ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ ಇಂದು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಭೇಟಿ ಮಾಡಿ ಅವರಿಗೆ ದೂರು ಸಲ್ಲಿಸಿದೆ.ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರ ನಿಯೋಗ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದೆ. ಪೆನ್ ಡ್ರೈವ್ ಪ್ರಕರಣ ಹಾಗೂ ರೇವಣ್ಣ ವಿರುದ್ಧ ಕಿಡ್ನ್ಯಾಪ್ ಆರೋಪ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಹಾಗೂ ಸತ್ಯಾಸತ್ಯತೆ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಲು ಜೆಡಿಎಸ್ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ. ನಿಯೋಗದಲ್ಲಿ ಶಾಸಕ ಜಿ.ಟಿ.ದೇವೆಗೌಡ, ಮಾಜಿ ಸಚಿವ ಸಾ.ರಾ ಮಹೇಶ್, ಬಂಡೆಪ್ಪ ಕಾಶಂಪೂರ್ ಉಪಸ್ಥಿತರಿದ್ದರು.
ಕುಮಾರಸ್ವಾಮಿ ಕಿಡಿ..
ಪೆನ್ ಡ್ರೈವ್ ಪ್ರಕರಣ ವೈಭವೀಕರಿಸಿದ್ದು ನಾವಲ್ಲ ನೀವು. ಪ್ರಚಾರಕ್ಕೋಸ್ಕರ ಪೆನ್ ಡ್ರೈವ್ ಹಂಚಿಕೆ ಮಾಡಿದ್ರಿ ಅಂತ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ರು. ಪೆನ್ ಡ್ರೈವ್ ಬಿಡುಗಡೆಗೆ ನಾನೇ ಕಾರಣ ಎಂದಿದ್ದಾರೆ. ಕಥೆ ನಿರ್ದೇಶನ ನಿರ್ಮಾಪಕ ನಾನೇ ಎಂದಿದ್ದಾರೆ. ಕಥೆ ನಿರ್ದೇಶನ ನಿರ್ಮಾಪಕ ನಾನೇ ಮಾಡದ್ದೇವೆ . ಸಿನಮಾದಲ್ಲಿ ನಿರ್ದೇಶಕ ನಿರ್ಮಾಪಕನಾಗಿದ್ದೇ. ಆದರೆ ಆ್ಯಕ್ಟ್ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.ಪ್ರಕರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಲಿ ಶಿಕ್ಷೆಯಾಗಬೇಕು. ಇದನ್ನ ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಪ್ರಜ್ಚಲ್ ಪ್ರಕರಣ ನಾವು ಮುಚ್ಚಿ ಹಾಕುತ್ತಿಲ್ಲ. ಪೆನ್ ಡ್ರೈವ್ ಪ್ರಕರಣ ವೈಭವೀಕರಿಸಿದ್ದು ನೀವು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಉದ್ದೇಶ ಕಾಂಗ್ರೆಸ್ ಗೆ ಇಲ್ಲ. ಮೈತ್ರಿ ಮುಂದುವರೆಯುತ್ತೋ ಇಲ್ಲವೋ ಅಂತಾ ಕಾಯುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಪಂಚದಲ್ಲೇ ದೊಡ್ಡ ಹಗರಣ ಎಂದ ಸಚಿವ ಕೃಷ್ಣಭೈರೇಗೌಡರಿಗೆ ತಿರುಗೇಟು ನೀಡಿದ ಹೆಚ್. ಡಿ ಕುಮಾರಸ್ವಾಮಿ, ಬೀದಿಯಲ್ಲಿ ಪೆನ್ ಡ್ರೈವ್ ಚೆಲ್ಲಿದ್ದು ನಾವಾ…? ಪ್ರಚಾರಕ್ಕೋಸ್ಕರ ಪೆನ್ ಡ್ರೈವ್ ಹಂಚಿದ್ರಿ. ತಪ್ಪಿತಸ್ಥರಿಗೆ ಶಿಕ್ಷೆ ಆಗೋದು ನಿಮಗೆ ಬೇಕಿಲ್ಲ. ವಿಡಿಯೋ ಹಂಚಿದವರ ಬಂಧನವಾಗಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಷಡ್ಯಂತ್ರ ಮಾಡಿದರು. ನಾನು ಯಾವತ್ತೂ ಹಿಟ್ ಅಂಡ್ ರನ್ ಮಾಡಲ್ಲ. ನಾನೆಲ್ಲೂ ಒಕ್ಕಲಿಗ ನಾಯಕ ಅಂತಾ ಹೇಳಿಲ್ಲ . ಡಿಕೆಶಿ ನನ್ನ ಮಧ್ಯೆ ಒಕ್ಕಲಿಗ ಪೈಪೋಟಿ ಇಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.