ಖ್ಯಾತ ಚುನಾವಣಾ ತಂತ್ರಜ್ಞ ಹಾಗೂ ಕಾಂಗ್ರೆಸ್ಸಿನ ಮಾಜಿ ಸಹವರ್ತಿಯಾಗಿರುವ ಪ್ರಶಾಂತ್ ಕಿಶೋರ್ ಈಗ ಕಾಂಗ್ರೆಸ್ನೊಂದಿಗೆ ಒಂದು ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.
ಈ ವರ್ಷದ ಕೊನೆಯಿಂದ ಶುರುವಾಗುವ ಸರಣಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪ್ರಚಾರದ ಜವಾಬ್ದಾರಿಯನ್ನು ಸುನೀಲ್ ಕಾನೂಗೋಲು ವಹಿಸಿಕೊಂಡಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಜವಾಬ್ದಾರಿ ಯಾರಿಗೆ ವಹಿಸಬೇಕು ಎಂದು ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ವಕ್ತಾರರೊಬ್ಬರು ಹೇಳಿದ್ದಾರೆ.
2014ರಲ್ಲಿ ಪ್ರಶಾಂತ್ ಕಿಶೋರ್ ಜೊತೆಗೆ ಬಿಜೆಪಿಗೆ ಪ್ರಚಾರದ ಮೂಲಕ ಬ್ಲಾಕ್ಬಸ್ಟರ್ ಗೆಲುವನ್ನು ತಂದುಕೊಟ್ಟಿದ್ದ ಸುನೀಲ್ ಕನುಗೋಲು ಈ ಭಾರೀ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿದ್ದಾರೆ. ಪ್ರಶಾಂತ್ ಕಿಶೋರ್ ಸಹವರ್ತಿಯಾಗಿರುವ ಕನುಗೋಲು ಬಿಜೆಪಿ, ಡಿಎಂಕೆ, ಎಐಎಡಿಎಂಕೆ ಮತ್ತು ಅಕಾಲಿದಳದೊಂದಿಗೆ ಕೆಲಸ ಮಾಡಿದ್ದಾರೆ.
ಕಳೆದ ವರ್ಷ ಬಂಗಾಳ ಚುನಾವಣೆಯ ಗೆಲುವಿನ ನಂತರ PK ಎಂದೇ ಖ್ಯಾತಿ ಪಡೆದಿದ್ದ ಕಿಶೋರ್ , ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಜೊತೆಗೆ ನಿರಂತರ ಮಾತುಕತೆ ನಡೆಸುತ್ತಾ ಬಂದಿದ್ದರು. ಪ್ರಶಾಂತ್ಗೆ ಅಜೀವ ಕಾಂಗ್ರೆಸ್ ಸದಸ್ಯತ್ವ ನೀಡುವುದರ ಬಗ್ಗೆ ಚರ್ಚೆಗಳು ನಡೆದಿದ್ದವು.
ಹಲವಾರು ಸುತ್ತಿನ ಮಾತುಕತೆ ನಡೆದ ನಂತರ ಪಿಕೆಯೊಂದಿಗಿನ ಮಾತುಗಳು ವಿಫಲವಾದವು. ಕಿಶೋರ್ ಸಹವರ್ತಿ ಕನುಗೋಲುರನ್ನು AIADMK ನೇಮಿಸಿದರೆ ಇತ್ತ ಡಿಎಂಕೆ ಪ್ರಶಾಂತ್ ಕಿಶೋರ್ರನ್ನು ನೇಮಿಸಿತ್ತು.
ಮೊದಮೊದಲಿಗೆ ಕಾಂಗ್ರೆಸ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದರು ಅವರು ಅಕಾಲಿದಳದೊಂದಿಗೆ ಕೆಲಸ ಮಾಡಲು ಹೆಚ್ಚು ಉತ್ಸುಕರಾಗಿದ್ದರು ಎಂದು ತಿಳಿದು ಬಂದಿತ್ತು ನಂತರ ಅವರು ಕಾರಣಾಂತರಗಳಿಂದ ಒಪ್ಪಿಕೊಂಡರು.
ಸದ್ಯ ತಿಳಿದುಬಂದಿರುವ ಮಾಹಿತಿ ಪ್ರಕಾರ ಸುನೀಲ್ 2023ರಲ್ಲಿ ಚುನಾವಣೆ ನಡೆಯಲಿರುವ ಕರ್ನಾಟಕ ಹಾಗು ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಕೆಲಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
2014ರಲ್ಲಿ ಬಿಜೆಪಿ ಜೊತೆಗೆ ಕೆಲಸ ಮಾಡಿದ ಕನುಗೋಲು 2017ರಲ್ಲು ಸಹ ಬಿಜೆಪಿ ಜೊತೆಗೆ ವಿಧಾನಸಭಾ ಚುನಾವನೆಗಳಲ್ಲಿ ಕೆಲಸ ಮಾಡಿದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಸ್ಟಾಲಿನ್ ನೇತೃತ್ವದ DMKಯೊಂದಿಗೆ ಕೆಲಸ ಮಾಡಿದ್ದರು.