ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವ, ಹಿಂದೂ ಧರ್ಮದ (Hindu religion) ಒಂದು ಸಾಮೂಹಿಕ ತೀರ್ಥಯಾತ್ರೆ ಯಶಸ್ವಿಯಾಗಿ ಜರುಗುತ್ತಿರುವ ಪ್ರಯಾಗರಾಜ್‌ನ ಮಹಾಕುಂಭದಲ್ಲಿ (Maha kumbh) ಇಂದು ಕುಟುಂಬ ಸಹಿತ ಪಾಲ್ಗೊಂಡು ಅತ್ಯಂತ ಸಂತಸವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad joshi) ಪೋಸ್ಟ್ ಮಾಡಿದ್ದಾರೆ.

ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ಸುವರ್ಣ ಅವಕಾಶ ನನ್ನದಾಯಿತು. ಇದು ನನಗೆ ಅತ್ಯಂತ ದೈವಿಕ ಕ್ಷಣ. ಮಹಾಕುಂಭ ಒಂದು ಆಧ್ಯಾತ್ಮಿಕ ಅನುಭವ. ಇಲ್ಲಿ ಪವಿತ್ರ ಸ್ನಾನ ಮಾಡುವುದು ನಮಗೆ ಅಲೌಕಿಕ ಶಕ್ತಿಗಳನ್ನು ಒಟ್ಟುಗೂಡಿಸುವ ಅವಕಾಶ ಎಂದಿದ್ದಾರೆ.
ಕುಂಭಮೇಳವು ಭವ್ಯವಾದ ಯಶಸ್ಸು, ನಂಬಿಕೆ ಮತ್ತು ಸಂಸ್ಕೃತಿಯ ಆಚರಣೆಯಾಗಿದ್ದು,ಈಗಾಗಲೇ ಕೋಟಿ ಕೋಟಿ ಜನರು ಈ ಪಾವನ ಉತ್ಸವದಲ್ಲಿ ಪಾಲ್ಗೊಂಡು ಪುನಿತರಾಗಿದ್ದಾರೆ ಎಂದು ಹೇಳಿದ್ದಾರೆ.