ನಿರುದ್ಯೋಗ ಇದೆ ಅಂತ ದೇಶದ ವಿರೋಧಿ, ದೇಶದ್ರೋಹಿ, ಟೆರರಿಸ್ಟ್ ಜೊತೆ ಲಿಂಕ್ ಇಟ್ಟುಕೊಳ್ಳೋಕೆ ಆಗುತ್ತಾ? ಎಂಪಿ, ಎಂಎಲ್‌ಎಗಳನ್ನು ಕೊಲೆ ಮಾಡ್ತೀನಿ ಅಂದ್ರೆ ಆಗುತ್ತಾ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ಸಂಸತ್‌ನಲ್ಲಿ ಒಳ ನುಗ್ಗಲು ನಿರುದ್ಯೋಗವೂ ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ನಿರುದ್ಯೋಗ ಇದೆ ಅಂತ ಹೇಳಿ ನಾನು ಎಂಪಿಯನ್ನೋ, ಎಂಎಲ್‌ಎಯನ್ನೋ ಹೋಗಿ ಕೊಲೆ ಮಾಡ್ತೀನಿ ಅಂದ್ರೆ ಹೇಗೆ? ಕರ್ನಾಟಕದಲ್ಲಿ ನಿರುದ್ಯೋಗ ಇಲ್ಲವಾ? ಛತ್ತೀಸ್‌ಗಢದಲ್ಲಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಇತ್ತು, ಅಲ್ಲಿ ನಿರುದ್ಯೋಗ ಇಲ್ಲವಾ? ನಿರುದ್ಯೋಗ ಇದೆ ಅಂತ ದೇಶದ ವಿರೋಧಿ, ದೇಶದ್ರೋಹಿ, ಟೆರರಿಸ್ಟ್ ಜೊತೆ ಲಿಂಕ್ ಇಟ್ಟುಕೊಳ್ಳೋಕೆ ಆಗುತ್ತಾ, ಹೀಗೆ ಮಾಡೋಕೆ ನಿಮ್ಮ ಬೆಂಬಲ ಇದೆಯಾ ರಾಹುಲ್ ಗಾಂಧಿ? ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಎಷ್ಟು ಚೈಲ್ಡಿಶ್ ಆಗಿ ಮಾತಾಡ್ತಾ ಇದ್ದೀರಾ? ಮೋದಿ ವಿರೋಧ ಮಾಡೋ ಭರದಲ್ಲಿ ರಾಷ್ಟ್ರದ್ರೋಹಿಗಳನ್ನ ಸಮರ್ಥನೆ ಮಾಡಿಕೊಳ್ತೀರಾ? ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ನಿರುದ್ಯೋಗದ ಬಗ್ಗೆ ಪ್ರತ್ಯೇಕ ಚರ್ಚೆ ಮಾಡಲಿ, ಅದಕ್ಕೆ ಉತ್ತರ ಕೊಡೋಕೆ ನಾವು ತಯಾರು ಇದ್ದೇವೆ. ಜಗತ್ತಿನಲ್ಲಿ ವೇಗವಾಗಿ ಬೇಳೆಯುತ್ತಿರೋ ಆರ್ಥಿಕತೆ ನಮ್ಮದು. ಉದ್ಯೋಗ ಸಿಗದೆ ಆರ್ಥಿಕತೆ ಬೆಳೆಯುತ್ತದೆಯಾ? ಎಂದು ಪ್ರಶ್ನಿಸಿದರು.

ಮರ್ಡರ್ ಮಾಡಿದವನಿಗೂ ಅವನದ್ದೇ ಆದ ಲಾಜಿಕ್ ಇರುತ್ತೆ, ಆದರೆ ಇದನ್ನ ಸಮಾಜ ಒಪ್ಪುತ್ತಾ? ಯಾರಾದ್ರೂ ನಾಳೆ ಮರ್ಡರ್ ಮಾಡಿದ್ರು, ರೇಪ್ ಮಾಡಿದ್ರು ಆಗ ಅವನಿಗೆ ಕೆಲಸ ಸಿಗಲಿಲ್ಲ, ಅದಕ್ಕೆ ಮಾಡಿದ ಅಂತ ಹೇಳಿದ್ರೆ ಅದಕ್ಕೆ ಸಮರ್ಥನೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.