ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಇದೆ. ಕೋರ್ಟ್ನಲ್ಲಿ ಸ್ಟೇ ವೆಕೆಟ್ ಆದರೆ ಹಾಸನದ ಸರ್ಕಲ್ನಲ್ಲಿ ಹಾಕ್ತೀನಿ ಎಂದು ಸವಾಲು ಹಾಕಿದ್ದ ವಕೀಲ ದೇವರಾಜೇಗೌಡ ಇದೀಗ ಮಾಧ್ಯಮಗಳ ಎದುರು ಬಂದಿದ್ದಾರೆ. ಅಶ್ಲೀಲ ವಿಡಿಯೋ ದೇಶದಾದ್ಯಂತ ದೊಡ್ಡ ಸಂಚಲನ ಉಂಟು ಮಾಡ್ತಿದೆ. ಆದರೆ ಈ ವಿಡಿಯೋ ನಾನು ಲೀಕ್ ಮಾಡಿದ್ದಲ್ಲ. ಕಳೆದ 15 ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಬಳಿ ಕೆಲಸ ಮಾಡ್ತಿದ್ದೆ ಅಂತಾ ಹೇಳಿಕೊಂಡಿರುವ ಕಾರ್ತಿಕ್ ಎಂಬಾತ ವಿಡಿಯೋ ಇತ್ತು ಎಂದಿದ್ದಾರೆ.

ಈ ಹಿಂದೆ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆಂದು ಕೋರ್ಟ್ ಮೆಟ್ಟಿಲೇರಿದ್ದ ವಕೀಲ ದೇವರಾಜೇಗೌಡ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಕೋರ್ಟ್ನಿಂದ ಸ್ಟೇ ಕೂಡ ತೆಗೆದುಕೊಂಡಿದ್ದರು. ನನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಿದ್ದ ಅಂತಾ ಕಾರ್ತಿಕ್ ಹೇಳಿಕೊಂಡಿದ್ದ. ಕಾಂಗ್ರೆಸ್ ನಾಯಕರ ಹತ್ರ ಹೋಗಿದ್ದೆ, ನ್ಯಾಯ ಸಿಗಲಿಲ್ಲ ಅಂತಾ ನನ್ನ ಬಳಿ ಹೇಳಿಕೊಂಡಿದ್ದ. ಆ ವೇಳೆ ಅಶ್ಲೀಲ ವಿಡಿಯೋ ಬಗ್ಗೆ ಮಾಹಿತಿ ನೀಡಿದ್ದ ಎಂದಿದ್ದಾರೆ.
ನಾನು ವಕೀಲನಾಗಿ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಮಾಡಬೇಕು ಎಂದಾಗ ನನಗೆ ಪೆನ್ ಡ್ರೈವ್ ಕೊಟ್ಟಿದ್ದ. ನಾನು ಯಾರಿಗೂ ಕೊಡಲ್ಲ, ಕೋರ್ಟ್ನಲ್ಲಿ ಜಡ್ಜ್ ಮುಂದೆ ಕೊಡ್ತೀನಿ ಅಂತಾ ಆತನಿಗೆ ಹೇಳಿದ್ದೆ. ಆದ್ರೆ ಅಶ್ಲೀಲ ವಿಡಿಯೋ ಕಾರ್ತಿಕ್ ಕೈಗೆ ಹೇಗೆ ಬಂತು. ಡೌನ್‌ಲೋಡ್ ಮಾಡಿದವರು ಯಾರು.? ಪೆನ್ ಡ್ರೈವ್ ಎಲ್ಲಿಂದ ಬಂತು.? ಪ್ರಜ್ವಲ್ ರೇವಣ್ಣ ಮೊಬೈಲ್ನಲ್ಲಿದ್ದ ವಿಡಿಯೋಗಳು ಕಾರ್ತಿಕ್ಗೆ ಸಿಕ್ಕಿದ್ದು ಹೇಗೆ..? ಅನ್ನೋದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ದೃಶ್ಯ ಮತ್ತು ಪ್ರಿಂಟ್ ಮೀಡಿಯಾ ಮೇಲೆ ಇಂಜೆಕ್ಷನ್ ಆರ್ಡರ್ ತಂದಿದ್ದಾರೆ. ಅದ್ರೆ ಕಾರ್ತಿಕ್ನನ್ನ ಅಲ್ಲಿ ಪಾರ್ಟಿ ಮಾಡಿಲ್ಲ. ಸ್ಟೇ ವೆಕೇಟ್ ಅದ್ರೆ, ವಿಡಿಯೋದಲ್ಲಿರುವ ಹೆಣ್ಣು ಮಕ್ಕಳು ಅನುಮತಿ ಕೊಟ್ರೆ ಎಲ್ಇಡಿ ವಾಲ್ ಹಾಕ್ತೀನಿ ಅಂದಿದ್ದ. 2013ರ ಚುನಾವಣೆಯಲ್ಲಿ ಇದೇ ಕಾರ್ತಿಕ್ ಶ್ರೇಯಸ್ ಪಟೇಲ್ ಜೊತೆ ಇದ್ದ. ಹಲವು ಹಳ್ಳಿಗಳಲ್ಲಿ ಕಾರ್ಯಕ್ರಮ ಮಾಡಿದ್ದ ಎಂದಿದ್ದಾರೆ.

ನನ್ನ ಹೋರಾಟ ನ್ಯಾಯಯುತ ಹೋರಾಟ. ಅದ್ರೆ ಲೋಕಸಭೆ ಚುನಾವಣೆ ಹೊತ್ತಲ್ಲಿ ರಿಲೀಸ್ ಅದ್ರೆ ಅದನ್ನ ದೇವರಾಜೇಗೌಡ ಮಾಡಿದ್ದಾನೆ ಆಂತಾರೆ. ಆದರೆ ನಾನು ವಿಡಿಯೋ ಲೀಕ್ ಮಾಡಿದ್ದಲ್ಲ, ಬೇರೆಯವರು ನೋಡೋಕು ನಾನು ಕೊಟ್ಟಿಲ್ಲ ಎಂದಿದ್ದಾರೆ ವಕೀಲ ದೇವರಾಜೇಗೌಡ. ಆದರೆ ದೇವರಾಜೇಗೌಡರಿಗೆ ವಿಡಿಯೋ ಕೊಟ್ಟ ಕಾರ್ತಿಕ್ ಬೇರೆ ಯಾರಿಗೆ ಕೊಟ್ಟಿದ್ದ.? ಕಾಂಗ್ರೆಸ್ ನಾಯಕರು ಯಾರೆಲ್ಲಾ ವಿಡಿಯೋ ಪಡ್ಕೊಂಡಿದ್ರು ಅನ್ನೋದು ಬಯಲಾಗಬೇಕಿದೆ.