ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ಪ್ರಕರಣದಿಂದ ಬೇಸರಗೊಂಡಿರುವ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD kumaraswamy) ಕುಟುಂಬ ಇದೀಗ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ.ಕೇರಳದ (Kerala) ವೈನಾಡ್ ಕಡೆಗೆ ಹೆಚ್‌ಡಿಕೆ ಹೊರಟಿದ್ದಾರೆ.

ಅನಿತಾ ಕುಮಾರಸ್ವಾಮಿ (Anita kumaraswamy),ನಿಖಿಲ್ ಕುಮಾರಸ್ವಾಮಿ (Nikhil kumaraswamy), ಸೊಸೆ ರೇವತಿ ಸೇರಿದಂತೆ ಇಡೀ ಕುಟುಂಬವೇ ತೆರಳಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇಂದು ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರ ಬಂಧನವಾಗುವ ಸಾಧ್ಯತೆ ಇರೋದ್ರಿಂದ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
3 ದಿನಗಳ ಕಾಲ ಅಲ್ಲೇ ಇದ್ದು ಲೋಕಸಭಾ ಚುನಾವಣೆಯ ಫಲಿತಾಂಶದ ಹಿಂದಿನ ದಿನ ವಾಪಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.