ಬಾಹುಬಲಿ ಸಿನಿಮಾ ಯಾರಿಗೆ ಯಾನೆ ಗೊತ್ತಿಲ್ಲ ಹೇಳಿ, ಬಾಹುಬಲಿಗೆ ಅಂಗರಕ್ಷಕನಾಗಿದ್ದ ಕಟ್ಟಪ್ಪ ಕೂಡ ಸಖತ್ ಫೇಮಸ್. ಆದರೆ ಇದೀಗ ನಾವು ಹೇಳು ಹೋಗ್ತಿರೋ ವಿಚಾರ ಕಟ್ಟಪ್ಪ ಅಲ್ಲ.. ಕಣ್ಣಪ್ಪ. ನಟ ಪ್ರಭಾಸ್ ಇದೀಗ ಕಣ್ಣಪ್ಪನಾಗಿ ಜನರ ಮುಂದೆ ಬರ್ತಿದ್ದಾರೆ. ವಿಷ್ಣು ಮಂಚು ನಾಯಕ ನಟನಾಗಿ ಅಭಿನಯಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಣ್ಣಪ್ಪ ಪಾತ್ರದಲ್ಲಿ ಪ್ರಭಾಸ್ ಆಕ್ಟೀಂಗ್ ಮಾಡ್ತಿದ್ದಾರೆ. ಏನು ಪಾತ್ರ ಅನ್ನೋ ಕುತೂಹಲ ಮೂಡಿಸಿದೆ.
ನಿನ್ನೆ ಗುರುವಾರ ಪ್ರಭಾಸ್‌ನ ಕಣ್ಣಪ್ಪನ ಅವತಾರ ರಿಲೀಸ್ ಆಗಿದೆ. ಪೋಸ್ಟರ್‌ನಲ್ಲಿ ಪ್ರಭಾಸ್ ಶೂಟಿಂಗ್‌ಗೆ ಎಂಟ್ರಿ ಆಗಿದ್ದಾರೆ ಅನ್ನೋದನ್ನು ತೋರಿಸುವ ಪ್ರಯತ್ನ ಮಾಡಿದೆ ಚಿತ್ರತಂಡ. ಪ್ರಭಾಸ್ ಜಾಯಿನ್ ಶೂಟ್ ಎಂದು ಬರೆಯಲಾಗಿದೆ.
ಕಣ್ಣಪ್ಪ ಚಿತ್ರದಲ್ಲಿ ಅಕ್ಷಯ್ ಕುಮಾರ್, ಮೋಹನ್ ಲಾಲ್, ಮೋಹನ್ ಬಾಬು, ಶರತ್‌ಕುಮಾರ್ ಸೇರಿದಂತೆ ಸಾಕಷ್ಟು ದೊಡ್ಡ ತಾರಾಬಳಗವೇ ಸೇರಿದೆ. ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಕೂಡ ಕಣ್ಣಪ್ಪನ ಟೀಂ ಸೇರ್ಪಡೆ ಆಗಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಕಣ್ಣಪ್ಪನ ಅವತಾರದಲ್ಲಿ ಪ್ರಭಾಸ್ ಬರ್ತಿದ್ದಾರೆ. ಆದರೆ ಶಿವ ಪಾತ್ರ ಮಾಡ್ತಿದ್ದಾರಾ..? ಅನ್ನೋ ಕುತೂಹಲ ಮೂಡಿಸಿದೆ ಪೋಸ್ಟರ್. ಪ್ರಭಾಸ್ ಎಂಟ್ರಿ ಪೋಸ್ಟರ್ ನೋಡಿದವರಿಗೆ ಅನಿಸುತ್ತಿದೆ. ಹುಲಿ ವೇಷಧಾರಿ ಆಗಿ, ಚರ್ಮದ ಚಪ್ಪಲಿ ಧರಿಸಿರುವ ಕಾಲನ್ನು ಮಾತ್ರ ತೋರಿಸಿರುವುದು ಶಿವನೇ ಎದ್ದು ರೋಷಾಗ್ನಿಯಾಗಿ ಬರುವಂತಿದೆ.










