ಬಹುತಾರಾಗಣದಲ್ಲಿ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಪ್ರಭಾಸ್ (Prabhas) ನಟನೆಯ ಕಲ್ಕಿ 2898 ಸಿನಿಮಾ ಈಗಾಗಲೇ ಹೈಪ್‌ನ ಉತ್ತುಂಗದಲ್ಲಿದೆ.
ಫಸ್ಟ್ ಲುಕ್ ಮೂಲಕ ದೊಡ್ಡ ಮಟ್ಟದಲ್ಲಿಯೇ ಗಮನಸೆಳೆದ ಈ ಸಿನಿಮಾದಲ್ಲಿ ನಟ ಪ್ರಭಾಸ್ ಹೇಗೆ ಕಾಣಿಸಲಿದ್ದಾರೆ ಎಂಬುದಕ್ಕೆ ಈಗಾಗಲೇ ಫಸ್ಟ್ ಲುಕ್ ಸುಳಿವು ನೀಡಿತ್ತು. ಈಗ ಶಿವರಾತ್ರಿ (Shivaratri) ಹಬ್ಬದ ಪ್ರಯುಕ್ತ ಇದೇ ಸಿನಿಮಾ ಮತ್ತೆ ಹೊಸ ಪೋಸ್ಟರ್ ಸಮೇತ ಆಗಮಿಸಿದೆ. ಅಭಿಮಾನಿ ವಲಯದಲ್ಲೂ ಕುತೂಹಲ ಮೂಡಿಸಿದೆ.
ಈವರೆಗೂ ಕಲ್ಕಿ ಚಿತ್ರದಲ್ಲಿ ಪ್ರಭಾಸ್ ನಾಯಕ ಎಂಬ ವಿಚಾರ ಗೊತ್ತಿರುವ ಸಂಗತಿ. ಆದರೆ, ಈ ಚಿತ್ರದಲ್ಲಿ ಪ್ರಭಾಸ್ ಪಾತ್ರದ ಹೆಸರೇನು? ಎಂಬ ಕೌತುಕವಿತ್ತು. ಈ ಶಿವರಾತ್ರಿ ಹಬ್ಬದ ಪ್ರಯುಕ್ತ ಕಥಾನಾಯಕನ ಹೆಸರು ರಿವೀಲ್ ಆಗಿದೆ. ಚಿತ್ರದಲ್ಲಿ ಪ್ರಭಾಸ್ ಭೈರವನಾಗಿ ಕಾಣಿಸಿಕೊಳ್ಳಲಿದ್ದಾರೆ. ಭೈರವ ಎಂಬುದು ಶಿವನ ಇನ್ನೊಂದು ಹೆಸರು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ನಾಗ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ರಗಡ್ ಲುಕ್‌ವೊಂದನ್ನು ಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ರಿಲೀಸ್ ಮಾಡಿದೆ. ಪ್ರಭಾಸ್ ಅವರ ಹೊಸ ಪೋಸ್ಟರ್ ಶೇರ್ ಮಾಡಿ, ಭೈರವನನ್ನು ಪರಿಚಯಿಸುತ್ತಿದ್ದೇವೆ. ಕಲ್ಕಿ ಸಿನಿಮಾ ತಂಡದಿಂದ ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು. ಕಾಶಿಯ ಭವಿಷ್ಯದ ಬೀದಿಗಳಿಂದ ಎಂದೂ ಕ್ಯಾಪ್ಶನ್ ಕೊಟ್ಟಿದೆ. ಪೋಸ್ಟರ್‌ನಲ್ಲಿ ಬೃಹತ್ ಫ್ಯಾಕ್ಟರಿಯೊಂದರಲ್ಲಿ ಪ್ರಭಾಸ್ ಕೂತಿದ್ದಾರೆ. ಕಣ್ಣಿಗೆ ವಿಚಿತ್ರ ಗ್ಲಾಸ್ ಧರಿಸಿ ನೆಲವನ್ನೇ ದಿಟ್ಟಿಸುತ್ತಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ, ಸಿನಿಮಾ ಕಥೆ ಹೇಗಿರುಬಹುದು ಎಂಬ ಕುತೂಹಲವೂ ಮೂಡುತ್ತದೆ.
ಇನ್ನು ಈ ಸಿನಿಮಾದಲ್ಲಿ ಪ್ರಭಾಸ್ ಜತೆಗೆ ಅಮಿತಾಬ್ ಬಚ್ಚನ್ (Amitabh Bachchan), ಕಮಲ್ ಹಾಸನ್ (Kamal Haasan), ದೀಪಿಕಾ ಪಡುಕೋಣೆ (Deepika Padukone), ದಿಶಾ ಪಟಾಣಿ (Disha Patani) ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೂಲ ತೆಲುಗು ಸೇರಿ ಕನ್ನಡ, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಇದೇ ವರ್ಷದ ಮೇ 9ರಂದು ಕಲ್ಕಿಯ ದರ್ಶನವಾಗಲಿದೆ. ವೈಜಯಂತಿ ಮೂವೀಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.
#Hyderabad #tollywood #movie #prabhas #actor

