• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಪ್ರೇಮಿಗಳ ದಿನದಂದು ಪ್ರೇಮಂ ಪೂಜ್ಯಂ 2 ; ಪ್ರೇಮ್ ಹೊಸ ಚಿತ್ರಕ್ಕೆ ಫೆಬ್ರವರಿ 14ಕ್ಕೆ ಚಾಲನೆ

Any Mind by Any Mind
January 2, 2022
in ಸಿನಿಮಾ
0
ಪ್ರೇಮಿಗಳ ದಿನದಂದು ಪ್ರೇಮಂ ಪೂಜ್ಯಂ 2 ; ಪ್ರೇಮ್ ಹೊಸ ಚಿತ್ರಕ್ಕೆ ಫೆಬ್ರವರಿ 14ಕ್ಕೆ ಚಾಲನೆ
Share on WhatsAppShare on FacebookShare on Telegram

ಕೆಲವು ವರ್ಷಗಳ ಹಿಂದೆ ಮಲಯಾಳಂ ನಲ್ಲಿ ಬಂದ ‘ಪ್ರೇಮಂ’ ಚಿತ್ರ ಸೌತ್ ಇಂಡಿಯನ್ ಸಿನಿಮಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅದೇ ಹೆಸರನ್ನ ಹೋಲುವ ನೆನಪಿರಲಿ ಪ್ರೇಮ್ ಅವರ ‘ಪ್ರೇಮಂ ಪೂಜ್ಯಂ’ ಚಿತ್ರ ಅದರಷ್ಟಲ್ಲದಿದ್ದರೂ ತಕ್ಕ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆದಿತ್ತು. ಈಗ ಅದರ ಯಶಸ್ಸಿನ ಮುಂದುವರಿದ ಭಾಗವಾಗಿ, ‘ಪ್ರೇಮಂ ಪೂಜ್ಯಂ’ ಚಿತ್ರದ ಎರಡನೇ ಭಾಗ ಸಿದ್ಧವಾಗುತ್ತಿದೆ.

ADVERTISEMENT

ನೆನಪಿರಲಿ ಪ್ರೇಮ್ ಅಭಿನಯದ ಸಿನಿಮಾ ಎಂದರೆ ಕಾಲೇಜ್ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು, ಅವರು ಆರಂಭದಿಂದಲೂ ಯೂಥ್‌ಬೇಸ್ಡ್ ಲವ್‌ಸ್ಟೋರಿಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ಬಿಡುಗಡೆಯಾದ ಪ್ರೇಮ್ ಅಭಿನಯದ ೨೫ನೇ ಚಿತ್ರ ಪ್ರೇಮಂ ಪೂಜ್ಯಂನಲ್ಲೂ ಸಹ ಅವರು ಮೆಡಿಕಲ್ ಸ್ಟೂಡೆಂಟ್ ಆಗಿ ಕಾಣಿಸಿಕೊಂಡು ಯುವಪ್ರೇಮಿಗಳ ಮನಸ್ಸು ಗೆದ್ದಿದ್ದರು. ಡಾ.ಬಿ.ಎಸ್. ರಾಘವೇಂದ್ರ ಅವರ ನಿರ್ದೇಶನದ ಪ್ರೇಮಂಪೂಜ್ಯಂ ಚಿತ್ರ ಬಿಡುಗಡೆಯಾದೆಲ್ಲೆಡೆ ಯಶಸ್ವೀ ಪ್ರದರ್ಶನ ಕಂಡಿತ್ತು.

ಇದೀಗ ಚಿತ್ರ ೫೦ನೇ ದಿನಕ್ಕೆ ಸನಿಹದಲ್ಲಿದ್ದು, ನೂರನೇ ದಿನದತ್ತ ದಾಪುಗಾಲು ಹಾಕಿದೆ. ಚಿತ್ರವನ್ನು ವೀಕ್ಷಿಸಿದ ತಮಿಳು, ತೆಲುಗು ನಿರ್ಮಾಪಕರಿಂದ ರೀಮೇಕ್ ಹಕ್ಕಿಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಅಲ್ಲದೆ ಓಟಿಟಿಯಿಂದಲೂ ಉತ್ತಮ ಆಫರ್ ಬರುತ್ತಿದ್ದು, ನಿರ್ಮಾಪಕರು ಸದ್ಯ ಯಾವುದನ್ನೂ ಒಪ್ಪಿಕೊಳ್ಳದೆ ಚಿತ್ರವು ನೂರು ದಿನಗಳ ಪ್ರದರ್ಶನವಾದ ನಂತರ ನಿರ್ಧಾರ ಮಾಡಲು ಯೋಚಿಸಿದ್ದಾರೆ.

ಇದರ ಜೊತೆಗೆ ಈಗಾಗಲೇ ನಿರ್ದೇಶಕ ಡಾ.ಬಿ.ಎಸ್. ರಾಘವೇಂದ್ರ ಅವರು ಚಿತ್ರದ ಮುಂದುವರಿದ ಭಾಗವಾಗಿ ಪ್ರೇಮಂ ಪೂಜ್ಯಂನ ಸೀಕ್ವೇಲ್ ಮಾಡಲು ಮುಂದಾಗಿದ್ದು, ಈಗಾಗಲೇ ಇದಕ್ಕೆ ಚಿತ್ರಕಥೆಯನ್ನೂ ಸಹ ರೆಡಿ ಮಾಡಿಕೊಂಡಿದ್ದಾರೆ. ಮುಂದಿನ ಭಾಗದಲ್ಲಿ ಒಂದಷ್ಟು ಕುತೂಹಲಕರ ಕಥೆಯನ್ನು ಬಿಚ್ಚಿಡಲು ನಿರ್ಧರಿಸಿದ್ದಾರೆ.

ಪ್ರೇಮಿಗಳ ದಿನವಾದ ೨೦೨೨ರ ಫೆಬ್ರವರಿ ೧೪ರಂದು ಪೇಮಂ ಪೂಜ್ಯಂ ಚಿತ್ರದ ೨ನೇ ಭಾಗಕ್ಕೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ಕಲಾವಿದ, ತಂತ್ರಜ್ಞರೇ ಈ ಚಿತ್ರದಲ್ಲೂ ಸಹ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.

ನಾಯಕನ ಪ್ರೀತಿಯ ಕಥೆಯ ವಿವಿಧ ಮಜಲುಗಳನ್ನು ಹೇಳುವ ಕಥೆಯಿರುವ ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾರೇ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶವಿದೆ.

Tags: ಕಾಲೇಜ್ ವಿದ್ಯಾರ್ಥಿಡಾ.ಬಿ.ಎಸ್. ರಾಘವೇಂದ್ರತಮಿಳುತೆಲುಗುಪ್ರೇಮಂ ಪೂಜ್ಯಂಪ್ರೇಮಂ ಪೂಜ್ಯಂ 2ಪ್ರೇಮಿಗಳ ದಿನಪ್ರೇಮ್ ಹೊಸ ಚಿತ್ರಸೌತ್ ಇಂಡಿಯನ್ ಸಿನಿಮಾ
Previous Post

ಸಂಕ್ರಾಂತಿಯ ಬಳಿಕ ಸಂಪುಟ ಪುನರ್ ರಚನೆ: ಆರಗ ಖಾತೆಗೆ, ಈಶ್ವರಪ್ಪ ಸ್ಥಾನಕ್ಕೆ ಕೋಕ್?

Next Post

ಬ್ರಿಟಿಷರ ವಿರುದ್ಧ ಬಂಡೆದ್ದಿದ್ದ ಆದಿವಾಸಿಗಳ ನಾಯಕ ತಿಲ್ಕಾ ಮಾಂಝಿಯ ರೋಚಕ ಕಥೆ

Related Posts

ಕೋಮಲ್‌ ಬರ್ತ್‌ ಡೇಗೆ ರೋಲೆಕ್ಸ್ ಗಿಫ್ಟ್‌!‌ ಗ್ಲಿಮ್ಸ್‌, ಪೋಸ್ಟರ್‌ ಹೊರಬಂತು
ಸಿನಿಮಾ

ಕೋಮಲ್‌ ಬರ್ತ್‌ ಡೇಗೆ ರೋಲೆಕ್ಸ್ ಗಿಫ್ಟ್‌!‌ ಗ್ಲಿಮ್ಸ್‌, ಪೋಸ್ಟರ್‌ ಹೊರಬಂತು

by ಪ್ರತಿಧ್ವನಿ
July 4, 2026
0

ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕೋಮಲ್ ಕುಮಾರ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ, ಅವರ ಬಹುನಿರೀಕ್ಷಿತ 'ರೋಲೆಕ್ಸ್' ಚಿತ್ರದ ತಂಡ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಚಿತ್ರದ ಮೊದಲ...

Read moreDetails
ಚಿತ್ರ ವಿಮರ್ಶೆ: ಇದೊಳ್ಳೆ ಗ್ರಾಮಾಯಣ!

ಚಿತ್ರ ವಿಮರ್ಶೆ: ಇದೊಳ್ಳೆ ಗ್ರಾಮಾಯಣ!

July 4, 2026
ನಟ ದರ್ಶನ್ ಜಾಮೀನು ಕನಸು ಭಗ್ನ: ಸುಪ್ರೀಂ ಕೋರ್ಟ್​​ನಲ್ಲಿ ಮತ್ತೆ ಹಿನ್ನಡೆ

ನಟ ದರ್ಶನ್ ಜಾಮೀನು ಕನಸು ಭಗ್ನ: ಸುಪ್ರೀಂ ಕೋರ್ಟ್​​ನಲ್ಲಿ ಮತ್ತೆ ಹಿನ್ನಡೆ

July 3, 2026
ಸುದೀಪ್‌ ಅವರೇ ಫಸ್ಟ್‌ & ಲಾಸ್ಟ್‌ ಚಾಯ್ಸ್! ಈಗ ಚಿತ್ರಕ್ಕೆ ಸುದೀಪ್‌ ಆಯ್ಕೆ ಯಾಕೆ? ರಾಜಮೌಳಿ ಬಿಚ್ಚಿಟ್ಟ ಸತ್ಯ

ಸುದೀಪ್‌ ಅವರೇ ಫಸ್ಟ್‌ & ಲಾಸ್ಟ್‌ ಚಾಯ್ಸ್! ಈಗ ಚಿತ್ರಕ್ಕೆ ಸುದೀಪ್‌ ಆಯ್ಕೆ ಯಾಕೆ? ರಾಜಮೌಳಿ ಬಿಚ್ಚಿಟ್ಟ ಸತ್ಯ

July 3, 2026
ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

ಗಣೇಶ್ ಜೊತೆಗಿನ ಮದುವೆ ಬಳಿಕ ಏನೆಲ್ಲಾ ನಡೆಯಿತು? ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಶಿಲ್ಪಾ

July 2, 2026
Next Post
ಬ್ರಿಟಿಷರ ವಿರುದ್ಧ ಬಂಡೆದ್ದಿದ್ದ ಆದಿವಾಸಿಗಳ ನಾಯಕ ತಿಲ್ಕಾ ಮಾಂಝಿಯ ರೋಚಕ ಕಥೆ

ಬ್ರಿಟಿಷರ ವಿರುದ್ಧ ಬಂಡೆದ್ದಿದ್ದ ಆದಿವಾಸಿಗಳ ನಾಯಕ ತಿಲ್ಕಾ ಮಾಂಝಿಯ ರೋಚಕ ಕಥೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada