
ಹಾಸನ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಇನ್ನೊಂದು ತಿಂಗಳಲ್ಲಿ ಹೊರಗೆ ಬರ್ತಾರೆ, ಏನು ತಲೆಕೆಡೆಸಿಕೊಳ್ಳಬೇಡಿ, ನಾವು, ನೀವು ಎಲ್ಲರೂ ಒಟ್ಟಿಗೆ ಸ್ವಾಗತ ಮಾಡೋಣ ಎಂದಿದ್ದಾರೆ ಎಂಎಲ್ಸಿ ಸೂರಜ್ ರೇವಣ್ಣ. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಚಾಕೇನಹಳ್ಳಿ ಕಟ್ಟೆ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಮಾತನಾಡಿದ್ದಾರೆ. ಇವತ್ತಿಗೆ ಪ್ರಪಂಚ ಮುಗಿದು ಹೋಗಿಲ್ಲ. ಮುಂದಕ್ಕೂ ರಾಜಕೀಯ ಏನು ಅನ್ನೋದು ನನಗೂ ಗೊತ್ತಿದೆ ಎಂದಿದ್ದಾರೆ.

ಸಹೋದರ ಮಾಜಿ ಸಂಸದ ಪ್ರಜ್ವಲ್ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಆಗ್ತಾರೆ ಎಂದು ಭವಿಷ್ಯ ನುಡಿದಿರುವ ಸೂರಜ್ ರೇವಣ್ಣ, ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರೊ ಪ್ರಜ್ವಲ್ ಜೈಲಿನಿಂದ ಬಿಡುಗಡೆ ಆಗ್ತಾರೆ ಎಂದಿದ್ದಾರೆ. ಯುವಕ ಧನು ಸ್ಮರಣಾರ್ಥ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಎಂಎಲ್ಸಿ ಡಾ.ಸೂರಜ್ ರೇವಣ್ಣ ಮಾತನಾಡಿದರು. ಕ್ರಿಕೆಟ್ ಪಂದ್ಯಾವಳಿಯಿಂದ ಎನು ಕಲಿತೀರಾ..? ಒಂದು ಸಂಘಟನೆ ಮನೋಭಾವ ನಿಮ್ಮಲ್ಲಿ ಬರಲ್ಲ. ಏನು ಕೆಲಸ ಮಾಡದೆ ಹಳ್ಳಿಗಳಲ್ಲಿ ಕೈ ಬೀಸ್ಕೊಂಡು ಹೋಗ್ತಾರೆ. ನಾವು ದಿನ ಬೆಳಗ್ಗೆ ಆದರೆ ನಿಮ್ಮ ಜೊತೆ ಎಲ್ಲಾ ಕಾರ್ಯಕ್ರಮಗಳನ್ನು ಭಾಗವಹಿಸುತ್ತೇವೆ ಎಂದು ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.
ರೇವಣ್ಣ ಅವರು ಎಲ್ಲಾ ಹಳ್ಳಿಗಳಿಗೂ ರಸ್ತೆಗಳನ್ನು ಮಾಡಿದ್ರು. ಈಗೀನ ಜನರೇಷನ್ನಲ್ಲಿ ಎಲ್ಲಾ ಹಳ್ಳಿಗಳಲ್ಲೂ ದೇವಾಲಯ ನಿರ್ಮಾಣ ಮಾಡ್ತಿದ್ದಾರೆ. ನಮ್ಮ ಗ್ರಾಮಕ್ಕೆ ಯಾರು ಹಿತ, ಯಾರು ಅಹಿತ ಅಂತ ಯೋಚನೆ ಮಾಡಬೇಕು ನೀವು. ಶಾಶ್ವತವಾಗಿ ನಿಮ್ಮ ಗ್ರಾಮದ ಕೆಲಸ ಮಾಡಿದವರನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ. ಯುವಕರು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಒಂದು ಕಡೆ ಇರಬೇಕು. ಇನ್ನೊಂದು ನಾಲ್ಕೈದು ತಿಂಗಳಲ್ಲಿ ಸರ್ಕಾರ ಚೇಂಜ್ ಆಗುತ್ತದೆ. ಆ ಕಡೆ ಹೋಗಿರುವವರ ಕಥೆ ಏನು..? ನಿಮ್ಮನ್ನ ಟೆಕ್ನಿಕಲ್ ಪ್ರಶ್ನೆ ಕೇಳುತ್ತಿದ್ದೇನೆ ಎಂದಿದ್ದಾರೆ.

ನಾಲ್ಕೈದು ತಿಂಗಳಲ್ಲಿ ಸರ್ಕಾರ ಬದಲಾವಣೆ ಆಯ್ತು ಅಂದ್ಕೊಳಿ ಆಗ ಬಂದು ಎಚ್.ಡಿ ರೇವಣ್ಣಗೆ ಜೈ ಅಂತಾರೆ, ಇದೇ ಕಥೆ ಎಂದು ಪಕ್ಷ ತೊರೆದು ಕಾಂಗ್ರೆಸ್ ಸೇರಿರುವ ಯುವಕರ ಬಗ್ಗೆ ತೀಕ್ಷ್ಣವಾಗಿ ಮಾತನಾಡಿದ್ದಾರೆ. ಕೆಲವೇ ತಿಂಗಳಲ್ಲಿ ಸರ್ಕಾರ ಬರಲಾಗುತ್ತದೆ ಎಂದು ಭವಿಷ್ಯ ನುಡಿಯುವ ಜೊತೆಗೆ ಸಹೋದರ ಪ್ರಜ್ವಲ್ ರೇವಣ್ಣ ಮುಂದಿನ ತಿಂಗಳು ಜೈಲಿನಿಂದ ಬಿಡುಗಡೆ ಆಗ್ತಾರೆ ಎಂದು ಮಾಹಿತಿಯನ್ನೂ ನೀಡಿರೋದು ವಿಶೇಷ. ಈಗಾಗಲೇ ಸುಪ್ರೀಂಕೋರ್ಟ್ ಕೂಡ ಪ್ರಜ್ವಲ್ಗೆ ಜಾಮೀನು ನಿರಾಕರಣೆ ಮಾಡಿದ್ದು, ಮುಂದಿನ ತಿಂಗಳು ಬೇಲ್ ಎಲ್ಲಿಂದ ಪಡೆಯುತ್ತಾರೆ ಅನ್ನೋದು ಮುಂದಿನ ದಿನಗಳಲ್ಲೇ ಗೊತ್ತಾಗಬೇಕಿದೆ.