ಈ ತಿಂಗಳ ಮಾ.೭ ರಂದು ಸಿಎಂ ಸಿದ್ದರಾಮಯ್ಯ (Cm siddaramaiah) 2025-26 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಇದೊಂದು ಓಲೈಕೆಯ ಪರಮಾವಧಿಯ ಬಜೆಟ್, ಕೇವಲ ಮುಸಲ್ಮಾನರಿಗೆ (Muslim community) ಮಾತ್ರ ಅನುಕೂಲ ಕಲ್ಪಿಸುವ ಬಜೆಟ್, ಇದೊಂದು ಹಲಾಲ್ ಬಜೆಟ್ ಎಂದೆಲ್ಲಾ ಬಿಜೆಪಿ (Bjp) ಬಜೆಟ್ ಅನ್ನು ಟೀಕಿಸಿದೆ.

ಈ ಮಧ್ಯೆ ರಾಜ್ಯ ಸರ್ಕಾರದ ಈ ಬಜೆಟ್ ಕೇವಲ ಮುಸ್ಲಿಮರಿಂದ..ಮುಸ್ಲಿಮರಿಗಾಗಿ..ಮುಸ್ಲಿಮರಿಗೋಸ್ಕರ ಮಾಡಿರುವ ಬಜೆಟ್ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad joshi) ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತ್ನಾಡಿದ ಅವರು, ಇದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಲ್ಲಾ. ಇದು ಒಂದೇ ಸಮುದಾಯದ ಬಜೆಟ್, ಕುಣಿಯಲು ಬಾರದಿದ್ದವರು ನೆಲ ಡೊಂಕು ಅಂದ್ರಂತೆ. ಹೀಗಾಗಿದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದು ನಮ್ಮ ಭಾರತ..ಇದೇನು ಪಾಕಿಸ್ತಾನಾನಾ..? ಬರೀ ಮುಸ್ಲಿಂರಿಗೆ ಅಷ್ಟೇ ಸೌಲಭ್ಯ ನೀಡಲು ಹೇಗೆ ಸಾಧ್ಯ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಕಠಿಣ ಪದಗಳಲ್ಲಿ ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.