ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ (Congress party) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Cm siddaramaiah) ಮುಡಾ ಪ್ರಕರಣದಿಂದ (Muda case) ಭಯಭೀತರಾಗಿದ್ದಾರೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ (Delhi) ಈ ಬಗ್ಗೆ ಮಾತನಾಡಿದ ಪ್ರಹ್ಲಾದ್ ಜೋಶಿ (Prahallad joshi), ಕಾನೂನಿನ ಭಯದಿಂದ ಸಿಬಿಐ (CBI) ತನಿಖೆಗೆ ನೀಡಿದ ಮುಕ್ತ ಸಮ್ಮತಿಯನ್ನು ವಾಪಸ್ ಪಡೆದು ಸಿಎಂ ಸಿದ್ದರಾಮಯ್ಯ ಕ್ಷುಲ್ಲಕ ರಾಜಕಾರಣ ಮಾಡ್ತಿದ್ದಾರೆ.ಭ್ರಷ್ಟಾಚಾರದಿಂದ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಬೇಕಾದ ಎಲ್ಲ ತಯಾರಿ ನಡೆಸ್ತಿದ್ದಾರೆ ಎಂದಿದ್ದಾರೆ.
ಇಲ್ಲಿವರೆಗೂ ಸಂವಿಧಾನದ ಕುತ್ತಿಗೆ ಹಿಸುಕಿದವರು ಇಂದು ಕೈಯಲ್ಲಿ ಸಂವಿಧಾನ ಹಿಡಿದು ಓಡಾಡ್ತಿದ್ದಾರೆ.ರಾಹುಲ್ ಗಾಂಧಿ (Rahul gandhi), ಸೋನಿಯಗಾಂಧಿ (Sonia gandhi)|ಬೇಲ್ ಮೇಲೆ ಹೊರಗಿದ್ದಾರೆ, ಅವರೇ ಭ್ರಷ್ಟಾಚಾರದ ಪಿತಾಮಹಾರು ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.