ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ (Prajwal Revanna)ನನ್ನು ಎಸ್ಐಟಿ (SIT) ಪೊಲೀಸರು ಬಸವನಗುಡಿ ನಿವಾಸಕ್ಕೆ ಕರೆತಂದು ಮಹಜರು ನಡೆಸಿದರು.
ಪ್ರಜ್ವಲ್ ರೇವಣ್ಣನನ್ನು ಕರೆ ತಂದ ಸಂದರ್ಭದಲ್ಲಿ ಭವಾನಿ ರೇವಣ್ಣ ತುಳಸಿಕಟ್ಟೆ ಪೂಜೆ ನಡೆಸುತ್ತಿದ್ದರು. ಅಧಿಕಾರಿಗಳು ಮಹಜರು ಮುಗಿಯುವವರೆಗೂ ಪ್ರತ್ಯೇಕ ಜಾಗದಲ್ಲಿ ಇರುವಂತೆ ಸೂಚಿಸಿದರು. ಪ್ರಜ್ವಲ್ ನನ್ನು ಭೇಟಿ ಮಾಡಲು ಮನೆಯ ಸದಸ್ಯರಿಗೆ ಅವಕಾಶ ನೀಡಲಿಲ್ಲ.
ಪ್ರಜ್ವಲ್ ನನ್ನು ಇಂದು ಎಸ್ಐಟಿ ಅಧಿಕಾರಿಗಳು ಕಸ್ಟಡಿ ಅವಧಿ ಮುಗಿಯುವ ಹಿನ್ನೆಲೆಯಲ್ಲಿ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಇನ್ನೂ ಎರಡು ಪ್ರಕರಣಗಳ ತನಿಖೆ ಬಾಕಿ ಹಿನ್ನೆಲೆಯಲ್ಲಿ ಪುನಃ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಕಳೆದ ಹತ್ತು ದಿನಗಳಿಂದ ಪ್ರಜ್ವಲ್ ವಿಚಾರಣೆ ನಡೆಯುತ್ತಿದೆ.