ಬೆಳಗಾವಿಯಲ್ಲಿ (Belagavi) ಮರಾಠಿ ಪುಂಡರ ಹಾವಳಿ ಮಿತಿ ಮೀರಿದ್ದರೂ ಕೂಡ ನಮ್ಮ ಜನ ಪ್ರತಿನಿಧಿಗಳು ಮಾತ್ರ ನಾಲಗೆ ಸತ್ತವರಂತೆ ಸುಮ್ಮನಿದ್ದಾರೆ. ಈ ಮುಂಚೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮರಾಠಿ ಪ್ರೇಮ ಪ್ರದರ್ಶನ ಮಾಡಿದ್ದಾಯ್ತು. ಇದೀಗ ಮಾಜಿ ಸಚಿವೆ ಶಶಿಕಲಾ ಜೊಲ್ಲೆ (Shashikala jolle) ಮರಾಠಿ ಭಾಷಾ ಪ್ರೇಮ ಮೆರೆದ್ದಾರೆ.

ಹೌದು, ಶಶಿಕಲಾ ಜೊಲ್ಲೆ 11 ಕೋಟಿ 50 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ್ರು. ಆದ್ರೆ ಈ ಕಾರ್ಯಕ್ರಮದಲ್ಲಿ ಮರಾಠಿ ಬ್ಯಾನರ್ ಕಾಣಿಸಿಕೊಂಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕೋಟಿ 50 ಲಕ್ಷ ರೂ ಅನುದಾನದಲ್ಲಿ ಬೆನಾಡಿ ಗ್ರಾಮದಿಂದ ಕುನ್ನೂರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಭಾಗಿಯಾಗಿದ್ರು. ಕರ್ನಾಟಕ ರಾಜ್ಯ ಸರ್ಕಾರದ ಅನುದಾನದಲ್ಲಿ ಮರಾಠಿ ಭಾಷಾಭಿಮಾನ ಮೆರೆದ ಜೊಲ್ಲೆ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕ್ತಿದ್ದಾರೆ.