ಇತ್ತೀಚೆಗೆ ವೈರಲ್ (viral ) ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಪ್ರಜ್ವಲ್ ರೇವಣ್ಣ (prajwal revanna) ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ಗರಿಗೆದರಿದೆ. ಒಂದು ಕಡೆ ಈಗಾಗಲೇ ಸರ್ಕಾರ ಈ ಪ್ರಕರಣವನ್ನು ಎಸ್.ಐ.ಟಿ (SIT) ತನಿಖೆಗೆ ವಹಿಸಿದ್ದು, ಮತ್ತೊಂದು ಕಡೆ ಪ್ರಜ್ವಲ್ ರೇವಣ್ಣ ತಲೆ ದಂಡ ಆಗ್ಬೇಕು ಎಂಬ ಆಗ್ರಹವೂ ಜೋರಾಗಿದೆ.

ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ (Dk shivakumar) ಶಿವಕುಮಾರ್, ಈ ಪ್ರಕರಣದ ಬಗ್ಗೆ ಕುಮಾರಸ್ವಾಮಿ (Kumaraswamy) ಮತ್ತು ಅವರ ಕುಟುಂಬದ ನಿಲುವು ಏನೇ ಆಗಿರಲಿ, ಆದ್ರೆ ನನ್ನ ಪ್ರಶ್ನೆ ಬಿಜೆಪಿ (Bjp) ಮತ್ತು ಎನ್.ಡಿ.ಎ (NDA) ಮೈತ್ರಿ ಕೂಟಕ್ಕೆ ಎಂದಿದ್ದಾರೆ.
ಇಂಥವರ ಜೊತೆ ಸೇರಿ ಚುನಾವಣೆಗೆ ಹೋಗಿರುವ ಬಿಜೆಪಿ, ಈ ಪ್ರಕರಣದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ಆ ಮೂಲಕ ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸುವ ಯತ್ನ ಮಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಮಾತ್ರ ಈ ಬಗ್ಗೆ ಜಾಣ ಮೌನ ವಹಿಸಿದ್ದಾರೆ.





