ಹಿಜಾಬ್ ವಿವಾದದ (Hijab Row) ನಡುವೆಯೇ ಇಂದಿನಿಂದ ಪಿಯು ಪ್ರಯೋಗಿಕ ಪರೀಕ್ಷೆ (PU practical exam) ಅರಂಭಗೊಂಡಿದೆ. ಈಗಾಗಲೇ ಪ್ರಾಕ್ಟಿಕಲ್ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿರೋ ಪದವಿ ಪೂರ್ವ ಶಿಕ್ಷಣ ಇಲಾಖೆ, ಎಕ್ಸಾಂ ಬರೆಯದೆ ಇದ್ರೆ ಮತ್ತೆ ಪ್ರಾಕ್ಟಿಕಲ್ ಪರೀಕ್ಷೆ ಇರೋದಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಹಿಜಾಬ್ ಸಂಘರ್ಷ ಹಿನ್ನೆಲೆಯಲ್ಲಿ ಮೂರು ದಿನಗಳು ತಡವಾಗಿ ಪರೀಕ್ಷೆ ಆರಂಭ!
ರಾಜ್ಯದಲ್ಲಿ ಇನ್ನೂ ಹಿಜಾಬ್ ವಿವಾದ ಬಗೆಹರಿಯದೇ ಕೋರ್ಟ್ ಕಟಕಟೆಯಲ್ಲೇ ಇದೆ. ಹೀಗಾಗಿ ಕೊರೋನಾ ರೀತಿಯಲ್ಲೇ ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟಂತಾಗಿತ್ತು. ಅದಾಗಿ ಕೋರ್ಟ್ ಶಾಲೆ ಕಾಲೇಜು ಆರಂಭಿಸಲು ಸೂಚನೆ ಕೊಟ್ಟಿತ್ತು. ಹಾಗೆ ಕಾಲೇಜು ಆರಂಭಿಸಿ, ಇದೀಗ ಇಂದಿನಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹಿಜಾಬ್ ಸಂಘರ್ಷದ ನಡುವೆಯೇ ಪ್ರಾಯೋಗಿ ಪರೀಕ್ಷೆ ಆರಂಭಗೊಂಡಿದೆ. ಇಂದಿನಿಂದ ಮಾರ್ಚ್ 25ರ ಒಳಗಾಗಿ ಪ್ರಾಕ್ಟಿಕಲ್ ಎಕ್ಸಾಂ ಮುಗಿಸಲು ಕಾಲೇಜುಗಳಿಗೆ ಇಲಾಖೆ ಸೂಚನೆ ನೀಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಕಾರಣಕ್ಕೂ ಹಿಜಾಬ್ ಅಥವಾ ಕೆಸರಿ ಶಾಲು ಧರಿಸಿ ಬರುವರಿಗೆ ಪರೀಕ್ಷೆಗೆ ಅನುಮತಿ ಇರುವುದಿಲ್ಲ.ಕಾಲೇಜು ಅವರಣಕ್ಕೆ ವಿದ್ಯಾರ್ಥಿ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ಇಲ್ಲ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದಲೇ ಪ್ರಯೋಗಿಕ ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆಗೆ ಹಾಜರಾಗಲು ಇಲಾಖೆ ಹೇಳಿದೆ.
ಇನ್ನು ಎಲ್ಲೆಡೆಯಂತೆ ಮಲ್ಲೇಶ್ವರದ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಆರಂಭಗೊಂಡಿದೆ. ಈ ವೇಳೆ ಮಾದ್ಯಮಗಳಿಗೆ ಮಾತನಾಡಿದ ಮಲ್ಲೇಶ್ವರ ಸರ್ಕಾರಿ ಪಿಯು ಕಾಲೇಜ್ ಪ್ರಾಂಶುಪಾಲ ರತ್ನಾಕರ ಶೆಟ್ಟಿ, ಇಂದಿನಿಂದ ಪ್ರಾಯೋಗಿಕ ಪರೀಕ್ಷೆ ಪ್ರಾರಂಭವಾಗಿದೆ. ಭೌತಶಾಸ್ತ್ರ ವಿಷಯದ ಪ್ರಯೋಗಿಕ ಪರೀಕ್ಷೆ ನಡೆಯುತ್ತಿದೆ. ಒಟ್ಟು ಮೂರು ಕಾಲೇಜ್ ವಿದ್ಯಾರ್ಥಿಗಳು ನಮ್ಮ ಕಾಲೇಜ್ ನಲ್ಲೆ ಪರೀಕ್ಷೆ ಎದುರಿಸುತ್ತಿದ್ದಾರೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಕೋರ್ಟ್ ಆದೇಶ ಪಾಲನೆ ಮಾಡುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲನೆಯಂತೆ ಬಂದು ಪರೀಕ್ಷೆಗೆ ಹಾಜರಾಗಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಆಗಿಲ್ಲ, ಮಕ್ಕಳು ಕೋರ್ಟ್ ಆದೇಶ ಪಾಲನೆ ಮಾಡುತ್ತಿದ್ದಾರೆ ಎಂದರು.

ಪ್ರಾಯೋಗಿಕ ಪರೀಕ್ಷೆ ಗೈರಾದರೆ ಸಮಸ್ಯೆ ಏನು?
ಪಿಯು ಪ್ರಾಯೋಗಿಕ ಪರೀಕ್ಷೆ ಗೈರಾದರೆ ಪ್ರಾಯೋಗಿಕ ಅಂಕ ಸಿಗುವುದಿಲ್ಲ. ಥಿಯೇರಿಯ 70 ಅಂಕಗಳಿಗೆ ಮಾತ್ರ ಪರೀಕ್ಷೆ ಎದುರಿಸಬೇಕು. ಉರ್ತಿಣವಾಗಲು ಥಿಯೇರಿ ಪರೀಕ್ಷೆಯಲ್ಲಿ 70 ಅಂಕಕ್ಕೆ 35 ಅಂಕ ಪಡೆಯಬೇಕು. CET ಪರೀಕ್ಷೆ ಎದುರಿಸಬೇಕು ಅಂದ್ರೆ ಕನಿಷ್ಠ 45 ಅಂಕ ಪಡೆದಿರಬೇಕು. ಥಿಯೇರಿ 70 ಅಂಕಗಳಲ್ಲಿಯೇ 45 ಅಂಕ ಪಡೆದ್ರೆ ಮಾತ್ರ CET ಗೆ ಅವಕಾಶ. ಶೈಕ್ಷಿಕಣ ಭವಿಷ್ಯದ ದೃಷ್ಟಿಯಿಂದ ಪ್ರಾಯೋಗಕ ಅಂಕ ಮುಖ್ಯ. ಹೀಗಾಗಿ ಪ್ರಾಯೋಗಿಕ ಅಂಕ ಪಡೆದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಬಹದು.
ಏಪ್ರಿಲ್ 16ರಿಂದ ಮೇ 6ರ ಒಳಗಾಗಿ ವಾರ್ಷಿಕ ಪರೀಕ್ಷೆ!
ಇಂದು ಆರಂಭಗೊಂಡ ಪ್ರಾಯೋಗಿಕ ಪರೀಕ್ಷೆ ಒಟ್ಟು 30 ಅಂಕಗಳಿಗೆ ನಡೆಯಲಿದೆ. Physics, Chemistry, Biology, Psychology, Computer science, Electronics ವಿಷಯಗಳಿಗೆ ಪ್ರಾಯೋಗಿಕ ಪರೀಕ್ಷೆ ಇರಲಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಡೆಯು ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿಬೇಕು. ಪ್ರಾಯೋಗಿಕ ಪರೀಕ್ಷೆ ಮುಗಿದ ತಕ್ಷಣವೇ ಪಿಯು ಬೋರ್ಡ್ ಗೆ ಪರೀಕ್ಷೆ ಅಂಕಗಳು ಅಪ್ಲೋಡ್ ಮಾಡಬೇಕು. ಇನ್ನು ಮುಖ್ಯ ಪರೀಕ್ಷೆ ಏಪ್ರಿಲ್ 16ರಿಂದ ಮೇ 6ರ ಒಳಗಾಗಿ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹೇಳಿದೆ.


