ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ನಾಡಿನಾದ್ಯಂತ ಭಾರತ ಗೆಲ್ಲಲಿ ಎಂದು ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಟೀಂ ಇಂಡಿಯಾಗೆ ಅಭಿಮಾನಿಗಳು ಶುಭ ಹಾರೈಕೆ ಮಾಡಿದ್ದಾರೆ.. ಟೀಂ ಇಂಡಿಯಾ ಗೆಲುವಿಗಾಗಿ ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಕರವೇ ಪ್ರವೀಣ್ ಶಟ್ಟಿ ಬಣದಿಂದ ಟೀಂ ಇಂಡಿಯಾ ಗೆಲುವಿಗಾಗಿ ಪೂಜೆ ನೆರವೇರಿಸಲಾಗಿದೆ.. ಜೈ ಹೋ ಇಂಡಿಯಾ, ಗೆದ್ದು ಬಾ ಇಂಡಿಯಾ, ಆಲ್ ದಿ ಬೆಸ್ಟ್ ಇಂಡಿಯಾ ಎಂದು ಜನರು ಜಯಘೋಷ ಮಾಡಿದ್ದಾರೆ.. ಇಂದು ಇಂಡೋ-ಕಿವೀಸ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತವೇ ಗೆಲ್ಲಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.. ಬಾಗಲಕೋಟೆ ವಿದ್ಯಾಗಿರಿಯ ಕಾಶಿ ವಿಶ್ವನಾಥನ ದೇಗುಲದಲ್ಲಿ ಭಾರತ ತಂಡದ ಗೆಲುವಿಗಾಗಿ ಪೂಜೆ ಸಲ್ಲಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಬೇಕು ಎಂದು ಹುಬ್ಬಳ್ಳಿಯಲ್ಲಿ ಭಾರತದ ಗೆಲುವಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ. ಹುಬ್ಬಳ್ಳಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ವಿಶೇಷ ಪೂಜೆ ನೆರವೇರಿಸಲಾಗಿದೆ. ಹುಬ್ಬಳ್ಳಿಯ ಸಾಯಿ ಬಾಬಾ ಮಂದಿರದಲ್ಲಿ ಪೂಜೆ ಮಾಡಿದ್ದು, ಭಾರತ – ನ್ಯೂಜಿಲೆಂಡ್ ನಡುವೆ ನಡೆಯಲಿರುವ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಗೆದ್ದು ಬಾ ಭಾರತ ಎಂದು ಘೋಷಣೆ ಕೂಗಿದ್ದಾರೆ. ತ್ರಿವರ್ಣ ಧ್ವಜ ಹಿಡಿದು ಘೋಷಣೆ ಕೂಗಿದ್ದು, ಬ್ಯಾಟ್ ಹಾಗೂ ಬಾಲ್ ಹಿಡಿದು ಪೂಜೆ ಸಲ್ಲಿಕೆ ಮಾಡಿದ್ದು ವಿಶೇಷ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಾವಳಿ ಭಾರತ ಗೆಲ್ಲಬೇಕು ಎಂದು ಕಲಬುರಗಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಾರತ್ ಚಾಂಪಿಯನ್ ಟ್ರೋಫಿ ಗೆಲ್ಲಲಿ ಅಂತ ಕಲಬುರ್ಗಿಯ ದೇವಲ್ ಗಣಗಾಪುರದಲ್ಲಿ ಅರ್ಚಕರಿಂದ ವಿಶೇಷ ಪೂಜೆ ಮಾಡಲಾಗಿದೆ. ಗಣಗಾಪುರದ ನಿರ್ಗುಣ ಮಠದಲ್ಲಿ ವಿಶೇಷ ಪೂಜೆ ನಡೆದಿದ್ದು, ಭಾರತ ಚಾಂಪಿಯನ್ ಟ್ರೋಫಿ ಗೆಲ್ಲಲಿ ಅಂತ ಪ್ರಾರ್ಥನೆ ಮಾಡಿದ್ದಾರೆ. 5 ಕ್ಕೂ ಹೆಚ್ಚು ಜನ ಅರ್ಚಕರು ಪೂಜೆ ನೆರವೇರಿಸಿದ್ದಾರೆ. ದೇವಲ ಗಾನಗಾಪುರದಲ್ಲಿ ಇರುವ ದತ್ತಾತ್ರೇಯ ದೇವಸ್ಥಾನದಲ್ಲಿ ಜನರು ವಿಶೇಷವಾಗಿ ಪೂಜೆ ಸಲ್ಲಿಸಿ ಭಾರತಕ್ಕೆ ಶುಭ ಕೋರಿದ್ದಾರೆ.

ಇಂದಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಹಾಸನದಲ್ಲೂ ಭಾರತದ ಗೆಲುವಿಗಾಗಿ ಅಭಿಮಾನಿಗಳ ಹಾರೈಸಿದ್ದಾರೆ. ಕಳೆದ ಎಲ್ಲಾ ಪಂದ್ಯಗಳನ್ನ ಭಾರತ ಗೆದ್ದಿದೆ. ಎಲ್ಲಾ ಆಟಗಾರರೂ ಚನ್ನಾಗಿ ಆಟ ಆಡುತ್ತಿದ್ದಾರೆ. ಇಂದಿನ ಪಂದ್ಯದಲ್ಲೂ ಭಾರತ ಗೆದ್ದೇ ಗೆಲ್ಲುತ್ತೆದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.

ವಿಜಯಪುರದಲ್ಲೂ ಕ್ರಿಕೆಟ್ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ. ಭಾರತ ನ್ಯೂಜಿಲೆಂಡ್ ಐಸಿಸಿ ಚಾಂಪಿಯನ್ಸ್ ಟ್ರೋಪಿ ಫೈನಲ್ ಪಂದ್ಯದಲ್ಲಿ ಗೆಲ್ಲಬೇಕು ಎಂದು ಭಾರತ ತಂಡಕ್ಕೆ ಶುಭ ಕೋರಿದ ಕ್ರೀಡಾಪಟುಗಳು, ವಿದ್ಯಾರ್ಥಿಗಳು. ಜೊತೆಗೆ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ಟೀ ಇಂಡಿಯಾ ಫೈನಲ್ ಪಂದ್ಯದಲ್ಲೂ ಗೆಲುವಿನ ದಡ ಸೇರುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.