸಲು ನಾನು ಬಯಸುವುದಿಲ್ಲ. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ವಿರಾಮ ತೆಗೆದುಕೊಂಡು ಜೀವನದಲ್ಲಿ ಬೇರೆ ಏನಾದರೂ ಮಾಡುವ ಸಮಯ ಇದು. ನಾನು ಈ ಜಾಗವನ್ನು ತ್ಯಜಿಸಲು ಬಯಸುತ್ತೇನೆ” ಎಂದು ಮೇ ತಿಂಗಳಲ್ಲಿ ಪ್ರಶಾಂತ್ ಕಿಶೋರ್ ಖಾಸಗಿ ವಾಹಿನಿಯ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದರು. ರಾಜ್ಯ ಚುನಾವಣಾ ಫಲಿತಾಂಶದ ಒಂದು ದಿನದ ನಂತರ ತನ್ನ ಗ್ರಾಹಕರಾದ ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ಮತ್ತು ತಮಿಳುನಾಡಿನ ಎಂ.ಕೆ.ಸ್ಟಾಲಿನ್ ಅವರಿಗೆ ದೊಡ್ಡ ಗೆಲುವು ಕಂಡವು.
ಮತ್ತೆ ರಾಜಕೀಯಕ್ಕೆ ಸೇರುತ್ತಾರೆಯೇ ಎಂಬ ಬಗ್ಗೆ ಮಾತನಾಡಿದ ಅವರು, “ನಾನು ವಿಫಲ ರಾಜಕಾರಣಿ, ನಾನು ಹಿಂತಿರುಗಿ ನಾನು ಏನು ಮಾಡಬೇಕು ಎಂದು ನೋಡಬೇಕು.” ತಮ್ಮ ಕುಟುಂಬದೊಂದಿಗೆ ಅಸ್ಸಾಂಗೆ ಹೋಗಿ “ಚಹಾ ತೋಟಗಾರಿಕೆ” ಮಾಡುವ ಬಗ್ಗೆ ಮಾತನಾಡಿದ್ದರು.
ಈ ಕೆಲಸದಲ್ಲಿ ಮುಂದುವರಿಯಲು ಬಯಸುವುದಿಲ್ಲ ಮತ್ತು “ಈ ಜಾಗವನ್ನು ತ್ಯಜಿಸುತ್ತಿದ್ದೇನೆ” ಎಂದು ಹೇಳಿದ ನಂತರ ನಿತೀಶ್ ಕುಮಾರ್ ಅವರ ಜನತಾದಳ ಯುನೈಟೆಡ್ ಜೊತೆಗಿನ ರಾಜಕೀಯದ ಮಾತುಕತೆಗೆ ಕಾರಣವಾಗಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಈಗ ಕಾಂಗ್ರೇಸ್ ನಾಯಕರೊಂದಿಗಿನ ಈ ಚರ್ಚೆ ಪ್ರಶಾಂತ್ ಕಿಶೋರ್ ಮತ್ತೆ ರಾಜಕೀಯದಲ್ಲಿ ಸಂಕ್ರಿಯರಾಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.