ಪ್ರಜ್ವಲ್ ರೇವಣ್ಣ (prajwal revanna) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಎಸ್ಐಟಿಗೆ (SIT) ತಲೆ ನೋವು ತಂದಿಟ್ಟಿದೆ. ಸಾವಿರಾರು ವಿಡಿಯೋಗಳು, ದೊಡ್ಡ ಮಟ್ಟದಲ್ಲಿ ಶೇರ್ ಆಗಿವೆ ಎನ್ನಲಾಗ್ತಿದೆ. ಹೀಗಾಗಿ, ಕೇಸ್ ಟ್ರ್ಯಾಕ್ (case trak) ಮಾಡೋಕೆ ಎಸ್ಐಟಿ ಟೀಂ ಸ್ಮಾರ್ಟ್ ವರ್ಕ್ ಮಾಡೋಕೆ ಪ್ಲಾನ್ ಮಾಡಿದೆ.
ಇಷ್ಟು ದಿನದ ತನಿಖೆಯಲ್ಲಿ (Investegation) ಒಂದಷ್ಟು ಪಾಯಿಂಟ್ಸ್ ಮಾಡಿಕೊಂಡಿರೋ ಎಸ್ಐಟಿ ತನಿಖೆಯನ್ನ ಚುರುಕುಗೊಳಿಸಿದೆ. ಹೊಳೆನರಸೀಪುರ (Hole narasipura) ಎಫ್ಐಆರ್ (FIR) ಕೇಸ್ ಸಂಬಂಧ ಮೈನ್ ಫೋಕಸ್ ಮಾಡೋದು, ಆ ವಿಡಿಯೋಗಳು ಎಲ್ಲಿಂದ ಬಂತು, ಪೆಂಡ್ರೈವ್ (pendrive) ಇದ್ದಿದ್ದು ಸತ್ಯ, ವೈರಲ್ (viral) ಆಗೋವರೆಗೂ ಶೇರ್ ಮಾಡಿದ್ದು ಯಾರು? ಎಂಬ ಸಾಕಷ್ಟು ಅಂಶಗಳ ಬಗ್ಗೆ ತನಿಖೆಯಾಗಬೇಕಿದೆ.
ಪೆಂಡ್ರೈವ್ ಕಾಪಿ ಇದ್ದಿದ್ದು ಇಬ್ಬರ ಬಳಿ, ಮಾಜಿ ಡ್ರೈವರ್ ಕಾರ್ತಿಕ್ (karthik) ಹಾಗೂ ಲಾಯರ್ ದೇವರಾಜೇಗೌಡ (Devaraje gowda) ಹತ್ತಿರ. ಇಬ್ಬರಲ್ಲಿ ಯಾರಿಂದ ಶೇರಾಗಿದೆ ಅನ್ನೋದು ಪತ್ತೆ ಹಟ್ಟೋದು.. ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸೋಕೆ ಎಸ್ಐಟಿ ತಯಾರಿ ಮಾಡಿಕೊಂಡಿದೆ. ಸದ್ಯ ಲಭ್ಯವಿರೋ ಮಾಹಿತಿ ಪ್ರಕಾರ ಕಾರು ಚಾಲಕ ಕಾರ್ತಿಕ್ ಇದನ್ನ ಹರಿಬಿಟ್ಟಿರೋದು ಖಾತ್ರಿ ಎನ್ನಲಾಗ್ತಿದೆ.