ಶ್ರೀರಾಮ ಸೇನೆಯ (Sri ram sene) ಮುಖಂಡ ಪ್ರಮೋದ್ ಮುತಾಲಿಕ್ ಗೆ (Promod mutalik) ಶಿವಮೊಗ್ಗ ನಗರ ಪ್ರವೇಶಕ್ಕೆ ತಡೆಯೊಡ್ಡಲಾಗಿದೆ. ಶಿವಮೊಗ್ಗ (Shimogga) ಹೊರ ವಲಯದ ಹೊನ್ನಾಳಿ ರಸ್ತೆಯ ಬಳಿ ಮುತಾಲಿಕ್ ರನ್ನು ಪೊಲೀಸರು ತಡೆದಿದ್ದಾರೆ.ಇಲ್ಲಿನ ಚೌಡಮ್ಮನ ದೇವಸ್ಥಾನದ ಬಳಿ ಮುತಾಲಿಕ್ ರನ್ನ ಪೊಲೀಸರು ತಡೆದಿದ್ದಾರೆ.

ಶಿವಮೊಗ್ಗ ನಗರ ಪ್ರವೇಶಕ್ಕೆ ಯಾವುದೇ ಪೂರ್ವ ಸೂಚನೆ ಇಲ್ಲದೆ ಪ್ರವೇಶ ನೀಡಲು ಮುಂದಾಗಿದ್ದಕ್ಕೆ ಪೊಲೀಸರು ಮುತಾಲಿಕ್ ರನ್ನು ತಡೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುಸ್ತಕ ಬಿಡುಗಡೆ ಹಾಗೂ ಪತ್ರಿಕಾ ಗೋಷ್ಠಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮುತಾಲಿಕ್ ರನ್ನ ತಡೆಯಲಾಗಿದೆ.

ಲವ್ ಜಿಹಾದ್ ಕುರಿತ ಎರಡನೇ ಆವೃತ್ತಿಯ ಪುಸ್ತಕ ಬಿಡುಗಡೆಗೆ ಪ್ರಮೋದ್ ಮುತಾಲಿಕ್ ಆಗಮಿಸಿದ್ದರು. ಈ ವೇಳೆ ಪ್ರಮೋದ್ ಮುತಾಲಿಕ್ ಭೇಟಿಗೆ ಬಿಜೆಪಿ ಶಾಸಕ ಎಸ್.ಎನ್ ಚೆನ್ನಬಸಪ್ಪ ಕೂಡ ಆಗಮಿಸಿದ್ದರು. ಶಾಸಕ ಚನ್ನಬಸಪ್ಪಡಿಸಿಯೊಂದಿಗೆ ಮಾತುಕತೆ ನಡೆಸಿದ ನಂತರವೂ ನಗರ ಪ್ರವೇಶಕ್ಕೆ ಡಿಸಿ ಗುರುದತ್ತ ಹೆಗಡೆ ಅನುಮತಿ ನಿರಾಕರಿಸಿದ್ದಾರೆ.