ಗದಗ : ಭಜರಂಗದಳ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಭಜರಂಗದಳ ಬ್ಯಾನ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಭಜರಂಗದಳ ಏನ್ ಪಾಪ ಮಾಡಿದೆ, ಏನ್ ದ್ರೋಹ ಮಾಡಿದೆ. ಕೊಲೆ ಮಾಡಿದೆಯಾ? ರೇಪ್ ಮಾಡಿದೆಯಾ? ಕೋಟಾ ನೋಟು ಪ್ರಿಂಟ್ ಮಾಡಿದೆಯಾ? ನಿನ್ಮ ಹಾಗೆ ಭ್ರಷ್ಟ ವ್ಯವಸ್ಥೆಯಲ್ಲಿ ತೊಡಗಿದೆಯಾ? ದೇಶಭಕ್ತ ಸಂಘಟನೆ ಭಜರಂಗದಳ.


ಭಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ, ಮುಸ್ಲಿಂ ತುಷ್ಠೀಕರಣ, ಮುಸ್ಲೀಮರನ್ನ ಒಟ್ಟಾಗಿ ಓಟ್ ಹಾಕಿದ್ದನ್ನ ತಲೆ ಮೇಲೆ ಇಟ್ಟುಕೊಂಡು ಕುಣಿಯೋದು ಇದೆಯಲ್ಲ ನಾಳೆ ದೊಡ್ಡ ಅನಾಹುತಕ್ಕೆ ಕಾರಣ ಆಗತ್ತೆ ಎಂದು ಹೇಳಿದ್ದಾರೆ. ಈ ರೀತಿಯ ಹೇಳಿಕೆಗಳನ್ನ ಕೊಡದೆ ಪ್ರಾಮಾಣಿಕವಾಗಿ ಕರ್ನಾಟಕದಲ್ಲಿ ಜನಸೇವೆ ಮಾಡಿದರೆ ಮತ್ತೆ ಮುಂದಿನಬಾರಿ ಮತ್ತೆ ಬರ್ತಿರಿ, ಇಲ್ಲಾಂದ್ರೆ ರಾಜ್ಯಾದ್ಯಂತ ಶ್ರೀರಾಮಸೇನೆ ಸಂಘಟನೆ ಹೋರಾಟ ಮಾಡಬೇಕಾಗತ್ತೆ ಅಂತಾ ಕಾಂಗ್ರೆಸ್ ಗೆ ಎಚ್ಚರಿಕೆ ಕೊಡ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.







