
ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ದ್ವೇಷ ಜೋರಾಗಿದೆ. ಕಾಂಗ್ರೆಸ್ನಿಂದ ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆ ನೀಡಲಾಗ್ತಿದೆ ಎಂದು ಕೆ.ಆರ್ ಪೇಟೆ ಶಾಸಕ ಹೆಚ್.ಟಿ.ಮಂಜು ಗಂಭೀರ ಆರೋಪ ಮಾಡಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಲಿಕ್ಕರ್ ಲಾಬಿಗಳಿಂದ ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆ ಕೊಡಲಾಗಿದೆ. ಕಾನೂನು ಬದ್ಧವಾಗಿ CL-7 ಗೆ ಅರ್ಜಿ ಸಲ್ಲಿಸಿದರೂ ರಿಜೆಕ್ಟ್ ಮಾಡಲಾಗ್ತಿದೆ. ಎಲ್ಲಾ ಇಲಾಖೆಯಿಂದ ಕ್ಲಿಯರ್ CL-7 ಗೆ NOC ಆಗಿದ್ದರು, ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದಿದ್ದಾರೆ.

ಕೆ.ಆರ್ ಪೇಟೆ ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಅವಕಾಶ ನೀಡದಂತೆ ಒತ್ತಡ ಹೇರಿದ್ದು, ಜೆಡಿಎಸ್ ಕಾರ್ಯಕರ್ತರೆಂದು ಅವಕಾಶ ನೀಡದ ಅಧಿಕಾರಿಗಳು ಎಂದು ಅಧಿಕಾರಿಗಳ ವಿರುದ್ದ ಶಾಸಕ ಹೆಚ್.ಟಿ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಂದರ್ ಎಂಬ ಯುವಕ ತನ್ನ ತಂದೆ ಮಹೇಶ್ ಹೆಸರಲ್ಲಿ CL-7 ಗೆ ಅರ್ಜಿ ಹಾಕಿದ್ದಾರೆ. ಕೋಟಿ ಖರ್ಚು ಮಾಡಿ ಬಿಲ್ಡಿಂಗ್ ಕಟ್ಟಿ, ಅರ್ಜಿ ಹಾಕಿದರೂ ಅನುಮತಿ ಸಿಕ್ಕಿಲ್ಲ ಯಾಕೆ ಎಂದು ಮಂಡ್ಯದ ಅಬಕಾರಿ ಕಚೇರಿಗೆ ಭೇಟಿ ನೀಡಿದ ಶಾಸಕ ಹೆಚ್.ಟಿ.ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಬಕಾರಿ ಉಪ ಆಯುಕ್ತ ಡಾ. ಆರ್ ನಾಗಶಯನ ಅವರಿಗೆ ಮನವಿ ಕೊಟ್ಟ ಶಾಸಕ ಮಂಜು, ಸ್ಥಳೀಯರಿಗೆ ಲಿಕ್ಕರ್ ಲಾಬಿಗಳಿಂದ ತೊಂದರೆಯಾಗ್ತಿದೆ. ನಿಯಮಾನುಸಾರವಾಗಿ CL7 ಗೆ ಅನುಮತಿ ಕೋರಿದ್ದರು. ತಾಲ್ಲೂಕಿನಲ್ಲಿ ನಿಯಮ ಬಾಹಿರವಾಗಿ ಲಿಕ್ಕರ್ ಲಾಬಿ ನಡೆಯುತ್ತಿದೆ. ಇದರ ಬಗ್ಗೆ ಕೆ.ಡಿ.ಪಿ ಸಭೆಯಲ್ಲೂ ಚರ್ಚಿಸಿ ಡಿಸಿ ಗಮನಕ್ಕೂ ತರಲಾಗಿದೆ.
ಕಾನೂನು ಬದ್ದವಾಗಿ ಅರ್ಜಿ ಸಲ್ಲಿಸಿದವರಿಗೆ ಅವಕಾಶ ಕಲ್ಪಿಸುತ್ತಿಲ್ಲ. ಅಬಕಾರಿ ಇಲಾಖೆ ಮಾಡುವ ಕೆಲಸವನ್ನು ನಾವೇ ಮಾಡಿ ಕಮಿಷನರ್ ಹಾಗೂ ಡಿಸಿಗೆ ವಿಡಿಯೋ, ಆಡಿಯೋ ಸಹಿತ ಮನವಿ ಕೊಟ್ಟಿದ್ದೇವೆ. ಆದರೆ ಇದುವರೆಗೆ ಯಾವ ಕ್ರಮವಹಿಸಿಲ್ಲ ಎಂದಿದ್ದಾರೆ.

ಸುಂದರ್ ಎಂಬ ಯುವಕ ತಂದೆ ಮಹೇಶ್ ಹೆಸರಲ್ಲಿ CL7 ಗೆ ಅರ್ಜಿ ಹಾಕಿ ಒಂದೂವರೆ ಕೋಟಿ ಖರ್ಚು ಮಾಡಿ ಬಿಲ್ಡಿಂಗ್ ಕಟ್ಟಿದ್ದಾರೆ. ಕಾನೂನು ಬದ್ದವಾಗಿದ್ದರು ಅವರಿಗೆ ಲೈಸೆನ್ಸ್ ಕೊಟ್ಟಿಲ್ಲ. ಬಡ್ಡಿ ಕಟ್ಟಲಾಗದೆ ಅವರ ಕುಟುಂಬ ವಿಷ ಕುಡಿಯುವ ಪರಿಸ್ಥಿತಿ ಇದೆ. ಜೆಡಿಎಸ್ ಕಾರ್ಯಕರ್ತನೆಂದ ಅಧಿಕಾರಿಗಳು ಅವಕಾಶ ಕೊಡ್ತಿಲ್ಲ. ಜೆಡಿಎಸ್ ಕಾರ್ಯಕರ್ತರು ಯಾರು ವ್ಯವಹಾರ ಮಾಡುವಂತೆ ಇಲ್ವಾ..? ಜೆಡಿಎಸ್ ಕಾರ್ಯಕರ್ತರು ಅನ್ನೋ ಕಾರಣಕ್ಕೆ ತೊಂದರೆ ಕೊಡ್ತಿದ್ದಾರೆ. ಎಲ್ಲರಿಗೂ CL-7 ಗೆ ಅವಕಾಶ ಕೊಟ್ಟಿದ್ದಾರೆ. ಕಾಂಗ್ರೆಸ್ ಮುಖಂಡನ ಮಾತನ್ನ ರಾಜ್ಯಮಟ್ಟದಲ್ಲಿ ಸಚಿವರು ಕೇಳ್ತಾರಂತೆ. ಸರ್ಕಾರ ಎಲ್ಲಿಗೆ ಹೋಗಿ ನಿಂತಿದೆ..? ಇಂತಹ ಕೆಟ್ಟ ವ್ಯವಸ್ಥೆ ಯಾಕೆ..? ಇದೇ ರೀತಿ ಮುಂದುವರಿದರೆ ಈಬಗ್ಗೆ ಮುಂದೆ ದೊಡ್ಡ ಹೋರಾಟ ಮಾಡ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
